Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆ ನೋವಾಗಿದ್ದ ನೌಕರಿ ಬಿಟ್ಟ ಬಳಿಕ ಡೋಲು ಬಡಿಯುತ್ತಾ, ಬಾಸ್​ ಎದುರು ಡ್ಯಾನ್ಸ್​ ಮಾಡಿ ಹೊರಟ ಸಿಬ್ಬಂದಿ

ಗೌರವವಿಲ್ಲದ ಕಡೆ ಕೆಲಸ ಮಾಡಬಾರದು ಎಂದು ವ್ಯಕ್ತಿಯೊಬ್ಬ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನೌಕರಿ ತೊರೆದು, ಡೋಲು ಬಡಿಯುತ್ತಾ ಬಾಸ್​ ಎದುರು ನೃತ್ಯ ಮಾಡುತ್ತಾ ಮನೆಗೆ ತೆರಳಿರುವ ವಿಚಿತ್ರ ಘಟನೆ ನಡೆದಿದೆ.

ತಲೆ ನೋವಾಗಿದ್ದ ನೌಕರಿ ಬಿಟ್ಟ ಬಳಿಕ ಡೋಲು ಬಡಿಯುತ್ತಾ, ಬಾಸ್​ ಎದುರು ಡ್ಯಾನ್ಸ್​ ಮಾಡಿ ಹೊರಟ ಸಿಬ್ಬಂದಿ
ವೈರಲ್ ಸುದ್ದಿ
Follow us
ನಯನಾ ರಾಜೀವ್
|

Updated on:Apr 26, 2024 | 12:37 PM

ಹಲವು ಬಾರಿ  ಕೆಲಸ ಮಾಡುವ ಸ್ಥಳದಲ್ಲಿ ಗೌರವ ಸಿಗದಿದ್ದರೂ,  ನೋವಿದ್ದರೂ, ಕೆಲಸದಲ್ಲಿ ಅತೃಪ್ತಿ ಇದ್ದರೂ, ನಿಮ್ಮ ಬಾಸ್​ ಜತೆ ನಿಮ್ಮ ಬಾಂಧವ್ಯ ಅಷ್ಟು ಸರಿ ಇಲ್ಲದಿದ್ದರೂ ಮುಂದಿನ ಭವಿಷ್ಯ ಅಥವಾ ಹಣದ ಕಾರಣದಿಂದಾಗಿ ಅಲ್ಲೇ ಉಳಿದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯುವಕ ತನಗಿಷ್ಟವಿಲ್ಲದ ಕೆಲಸವನ್ನು ಬಿಟ್ಟ ಬಳಿಕ ಡೋಲು ಬಡಿಯುತ್ತಾ ಬಾಸ್​ ಎದುರು ನೃತ್ಯ ಮಾಡಿ ತನಗೆ ತನೇ ಬೀಳ್ಕೊಡುಗೆ ಮಾಡಿಕೊಂಡು ಹೊರಟ ಘಟನೆ ಪುಣೆಯಲ್ಲಿ ನಡೆದಿದೆ.

ಅನಿಕೇತ್ ಎಂಬಾತ ಮೂರು ವರ್ಷಗಳಿಂದ ಈ ಕಂಪನಿಯಲ್ಲಿ ಸೇಲ್ಸ್​ ಅಸೋಸಿಯೇಟ್​ ಆಗಿ ಕೆಲಸ ಮಾಡುತ್ತಿದ್ದ. ವೇತನದಲ್ಲಿ ಹೆಚ್ಚಳವಿಲ್ಲದೆ ನಿರಾಸೆಗೊಂಡಿದ್ದ. ಕೊನೆಗೆ ಕೆಲಸ ಬಿಟ್ಟಿದ್ದ, ಕೆಲಸದ ಕೊನೆಯ ದಿನ ಸ್ನೇಹತರೊಂದಿಗೆ ಡೋಲು ಬಾರಿಸುತ್ತಾ, ಬಾಸ್​ ಎದುರು ನೃತ್ಯ ಮಾಡಿದ್ದಾರೆ., ಕೊನೆಗೆ ಬಾಸ್ ಅವರನ್ನು ಹೊರಹೋಗುವಂತೆ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.

View this post on Instagram

A post shared by Anish Bhagat (@anishbhagatt)

ಮೂರು ವರ್ಷಗಳಲ್ಲಿ ಬಾಸ್​ ನಮ್ಮನ್ನು ಗೌರವಪೂರ್ವಕವಾಗಿ ನಡೆಸಿಕೊಂಡಿಲ್ಲ ಎಂದು ಅನಿಕೇತ್ ಹೇಳಿದ್ದಾರೆ. ಈ ವಿಡಿಯೋವನ್ನು ಇನ್​​ಸ್ಟಾಗ್ರಾಂನಲ್ಲಿ ಅನಿಕೇತ್​ನ ಸ್ನೇಹಿತರೊಬ್ಬರು ಹಂಚಿಕೊಂಡಿದ್ದು, ಬಹಳಷ್ಟು ಮಂದಿ ತಮ್ಮ ಕಂಪನಿಯಲ್ಲಿ ಅನಿಕೇತ್​ ಅನುಭವಿಸಿದಂತಹ ಹಲವು ಸಮಸ್ಯೆಗಳನ್ನು ಅನುಭವಿಸಿರುತ್ತಾರೆ.

ಮತ್ತಷ್ಟು ಓದಿ: ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ!

ಆದರೆ ಆ ಸಮಸ್ಯೆಗಳನ್ನು ದೂರ ಮಾಡಿ, ಖುಷಿಯಾಗಿರುವುದು ಹೇಗೆ ಎಂಬುದನ್ನು ಅನಿಕೇತ್ ತೋರಿಸಿಕೊಟ್ಟಿದ್ದಾರೆ ಎಂದು ಅವರು ಬರೆದಿದ್ದಾರೆ. ಇದಕ್ಕೆ ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಕಮೆಂಟ್​ ಮಾಡಿದ್ದು, ಅವರ ನೃತ್ಯ ನನಗೆ ತೃಪ್ತಿ ತಂದಿದೆ. ಜೀವನದಲ್ಲಿ ನಕಾರಾತ್ಮಕತೆಗಿಂತ ಧನಾತ್ಮಕತೆಗೆ ಹೆಚ್ಚು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:36 pm, Fri, 26 April 24

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ