ನಾನು ನಂದಿನಿ, ಅಮೆರಿಕಾಗೆ ಬಂದಿವ್ನಿ… ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕೆಎಂಎಫ್ ಸ್ಪಾನ್ಸರ್

KMF Sponsoring Ireland and Scotland Teams at Upcoming T20 World Cup 2024: ಅಮೆರಿಕದಲ್ಲಿ ನಡೆಯಲಿರುವ 2024ರ ಟಿ20 ಕ್ರಿಕೆಟ್ ವಿಶ್ವಕಪ್​ನಲ್ಲಿ ಐರ್ಲ್ಯಾಂಡ್ ಮತ್ತು ಸ್ಕಾಟ್ಲ್ಯಾಂಡ್ ತಂಡಗಳಿಗೆ ಕೆಎಂಎಫ್ ಸಂಸ್ಥೆ ಪ್ರಾಯೋಜಕತ್ವ ವಹಿಸಿದೆ. ಈ ಎರಡು ತಂಡಗಳ ಆಟಗಾರರು ಆಟದ ವೇಳೆ ‘ನಂದಿನಿ’ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ. ಹಿರಿಯ ಕೈಗಾರಿಕೋದ್ಯಮಿ ಟಿ.ವಿ. ಮೋಹನದಾಸ್ ಪೈ ಕೆಎಂಎಫ್​ನ ಈ ನಡೆಯನ್ನು ಟೀಕಿಸಿದ್ದಾರೆ. ಕನ್ನಡಿಗರನ್ನು ಪ್ರೋತ್ಸಾಹಿಸುವುದರ ಬದಲು ಯಾರಿಗೂ ತಿಳಿಯದ ವಿದೇಶೀ ತಂಡಗಳಿಗೆ ಸ್ಪಾನ್ಸರ್ ಆಗಿದೆ ಎಂದು ಲೇವಡಿ ಮಾಡಿದ್ದಾರೆ.

ನಾನು ನಂದಿನಿ, ಅಮೆರಿಕಾಗೆ ಬಂದಿವ್ನಿ... ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕೆಎಂಎಫ್ ಸ್ಪಾನ್ಸರ್
ಕೆಎಂಎಫ್ ಹಾಲು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2024 | 11:27 AM

ಬೆಂಗಳೂರು, ಏಪ್ರಿಲ್ 21: ಕರ್ನಾಟಕ ಹಾಲು ಒಕ್ಕೂಟ ತನ್ನ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ (global market) ಕುದುರಿಸಲು ಮಹತ್ವದ ಹೆಜ್ಜೆ ಇರಿಸಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್​ಲೆಂಡ್ ಕ್ರಿಕೆಟ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ (sponsorship) ನೀಡಲಿದೆ. ಟೂರ್ನಿಯಲ್ಲಿ ಈ ತಂಡಗಳ ಆಟಗಾರರು ಪಂದ್ಯದ ವೇಳೆ ‘ನಂದಿನಿ’ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ. ಈ ಸ್ಪಾನ್ಸರ್​ಶಿಪ್ ಸಂಗತಿಯನ್ನು ಕೆಎಂಎಫ್​ನ ನಿರ್ವಾಹಕ ನಿರ್ದೇಶಕ ಎಂಕೆ ಜಗದೀಶ್ (MK Jagadish) ದೃಢಪಡಿಸಿದ್ದಾರೆ. ‘ಸ್ಟಾಟ್​ಲ್ಯಾಂಡ್ ಮತ್ತು ಐರ್​ಲ್ಯಾಂಡ್ ತಂಡಗಳನ್ನು ಸ್ಪಾನ್ಸರ್ ಮಾಡುತ್ತಿದ್ದೇವೆ. ಆ ಆಟಗಾರರು ಪಂದ್ಯದ ವೇಳೆ ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ’ ಎಂದು ಜಗದೀಶ್ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆ ಮೇಲೆ ಕಣ್ಣಿಟ್ಟ ಕೆಎಂಎಫ್

ಭಾರತದಲ್ಲಿ ಅಮೂಲ್ ಹಾಗೂ ನೆರೆ ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಹಾಲು ಒಕ್ಕೂಟಗಳಿಂದ ಪೈಪೋಟಿ ಎದುರಿಸುತ್ತಿರುವ ಮತ್ತು ಉತ್ಪಾದನೆಗಿಂತ ಕಡಿಮೆ ಹಾಲು ಮಾರಾಟ ಕಾಣುತ್ತಿರುವ ಕೆಎಂಎಫ್ ಜಾಗತಿಕ ಮಾರುಕಟ್ಟೆ ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವಕಪ್​ನಲ್ಲಿ ಎರಡು ತಂಡಗಳ ಪ್ರಾಯೋಜಕತ್ವ ವಹಿಸಿಕೊಂಡಿರುವುದು ಒಂದು ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ: ಉಚಿತ ಸ್ಕೀಮ್​ಗಳ ಮೇಲೆ ಶ್ವೇತಪತ್ರ; ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಸಹಮತ ಮೂಡಿಸಲಿ: ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್

‘ಮಧ್ಯಪ್ರಾಚ್ಯ ಭಾಗದಲ್ಲಿ ನಮ್ಮ ಮಳಿಗೆಗಳಿವೆ. ಸಿಂಗಾಪುರದಲ್ಲೂ ಇದೆ. ಅಮೆರಿಕದಲ್ಲಿ ನಮ್ಮ ಸಿಹಿತಿಂಡಿಗಳನ್ನು ಮಾರುತ್ತಿದ್ದೇವೆ,’ ಎಂದು ಕೆಎಂಎಫ್​ನ ಸದ್ಯದ ಜಾಗತಿಕ ಮಾರುಕಟ್ಟೆ ಸ್ಥಿತಿಯ ಮಾಹಿತಿಯನ್ನು ಅದರ ಎಂಡಿ ಜಗದೀಶ್ ನೀಡಿದ್ದಾರೆ.

ಕೆಎಂಎಫ್ ನಡೆಗೆ ಮೋಹನ್​ದಾಸ್ ಪೈ ಟೀಕೆ

ಸ್ಕಾಟ್​ಲ್ಯಾಂಡ್ ಮತ್ತು ಐರ್ಲ್ಯಾಂಡ್ ತಂಡಗಳನ್ನು ಪ್ರಾಯೋಜಿಸುವ ಕೆಎಂಎಫ್ ಸಂಸ್ಥೆಯ ನಡೆಯನ್ನು ಮಾಜಿ ಇನ್ಫೋಸಿಸ್ ಸಿಎಫ್​ಒ ಟಿ.ವಿ. ಮೋಹನದಾಸ್ ಪೈ ಕಟುವಾಗಿ ಟೀಕಿಸಿದ್ದಾರೆ.

‘ಕರ್ನಾಟಕ ರಣಜಿ ತಂಡ, ಕರ್ನಾಟಕದ ಕ್ರೀಡಾಪಟುಗಳು, ಕಲಾವಿದರಿಗೆ ಯಾಕೆ ಸ್ಪಾನ್ಸರ್ ಆಗಬಾರದು? ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿವೇತನ ಕೊಡಬಹದಿತ್ತಲ್ಲವಾ? ಕನ್ನಡಿಗರ ತೆರಿಗೆ ಹಣ, ಸಬ್ಸಿಡಿಯಿಂದ ಪಡೆದ ಹಣವನ್ನು ಕೆಎಂಎಫ್ ಸಂಸ್ಥೆ ಯಾರಿಗೂ ತಿಳಿಯದ ವಿದೇಶೀ ತಂಡಗಳ ಮೇಲೆ ವ್ಯಯಿಸುತ್ತಿದೆಯಲ್ಲ,’ ಎಂದು ಎಕ್ಸ್ ಪೋಸ್ಟ್​ನಲ್ಲಿ ಪೈ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕೋರಮಂಗಲದಲ್ಲಿದೆ ಕುಬೇರರ ಏರಿಯಾ; ದಾಖಲೆ ಬೆಲೆಗೆ ಮಾರಾಟವಾಗಿದೆ ನಿವೇಶನ

ಆದರೆ, ಮೋಹನದಾಸ್ ಪೈ ವಿರೋಧವನ್ನು ಕೆಎಂಎಫ್ ಎಂಡಿ ತಳ್ಳಿಹಾಕಿದ್ದಾರೆ. ಕೆಎಎಂಎಫ್​ನ ಶೇ. 85ರಷ್ಟು ಆದಾಯವು ರೈತರಿಗೇ ಸಂದಾಯವಾಗುತ್ತದೆ. ತಮ್ಮ ಉತ್ಪನ್ನದ ಪ್ರಚಾರಕ್ಕಾಗಿ ವಿಶ್ವಕಪ್​ನಲ್ಲಿ ಪ್ರಾಯೋಜಕರಾಗಲು ನಿರ್ಧರಿಸಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.

ಕೆಎಂಎಫ್ ಮತ್ತು ನಂದಿನಿ ಇತಿಹಾಸ

ವಿಶ್ವಬ್ಯಾಂಕ್​ನ ಡೈರಿ ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ಸಲುವಾಗಿ 1974ರಲ್ಲಿ ಕರ್ನಾಟಕದ ಡೈರಿ ಅಭಿವೃದ್ಧಿ ನಿಗಮ (ಕೆಡಿಡಿಸಿ) ಸ್ಥಾಪಿಸಲಾಯಿತು. 1984ರಲ್ಲಿ ಇದರ ಹೆಸರನ್ನು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಎಂದು ಬದಲಿಸಲಾಯಿತು. ರಾಜ್ಯಾದ್ಯಂತ ಅಸ್ತಿತ್ವದಲ್ಲಿದ್ದ 13 ಜಿಲ್ಲಾ ಹಾಲು ಸಹಕಾರಿ ಒಕ್ಕೂಟಗಳನ್ನು ಕೆಎಂಎಫ್​ಗೆ ಒಳಗೊಳ್ಳಲಾಯಿತು.

ಇನ್ನು, ನಂದಿನಿ ಎಂಬುದು ಕೆಎಂಎಫ್ ಉತ್ಪನ್ನಗಳ ಕಾರ್ಪೊರೇಟ್ ಬ್ರ್ಯಾಂಡ್ ಹೆಸರು. 1983ರಲ್ಲಿ ಈ ಬ್ರ್ಯಾಂಡ್ ಆರಂಭವಾಗಿತ್ತು. ನಂದಿನಿ ಎಂಬುದು ದೇವತೆಯ ಹೆಸರು. ಗೋವಿಗೆ ಇರುವ ಹೆಸರುಗಳಲ್ಲಿ ಒಂದು. ಹೀಗಾಗಿ, ಕೆಎಂಎಫ್ ತನ್ನ ಹಾಲಿನ ಉತ್ಪನ್ನಕ್ಕೆ ನಂದಿನಿ ಎಂದು ಬ್ರ್ಯಾಂಡಿಂಗ್ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Sun, 21 April 24

ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್