AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ: ಆಕಸ್ಮಿಕವಾಗಿ ಮಹಿಳೆಯ ಮೂಗಿನೊಳಗೆ ಹೋದ ಮೂಗುತಿ

ಮನೆಯಲ್ಲಿ ಹರಟೆ ಹೊಡೆಯುತ್ತಾ ಕುಳಿತಿರುವಾಗ ಅಚಾನಕ್ಕಾಗಿ ಮೂಗುತಿ ಮಹಿಳೆಯ ಮೂಗೊಳಗೆ ಹೋಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೂಗುತಿಯನ್ನು ಹೊರ ತೆಗೆದಿದ್ದಾರೆ.

ಕೋಲ್ಕತ್ತಾ: ಆಕಸ್ಮಿಕವಾಗಿ ಮಹಿಳೆಯ ಮೂಗಿನೊಳಗೆ ಹೋದ ಮೂಗುತಿ
ನಯನಾ ರಾಜೀವ್
|

Updated on: Apr 26, 2024 | 2:42 PM

Share

ಆಕಸ್ಮಿಕವಾಗಿ ಮಹಿಳೆಯ ಮೂಗುತಿ(Nose Pin) ಮೂಗಿನೊಳಗಡೆ ಹೋದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಮೂಗುತಿ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 16-17 ವರ್ಷಗಳ ಹಿಂದೆ ಮದುವೆಯಾದಾಗಿನಿಂದ ಅವರು ಮೂಗುತಿ ಧರಿಸಿದ್ದರು. ಬಿಬಿಸಿಯೊಂದಿಗೆ ಮಾತನಾಡಿದ 35 ವರ್ಷದ ವರ್ಷಾ ಸಾಹು ಮೂಗುತಿಯ ಸ್ಕ್ರೂ ಸಡಿಲವಾಗಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ವರ್ಷಾ ಹೇಳುವಂತೆ ಆಕೆ ಸುಮ್ಮನೆ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಿರುವ ಸಂದರ್ಭದಲ್ಲಿ ದೀರ್ಘವಾಗಿ ಉಸಿರು ಎಳೆದುಕೊಂಡಿದ್ದಳು ಆಗ ಮೂಗುತಿ ಜಾರಿ ಶ್ವಾಸಕೋಶ ಸೇರಿತ್ತು. ಅದು ಶ್ವಾಸಕೋಶಕ್ಕೆ ಹೋಗಿದೆ ಎಂಬುದು ತನಗೆ ತಿಳಿದಿರಲಿಲ್ಲ, ಅದು ಹೊಟ್ಟೆಗೆ ಹೋಗಿದೆ ಎಂದು ತಿಳಿದಿದ್ದೆ.

ಸ್ವಲ್ಪ ಸಮಯದ ನಂತರ ಉಸಿರಾಟದ ಸಮಸ್ಯೆ, ಕೆಮ್ಮು, ನ್ಯುಮೋನಿಯಾ ಶುರುವಾಗಿತ್ತು, ಮೂಗಿಗೆ ಆಗಿದ್ದ ಗಾಯವೇ ಈ ರೋಗಕ್ಕೆ ಕಾರಣ ಎಂದು ತಿಳಿದಿದ್ದಾಗಿ ಹೇಳಿದ್ದಾರೆ. ಯಾವುದೇ ಔಷಧ ಕೊಟ್ಟರೂ ವಾಸಿಯಾಗದ ಕಾರಣ, ಮಾರ್ಚ್​ನಲ್ಲಿ ವೈದ್ಯರನ್ನು ಭೇಟಿಯಾದಾಗ ವಿಷಯ ಬೆಳಕಿಗೆ ಬಂದಿದೆ. ಶ್ವಾಸಕೋಶ ತಜ್ಞರನ್ನು ಸಂಪರ್ಕಿಸಿದರು. ಸಿಟಿ ಸ್ಕ್ಯಾನ್ ಆಕೆಯ ಶ್ವಾಸಕೋಶದಲ್ಲಿ ಮೂಗುತಿ ಇದೆ ಎಂಬುದನ್ನು ಪತ್ತೆ ಮಾಡಿತ್ತು. ನಂತರ ಅದಿದ್ದ ಸ್ಥಳವನ್ನು ದೃಢಪಡಿಸಿದ್ದಾರೆ.

ಮತ್ತಷ್ಟು ಓದಿ: 110 ವರ್ಷ ವಯಸ್ಸು, ಒಬ್ಬರೇ ಇರ್ತಾರೆ, ಕಾರು ಓಡಿಸ್ತಾರೆ, ಯಾವುದೇ ರೋಗ ಇಲ್ಲ, ಆಹಾರ ಕ್ರಮ ಹೇಗಿದೆ ಗೊತ್ತೇ?

ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ ದೇಬ್ರಾಜ್ ಜಶ್ ಅವರು ವರ್ಷಾಳ ಶ್ವಾಸಕೋಶದಿಂದ ಮೂಗುತಿಯನ್ನು ಹೊರತೆಗೆದಿದ್ದಾರೆ, ಇದನ್ನು ವೈದ್ಯರು ಅಪರೂಪದ ಪ್ರಕರಣ ಎಂದು ಕರೆದಿದ್ದಾರೆ. ಕೆಲವೊಮ್ಮೆ ಡ್ರೈಫ್ರೂಟ್ಸ್​ ಅಥವಾ ವೀಳ್ಯದೆಲೆ ಶ್ವಾಸಕೋಶಕ್ಕೆ ಹೋದ ಪ್ರಕರಣಗಳನ್ನು ನಾವು ಹೆಚ್ಚಾಗಿ ನೋಡಿದ್ದೇವೆ.

ಆದರೆ ಅಂತಹ ಪ್ರಕರಣಗಳು ಚಿಕ್ಕ ಮಕ್ಕಳು ಅಥವಾ 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರಲ್ಲಿ ಕಣುತ್ತಿದ್ದೆವು ಆದರೆ ಇಷ್ಟು ಕಡಿಮೆ ವಯಸ್ಸಿನಲ್ಲಿ ಈ ರೀತಿ ಪ್ರಕರಣ ನಡೆದಿದ್ದು ಎಲ್ಲೂ ನೋಡಿಲ್ಲ ಎಂದಿದ್ದಾರೆ. ಮೂಗುತಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಶ್ವಾಸಕೋಶದಲ್ಲಿತ್ತು ಮತ್ತು ಅದರ ಸುತ್ತಲೂ ಅಂಗಾಂಶಗಳು ಬೆಳದಿದ್ದರಿಂದ 30 ನಿಮಿಷಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಒಂದು ಸವಾಲಾಗಿತ್ತು.

ಮೂಗುತಿ ತೆಗೆಯಬೇಕಿದ್ದರೆ ತುಂಬಾ ಜಾಗರೂಕರಾಗಿರಬೇಕಿತ್ತು, ಒಂದೊಮ್ಮೆ ಅದು ವಾಯುಮಾರ್ಗದ ಸಂಪರ್ಕಕ್ಕೆ ಬಂದರೆ ಕಷ್ಟವಾಗುತ್ತಿತ್ತು ಅದು ತುಂಬಾ ಸಣ್ಣದಾಗಿದ್ದ ಕಾರಣ ಗಾಯವನ್ನುಂಟು ಮಾಡಿ ರಕ್ತಸ್ರಾವವಾಗುವ ಸಾಧ್ಯತೆ ಇತ್ತು. ಆದರೆ ನಾವು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿ ನಾಲ್ಕು ದಿನಗಳ ನಂತರ ವರ್ಷಾ ಅವರನ್ನು ಬಿಡುಗಡೆ ಮಾಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ