AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ

Karnataka Milk Federation, Nandini Milk Records; ಅಮೆರಿಕದಲ್ಲಿ ನಡೆಯಲಿರುವ 2024ರ ಟಿ20 ಕ್ರಿಕೆಟ್ ವಿಶ್ವಕಪ್​ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ತಂಡಗಳಿಗೆ ಕೆಎಂಎಫ್ ಸಂಸ್ಥೆ ಪ್ರಾಯೋಜಕತ್ವ ವಹಿಸಿರುವುದು ಕೆಲವು ದಿನಗಳ ಹಿಂದೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಆದರೆ, ಇದೀಗ ತನ್ನದೇ ಆದ ದಾಖಲೆಯೊಂದನ್ನು ಮುರಿಯುವ ಮೂಲಕ ಕರ್ನಾಟಕದ ಕೆಎಂಎಫ್​ನ ನಂದಿನಿ ಬ್ರ್ಯಾಂಡ್​​ ಉತ್ಪನ್ನ ಸುದ್ದಿಯಾಗಿದೆ. ಕೆಎಂಎಫ್​​ ಹಾಗೂ ನಂದಿನಿ ಬ್ರ್ಯಾಂಡ್​​ ಉತ್ಪನ್ನ ಮಾಡಿರುವ ದಾಖಲೆ ಯಾವುದು? ಇಲ್ಲಿದೆ ವಿವರ

Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ
ಕೆಎಂಎಫ್ ನಂದಿನಿ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ
Ganapathi Sharma
| Edited By: |

Updated on:Apr 26, 2024 | 3:18 PM

Share

ಬೆಂಗಳೂರು, ಏಪ್ರಿಲ್ 26: ಕರ್ನಾಟಕ ಹಾಲು ಒಕ್ಕೂಟವು (KMF) ನಂದಿನಿ ಬ್ರ್ಯಾಂಡ್​ ಉತ್ಪನ್ನಗಳ (Nandini Brand Products) ಮಾರಾಟದಲ್ಲಿ ತನ್ನದೇ ದಾಖಲೆಯನ್ನು ಮುರಿದಿದೆ. ದಿನವೊಂದರಲ್ಲಿ 16.5 ಲಕ್ಷ ಲೀಟರ್ ಮೊಸರು ಮತ್ತು 51 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುವ ಮೂಲಕ ವಿನೂತನ ದಾಖಲೆ ಸೃಷ್ಟಿಸಿದೆ. ಹಾಲಿನ ಉತ್ಪನ್ನಗಳಷ್ಟೇ ಅಲ್ಲದೆ, ಕೆಎಂಎಫ್​ನ ಐಸ್‌ಕ್ರೀಮ್‌ಗಳು ಕೂಡ ಕಳೆದ ವರ್ಷಕ್ಕಿಂತ ಶೇ 40ರಷ್ಟು ಹೆಚ್ಚು ಮಾರಾಟವಾಗಿವೆ. ಈ ಬಾರಿ ಈವರೆಗಿನ ಅತ್ಯಧಿಕ ಐಸ್​ಕ್ರೀಮ್ ಮಾರಾಟವಾಗಿರುವುದಾಗಿ ವರದಿಯಾಗಿದೆ.

ಏಪ್ರಿಲ್ ಸಮಯದಲ್ಲಿ, ವಿಶೇಷವಾಗಿ ಏಪ್ರಿಲ್ 9 ಮತ್ತು 15 ರ ನಡುವೆ ಯುಗಾದಿ, ರಾಮ ನವಮಿ ಮತ್ತು ಈದ್-ಉಲ್-ಫಿತರ್‌ನಂತಹ ಹಬ್ಬಗಳು ಒಂದರ ನಂತರ ಒಂದರಂತೆ ಬಂದವು. ಇದೂ ಸಹ ಮಾರಾಟ ಹೆಚ್ಚಲು ಕಾರಣವಾಗಿದೆ. ಹಾಲು ಮತ್ತು ಮೊಸರು ಪ್ಯಾಕೆಟ್‌ಗಳು ಬೇಗನೆ ಬಿಕರಿಯಾಗುವುದನ್ನು ಈ ವರ್ಷ ಕಾಣುತ್ತಿದ್ದೇವೆ. ಸಾಮಾನ್ಯವಾಗಿ, ಸಂಸ್ಥೆಯು ದಿನಕ್ಕೆ ಎರಡು ಬಾರಿ ಉತ್ಪನ್ನಗಳನ್ನು ಪೂರೈಸುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಬಾರಿ ಉತ್ಪನ್ನಗಳನ್ನು ಪೂರೈಸಲಾಗಿದೆ ಎಂದು ಕೆಎಂಎಫ್​​ನ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಹೆಚ್ಚುತ್ತಿರುವ ತಾಪಮಾನ ಕೂಡ ಮಾರಾಟದಲ್ಲಿ ಏರಿಕೆಗೆ ಕಾರಣ ಎಂದು ಅವರು ತಿಳಿಸಿದ್ದಾರೆ.

ಐಸ್‌ಕ್ರೀಂ ಮಾರಾಟದಲ್ಲಿ ಶೇ 40ರಷ್ಟು ಏರಿಕೆ

ಈ ಹಿಂದೆ ನಂದಿನಿ ಹಾಲು ಮಾರಾಟ ದಿನವೊಂದರಲ್ಲಿ 44 ಲಕ್ಷ ಲೀಟರ್ ದಾಟಿರಲಿಲ್ಲ. ಆದರೆ ಈ ವರ್ಷ ಒಂದೇ ದಿನದಲ್ಲಿ 48 ಲಕ್ಷ ಲೀಟರ್‌ ಮಾರಾಟವಾಗಿದೆ. ಮೊಸರು ಮತ್ತು ಮಜ್ಜಿಗೆ ಕೂಡ ಗಮನಾರ್ಹ ಮಾರಾಟ ದಾಖಲಿಸಿವೆ. ಈ ತಿಂಗಳು, ನಾವು ಮೊಸರು ಮಾರಾಟದಲ್ಲಿ ಎರಡು ಮೈಲಿಗಲ್ಲುಗಳನ್ನು ದಾಟಿದ್ದೇವೆ. ಮೊದಲ ವಾರದಲ್ಲಿ, ನಾವು 11.5 ಲಕ್ಷ ಲೀಟರ್ ಮಾರಾಟ ದಾಖಲಿಸಿದ್ದೇವೆ ಮತ್ತು ಐದು ದಿನಗಳಲ್ಲಿ, ಸಂಖ್ಯೆ 16.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಇದರಿಂದ ನಂದಿನಿ ಆದ್ಯತೆಯ ಬ್ರ್ಯಾಂಡ್ ಆಗಿರುವುದು ತಿಳಿದುಬರುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Nandini Milk: ಕೆಎಂಎಫ್​ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?

ಕೆಎಎಂಎಫ್ ಐಸ್ ಕ್ರೀಮ್ ಮಾರಾಟವು ಶೇ 40 ರಷ್ಟು ಹೆಚ್ಚಾಗಿದೆ ಮತ್ತು ನಿರಂತರವಾಗಿ ಸುಧಾರಿಸುತ್ತಿದೆ. ಐಸ್ ಕ್ರೀಂಗಳು ಒಂದು ವರ್ಷಕ್ಕೂ ಹೆಚ್ಚು ಶೆಲ್ಫ್-ಲೈಫ್ ಅನ್ನು ಹೊಂದಿರುತ್ತವೆ. ಹೀಗಾಗಿ ನಾವು ಬೇಗನೆ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:11 pm, Fri, 26 April 24