ಕೇರಳದ ವಿಳಿಂಜಮ್ ಪೋರ್ಟ್; ಭಾರತದ ಮೊದಲ ಟ್ರಾನ್ಸ್​ಶಿಪ್ಮೆಂಟ್ ಬಂದರು ಕಾರ್ಯಾಚರಣೆಗೆ ಒಪ್ಪಿಗೆ ಪಡೆದ ಅದಾನಿ ಗ್ರೂಪ್

First Transshipment port at Vizhinjam, Kerala: ಅದಾನಿ ಗ್ರೂಪ್ ನಿರ್ಮಿಸಿರುವ ಕೇರಳದ ವಿಳಿಂಜಮ್ ಪೋರ್ಟ್ ಅನ್ನು ಟ್ರಾನ್ಸ್​ಶಿಪ್ಮೆಂಟ್ ಕಾರ್ಯಾಚರಣೆಗೆ ಬಳಸಲು ಕೇಂದ್ರ ಬಂದರು ಸಚಿವಾಲಯ ಒಪ್ಪಿಗೆ ನೀಡಿದೆ. ಇನ್ನು ಮೂರು ತಿಂಗಳಲ್ಲಿ ಸಿಬಿಐಸಿಯಿಂದ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಶಿಪ್ಪಿಂಗ್ ಮಿನಿಸ್ಟ್ರಿ ಸಮ್ಮತಿ ನೀಡಿರುವುದರಿಂದ ಸುಂಕ ಇಲಾಖೆ ವಿಳಿಂಜಮ್ ಪೋರ್ಟ್​ನಲ್ಲಿ ಕಚೇರಿ ಸ್ಥಾಪಿಸಿ ಸುಂಕ ವಸೂಲಾತಿ ಕಾರ್ಯ ಆರಂಭಿಸಬಹುದು. ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ನಿರ್ಮಾಣದಿಂದ ಸರಕು ಸಾಗಣೆ ವೆಚ್ಚ ಕಡಿಮೆಗೊಳ್ಳುವ ಸಾಧ್ಯತೆ ಇದೆ.

ಕೇರಳದ ವಿಳಿಂಜಮ್ ಪೋರ್ಟ್; ಭಾರತದ ಮೊದಲ ಟ್ರಾನ್ಸ್​ಶಿಪ್ಮೆಂಟ್ ಬಂದರು ಕಾರ್ಯಾಚರಣೆಗೆ ಒಪ್ಪಿಗೆ ಪಡೆದ ಅದಾನಿ ಗ್ರೂಪ್
ವಿಳಿಂಜಮ್ ಪೋರ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2024 | 2:51 PM

ನವದೆಹಲಿ, ಏಪ್ರಿಲ್ 26: ಕೇರಳದ ತಿರುವನಂತಪುರಂನಲ್ಲಿರುವ ವಿಳಿಂಜಮ್ ಬಂದರನ್ನು (vizhinjam port) ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಆಗಿ ಕಾರ್ಯಾಚರಿಸಲು ಬಂದರು ಸಚಿವಾಲಯ ಒಪ್ಪಿಗೆ ನೀಡಿದೆ. ಅದಾನಿ ಗ್ರೂಪ್ ಈ ಪೋರ್ಟ್ ಅನ್ನು ನಿರ್ಮಿಸಿದೆ. ಪೋರ್ಟ್​ನ ವ್ಯವಹಾರಗಳನ್ನೂ ಅದಾನಿ ಕಂಪನಿ ನಿರ್ವಹಿಸಲಿದೆ. ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಆಗಿ ನಿರ್ವಹಿಸಲು ಸಚಿವಾಲಯದ ಒಪ್ಪಿಗೆ ಸಿಕ್ಕಿರುವುದರಿಂದ ಈಗ ಸುಂಕ ಇಲಾಖೆ ವಿಳಿಂಜಮ್ ಪೋರ್ಟ್​ನಲ್ಲಿ ಕಚೇರಿ ಸ್ಥಾಪಿಸಲು ಅನುವು ಆಗುತ್ತದೆ. ಮುಂದಿನ ಮೂರು ತಿಂಗಳೊಳಗೆ ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿ (CBIC) ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಇಕಾನಿಮಿಕ್ ಟೈಮ್ಸ್ ಪತ್ರಿಕೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ.

ಅದಾನಿ ಗ್ರೂಪ್​ಗೆ ಸೇರಿದ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಕಂಪನಿ 2015ರಲ್ಲಿ ವಿಳಿಂಜಮ್​ನಲ್ಲಿ ಅಂತಾರಾಷ್ಟ್ರೀಯ ಟ್ರಾನ್ಸ್​ಶಿಪ್ಮೆಂಟ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು. ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ಐದು ವರ್ಷ ವಿಳಂಬವಾಗಿ ಇದು ಕಾರ್ಯಾರಂಭಿಸಲು ಸಿದ್ಧವಾಗಿದೆ.

ಇದನ್ನೂ ಓದಿ: ತಲೆ ನೋವಾಗಿದ್ದ ನೌಕರಿ ಬಿಟ್ಟ ಬಳಿಕ ಡೋಲು ಬಡಿಯುತ್ತಾ, ಬಾಸ್​ ಎದುರು ಡ್ಯಾನ್ಸ್​ ಮಾಡಿ ಹೊರಟ ಸಿಬ್ಬಂದಿ

ಏನಿದು ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್?

ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಎಂದರೆ ಒಂದು ರೀತಿಯಲ್ಲಿ ಹಡಗು ನಿಲ್ದಾಣ. ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಸರಕುಗಳನ್ನು ರವಾನಿಸಲು ಫೀಡರ್ ಸರ್ವಿಸ್ ರೀತಿ ಈ ಪೋರ್ಟ್ ಅನ್ನು ಬಳಸಲಾಗುತ್ತದೆ. ಉದಾಹರಣೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸರಕುಗಳನ್ನು ಸಾಗಿಸಲು ಕೆಲವೊಮ್ಮೆ ನೇರ ಹಡಗು ಸಂಚಾರ ಇರುವುದಿಲ್ಲ. ಬೇರೆ ಬೇರೆ ಹಡಗುಗಳ ಮೂಲಕ ಸರಕು ಸಾಗಿಸಬೇಕಾಗುತ್ತದೆ. ಉದಾಹರಣೆಗೆ, ಬೆಂಗಳೂರಿನಿಂದ ನಿಮ್ಮ ಊರಿಗೆ ಬಸ್ಸಿನಲ್ಲಿ ಹೋಗಬೇಕಾದರೆ ನಿಮ್ಮ ಏರಿಯಾದಿಂದ ಬಸ್ ಹತ್ತಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಬೇಕು. ಅಲ್ಲಿಂದ ನಿಮ್ಮ ಊರಿನ ಬಸ್ ಹತ್ತಬೇಕು. ಸಮೀಪದ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಅಲ್ಲಿಂದ ನಿಮ್ಮ ಊರಿಗೆ ಇನ್ನೊಂದು ಬಸ್ ಅಥವಾ ವಾಹನದಲ್ಲಿ ಹೋಗಬೇಕು. ಈ ರೀತಿಯಲ್ಲಿ ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್​ಗಳು ಕೆಲಸ ಮಾಡುತ್ತವೆ.

ಭಾರತದಲ್ಲಿ ಸಾಕಷ್ಟು ಸರಕುಗಳು ಹಡಗುಗಳ ಮೂಲಕ ಸಾಗಾಟ ಆಗುತ್ತಿರುತ್ತವಾದರೂ ಇಷ್ಟು ವರ್ಷ ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಇರಲಿಲ್ಲ. ಹೆಚ್ಚಿನ ಸರಕುಗಳು ಶ್ರೀಲಂಕಾದ ಕೊಲಂಬೋಗೆ ಹೋಗಿ ಅಲ್ಲಿಂದ ಕೈ ಬದಲಾಯಿಸಬೇಕಿತ್ತು. ಈಗ ವಿಳಿಂಜಮ್ ಭಾರತದ ಮೊದಲ ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಆಗಿದೆ.

ಕೇರಳದ ಕೊಚ್ಚಿ ಬಂದರು ಹಾಗೂ ನಿಕೋಬಾರ್ ದ್ವೀಪದ ಗ್ಯಾಲಾದಿಯಾ ಬೇ ಪೋರ್ಟ್ ಭಾರತದಲ್ಲಿ ಟ್ರಾನ್ಸ್​ಶಿಪ್ಮೆಂಟ್ ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಇತರ ಎರಡು ಪೋರ್ಟ್​ಗಳಾಗಿವೆ.

ಇದನ್ನೂ ಓದಿ: ಚೀನಾ ಅವಲಂಬನೆ ತಪ್ಪಿಸಲು ಟಾಟಾದಿಂದ ಮಹತ್ವದ ಹೆಜ್ಜೆ; ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆ

ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ನಿರ್ಮಾಣದಿಂದ ಏನು ಲಾಭ?

ಸರಕು ಸಾಗಣೆಯ ಸಮಯ ಮತ್ತು ವೆಚ್ಚ ಎರಡೂ ಉಳಿತಾಯ ಆಗುತ್ತದೆ. ಉದಾಹರಣೆಗೆ, ಬಾಂಗ್ಲಾದೇಶ ಭಾರತದಿಂದ ಸಾಕಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಬಾಂಗ್ಲಾದೇಶಕ್ಕೆ ಈ ಸರಕುಗಳನ್ನು ಸಾಗಿಸಬೇಕಾದರೆ ಅವುಗಳನ್ನು ಮುಂದ್ರಾ, ಕೊಚ್ಚಿ, ತೂತ್ತುಕುಡಿ ಅಥವಾ ಚೆನ್ನೈ ಪೋರ್ಟ್​ಗೆ ಕಳುಹಿಸಿ ಅಲ್ಲಿಂದ ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಇರುವ ಕೊಲಂಬೋ ಅಥವಾ ಸಿಂಗಾಪುರಕ್ಕೆ ಕಳುಹಿಸಿ, ಅಲ್ಲಿಂದ ಬಾಂಗ್ಲಾದೇಶದ ಚಿತ್ತಗಾಂಗ್​ಗೆ ಬೇರೆ ಹಡಗುಗಳಿಗೆ ಸರಕುಗಳನ್ನು ಹಾಕಿ ಕಳುಹಿಸಬೇಕು. ಇದರಿಂದ ಬಾಂಗ್ಲಾದೇಶಕ್ಕೆ ಆಮದು ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ, ಭಾರತದ ಉತ್ಪನ್ನಕ್ಕೆ ಬೇಡಿಕೆ ಕಡಿಮೆ ಆಗಬಹುದು. ಹೀಗಾಗಿ, ಭಾರತದಲ್ಲೇ ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಇದ್ದರೆ ಒಂದಷ್ಟು ಸಾಗಣೆ ವೆಚ್ಚ ಕಡಿಮೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ