AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandini Milk: ಕೆಎಂಎಫ್​ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?

KMF Nandini Milk 50 Years History: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಂಘ ಕೆಎಂಎಫ್​ಗೆ ಐವತ್ತು ವರ್ಷ ಇತಿಹಾಸ ಇದೆ. 1974ರಲ್ಲಿ ಕರ್ನಾಟಕ ಡೈರಿ ಡೆವಲಪ್ಮೆಂಟ್ ಕಾರ್ಪೊರೇಶನ್ ಆಗಿ ಇದು ಸ್ಥಾಪನೆಯಾಗಿದ್ದು. 1984ರಲ್ಲಿ ಕೆಎಂಎಫ್ ಎಂದು ಇದರ ಹೆಸರು ಬದಲಿಸಲಾಯಿತು. 1983ರಲ್ಲಿ ನಂದಿನಿ ಬ್ರ್ಯಾಂಡ್ ಅನ್ನು ಪರಿಚಯಿಸಲಾಯಿತು. ಇವತ್ತು ಕೆಎಂಎಫ್​ನ ವಾರ್ಷಿಕ ಆದಾಯ 14,000 ಕೋಟಿ ರೂ ಆಗಿದೆ. ಅಮೂಲ್ ಬಿಟ್ಟರೆ ಕೆಎಂಎಫ್ ಭಾರತದ ಅತಿದೊಡ್ಡ ಹಾಲು ಒಕ್ಕೂಟವಾಗಿದೆ.

Nandini Milk: ಕೆಎಂಎಫ್​ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?
ಕೆಎಂಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Apr 23, 2024 | 12:45 PM

ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ (KMF) ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್​ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ಈ ಬಗ್ಗೆ ಟೀಕೆ ಕೇಳಿಬಂದರೂ ಭಾರತದಲ್ಲಿ ಹಾಲಿನ ಸಂಸ್ಥೆಯೊಂದು ಈ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯ. ಕೆಎಂಎಫ್​ನ 50 ವರ್ಷದ ಮೈಲಿಗಲ್ಲಿನಲ್ಲಿ ಇಂಥದ್ದೊಂದು ಬೆಳವಣಿಗೆ ಆಗಿದೆ. ಕರ್ನಾಟಕ ಹಾಲು ಒಕ್ಕೂಟ ಆರಂಭವಾಗಿ 50 ವರ್ಷ ಆಗಿದೆ. ವಿಶ್ವಬ್ಯಾಂಕ್​ನ ಡೈರಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಹಾಯವಾಗಿ 1974-75ರಲ್ಲಿ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮ (KDDC) ಸ್ಥಾಪಿಸಲಾಗಿತ್ತು. ಹತ್ತು ವರ್ಷದ ಬಳಿಕ ಅಂದರೆ 1984ರಲ್ಲಿ ಇದರ ಹೆಸರನ್ನು ಕರ್ನಾಟಕ ಮಿಲ್ಕ್ ಫೆಡರೇಶನ್ ಅಥವಾ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಎಂದು ಬದಲಿಸಲಾಯಿತು.

ಕೆಎಂಎಫ್​ನಲ್ಲಿ ಇವತ್ತು ರಾಜ್ಯದ ವಿವಿಧ 14 ಹಾಲು ಒಕ್ಕೂಟಗಳು ಒಳಗೊಂಡಿವೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಲು ಸಹಕಾರ ಸಂಸ್ಥೆಗಳಿದ್ದು ಬೃಹತ್ ನೆಟ್ವರ್ಕ್ ಆಗಿ ರೂಪುಗೊಂಡಿದೆ. ಇವತ್ತು ಗುಜರಾತ್ ಮೂಲದ ಅಮೂಲ್ ಬಿಟ್ಟರೆ ಭಾರತದಲ್ಲಿ ಅತಿದೊಡ್ಡ ಹಾಲಿನ ಒಕ್ಕೂಟ ಕೆಎಂಎಫ್ ಆಗಿದೆ. ಇದರ ವಾರ್ಷಿಕ ವಹಿವಾಟು 14,018 ಕೋಟಿ ರೂ ಇದೆ.

ಕೆಎಂಎಫ್​ನ ನಂದಿನಿ ಬ್ರ್ಯಾಂಡ್ ಶುರುವಾಗಿದ್ದು…

ನಂದಿನಿ ಎಂಬುದು ಕೆಎಂಎಫ್ ಉತ್ಪನ್ನಗಳ ಕಾರ್ಪೊರೇಟ್ ಬ್ರ್ಯಾಂಡಿಂಗ್ ಆಗಿದೆ. 1983ರಲ್ಲಿ ನಂದಿನಿ ಹೆಸರನ್ನು ತನ್ನ ಉತ್ಪನ್ನಗಳ ಬ್ರ್ಯಾಂಡ್ ಆಗಿ ಕೆಎಂಎಫ್ ಘೋಷಿಸಿತು. ನಂದಿನಿ ಎಂಬುದು ಹಿಂದೂ ದೇವತೆಯ ಹೆಸರು. ಹಾಗೆಯೇ ಗೋವಿನ ಹೆಸರುಗಳಲ್ಲಿ ಒಂದು. ಹೀಗಾಗಿ, ನಂದಿನಿ ಹೆಸರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ನಾನು ನಂದಿನಿ, ಅಮೆರಿಕಾಗೆ ಬಂದಿವ್ನಿ… ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕೆಎಂಎಫ್ ಸ್ಪಾನ್ಸರ್

ಅಮೂಲ್ ವರ್ಸಸ್ ಕೆಎಂಎಫ್

ಅಮೂಲ್ ಗುಜರಾತ್ ಮೂಲದ ಹಾಲು ಒಕ್ಕೂಟ. ಆನಂದ್ ಮಿಲ್ಕ್ ಯೂನಿಯನ್ ಲಿ ಎಂಬುದು ಇದರ ವಿಸ್ತೃತ ರೂಪ. ಇಲ್ಲಿ ಆನಂದ್ ಎಂಬುದು ಗುಜರಾತ್​ನ ಒಂದು ರಾಜ್ಯ. ಸ್ವಾತಂತ್ರ್ಯಕ್ಕೆ ಮುನ್ನ 1946ರಲ್ಲಿ ಟಿಕೆ ಪಟೇಲ್ ಎಂಬುವರು ಈ ಹಾಲು ಒಕ್ಕೂಟವನ್ನು ಸ್ಥಾಪಿಸಿದ್ದರು. ಇವತ್ತು ದೇಶದ ಅತಿದೊಡ್ಡ ಹಾಲು ಸಹಕಾರ ಒಕ್ಕೂಟ ಸಂಸ್ಥೆಯಾಗಿದೆ. ಇದರ ವಾರ್ಷಿಕ ಆದಾಯ 50,000 ಕೋಟಿ ರೂ ದಾಟಿದೆ. ಗುಜರಾತ್ ರಾಜ್ಯ ಮಾತ್ರವಲ್ಲ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮೊದಲಾದ ಕೆಲ ರಾಜ್ಯಗಳ ಕೆಲ ಪ್ರದೇಶಗಳಿಂದಲೂ ರೈತರಿಂದ ಅಮೂಲ್ ಹಾಲು ಸಂಗ್ರಹಿಸುತ್ತದೆ. ಹಲವು ರಾಜ್ಯಗಳಲ್ಲಿ ಇದರ ಮಾರುಕಟ್ಟೆ ಇದೆ. ವಿದೇಶಗಳಲ್ಲೂ ಅಮೂಲ್ ಉತ್ಪನ್ನಗಳು ಸಿಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Tue, 23 April 24

ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?