AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಅವಲಂಬನೆ ತಪ್ಪಿಸಲು ಟಾಟಾದಿಂದ ಮಹತ್ವದ ಹೆಜ್ಜೆ; ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆ

Tata Electronics building hitech machines to reduce China dependency: ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಬೆಂಗಳೂರು ಮತ್ತು ಪುಣೆಯ ಎರಡು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಐಫೋನ್ ಕೇಸಿಂಗ್ ತಯಾರಿಸಲು ಬೇಕಾದ ಯಂತ್ರಗಳನ್ನು ತಯಾರಿಸಿದೆ. ಹೊಸೂರಿನ ತನ್ನ ಘಟಕದಲ್ಲಿ ಈ ಹೈ ಪ್ರಿಸಿಶನ್ ಯಂತ್ರಗಳನ್ನು ಪರೀಕ್ಷಿಸುತ್ತಿದೆ. ಇದು ಸಫಲವಾದರೆ ಟಾಟಾ ಸಂಸ್ಥೆಯ ದೊಡ್ಡ ಯೋಜನೆಯ ಒಂದು ಭಾಗ ಯಶಸ್ವಿಯಾಗುತ್ತದೆ. ಐಫೋನ್ ತಯಾರಿಕೆಗೆ ಬೇಕಾದ ಬಿಡಿಭಾಗಗಳ ಉದ್ದಿಮೆಗಳನ್ನು ಭಾರತದಲ್ಲೇ ನಿರ್ಮಿಸುವುದು ಟಾಟಾದ ಗುರಿಯಾಗಿದೆ. ಇದರಿಂದ ಟಾಟಾಗೆ ಮಾತ್ರವಲ್ಲ, ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೂ ಪುಷ್ಟಿ ಸಿಕ್ಕಂತಾಗುತ್ತದೆ.

ಚೀನಾ ಅವಲಂಬನೆ ತಪ್ಪಿಸಲು ಟಾಟಾದಿಂದ ಮಹತ್ವದ ಹೆಜ್ಜೆ; ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆ
ಐಫೋನ್ ತಯಾರಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2024 | 10:37 AM

Share

ನವದೆಹಲಿ, ಏಪ್ರಿಲ್ 26: ಐಫೋನ್ ತಯಾರಿಸುತ್ತಿರುವ ಮೊದಲ ಭಾರತೀಯ ಕಂಪನಿ ಎನಿಸಿರುವ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ (Tata Electronics) ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಐಫೋನ್​ನ ಕೇಸಿಂಗ್ ತಯಾರಿಸಲು ಬಳಸಲಾಗುವ ಹೈಟೆಕ್ ಯಂತ್ರಗಳನ್ನು (Hi precision machines) ತಯಾರಿಸಲು ಸಜ್ಜಾಗಿದೆ. ಇವು ಬಹಳ ಸಂಕೀರ್ಣ ಎನಿಸಿದ ಹೈ ಪ್ರಿಸಿಶನ್ ಯಂತ್ರಗಳಾಗಿದ್ದು ಭಾರತದಲ್ಲಿ ಈ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುವ ಕಂಪನಿಗಳ ಸಂಖ್ಯೆ ಬಹಳ ಕಡಿಮೆ. ಐಫೋನ್ ಕೇಸಿಂಗ್ ತಯಾರಿಕೆಯಲ್ಲಿ ತೊಡಗಿರುವ ಬಹುತೇಕ ಎಲ್ಲಾ ಕಂಪನಿಗಳು ಈ ಮೆಷೀನ್​ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತವೆ. ಟಾಟಾ ಸಂಸ್ಥೆಯೇ ಖುದ್ದಾಗಿ ಈ ಯಂತ್ರಗಳನ್ನು ತಯಾರಿಸಲಿದೆ. ಇದರಿಂದ ಚೀನಾ ಅವಲಂಬನೆ ತಗ್ಗುತ್ತದೆ. ಇದರ ಜೊತೆಗೆ ಈ ಹೈ ಪ್ರಿಸಿಶನ್ ಮೆಷಿನ್​ಗಳನ್ನು ಟಾಟಾ ತನ್ನ ಘಟಕಗಳಿಗೆ ಬಳಸಿಕೊಳ್ಳುವುದು ಮಾತ್ರವಲ್ಲ, ಬೇರೆ ಐಫೋನ್ ತಯಾರಕ ಸಂಸ್ಥೆಗಳಿಗೆ ಸರಬರಾಜು ಮಾಡಬಹುದು.

ಸಂಕೀರ್ಣವಾದ ಈ ಹೈಟೆಕ್ ಮೆಷೀನ್​ಗಳ ಅಭಿವೃದ್ಧಿಗೆ ಟಾಟಾ ಎರಡು ಭಾರತೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು ಮತ್ತು ಪುಣೆ ಮೂಲದ ಈ ಎರಡು ಕಂಪನಿಗಳು ಈ ಪ್ರಿಸಿಶನ್ ಮೆಷಿನ್​ಗಳನ್ನು ತಯಾರಿಸಿಕೊಟ್ಟಿವೆ. ಬೆಂಗಳೂರು ತಮಿಳುನಾಡು ಗಡಿಭಾಗದ ಹೊಸೂರಿನಲ್ಲಿರುವ ತನ್ನ ಘಟಕದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಈ ಮೆಷೀನ್​ಗಳನ್ನು ಹಂತ ಹಂತವಾಗಿ ಪರೀಕ್ಷಿಸುತ್ತಿದೆ.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ತೆರಿಗೆ ಬರಬೇಕು: ವರ್ಷದ ಹಿಂದೆ ಹೇಳಿದ್ದ ನಿಖಿಲ್ ಕಾಮತ್ ವಿಡಿಯೋ ಈಗ ವೈರಲ್

ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಪುಷ್ಟಿ

ಭಾರತದಲ್ಲಿರುವ ಕಂಪನಿಗಳು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಮರ್ಥ್ಯ ಹೊಂದಿವೆ. ಇದನ್ನು ಬಳಸಿ ಟಾಟಾ ಎಲೆಕ್ಟ್ರಾನಿಕ್ಸ್ ಐಫೋನ್ ತಯಾರಿಕೆಯ ಪ್ರಕ್ರಿಯೆಯಲ್ಲಿ ಪರದೇಶಗಳ ಅವಲಂಬನೆ ತಗ್ಗಿಸುವ ದೊಡ್ಡ ಪ್ಲಾನ್ ಹಾಕಿದೆ. ಮೊದಲಿಗೆ ಸಣ್ಣ ತಂತ್ರಜ್ಞಾನದ ಭಾಗಗಳನ್ನು ತಯಾರಿಸುವುದು. ಬಳಿಕ ಉನ್ನತ ತಂತ್ರಜ್ಞಾನದ ಭಾಗಗಳನ್ನು ತಯಾರಿಸುವುದು. ಇದು ಟಾಟಾ ಕಂಪನಿಯ ಗುರಿಯಾಗಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಸಂಪತ್ತು ಕುಸಿತ; ಮೇಲೇರಿದ ಎಕ್ಸಿಸ್ ಬ್ಯಾಂಕ್

ಭಾರತದಲ್ಲಿ ಐಫೋನ್ ತಯಾರಿಸಲಾಗುತ್ತಿದೆಯಾದರೂ ಬಿಡಿಭಾಗಗಳು ಮತ್ತು ಮೆಷೀನ್​ಗಳಿಗೆ ಚೀನಾದ ಕಂಪನಿಗಳನ್ನು ಅವಲಂಬಿಸಲಾಗುತ್ತಿದೆ. ಟಾಟಾದ ಈ ಯೋಜನೆ ಯಶಸ್ವಿಯಾದರೆ ಐಫೋನ್ ತಯಾರಿಕೆಯ ಸುತ್ತಲಿನ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಭಾರತದಲ್ಲೇ ಇರಲಿದೆ. ಜಾಗತಿಕ ವಿದ್ಯಮಾನಗಳು ಭಾರತದಲ್ಲಿ ಐಫೋನ್ ತಯಾರಿಕೆಗೆ ಅಡ್ಡಿ ಮಾಡುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ