110 ವರ್ಷ ವಯಸ್ಸು, ಒಬ್ಬರೇ ಇರ್ತಾರೆ, ಕಾರು ಓಡಿಸ್ತಾರೆ, ಯಾವುದೇ ರೋಗ ಇಲ್ಲ, ಆಹಾರ ಕ್ರಮ ಹೇಗಿದೆ ಗೊತ್ತೇ?

Viral News:ನಮಗೆಲ್ಲರಿಗೂ ಸಾಮಾನ್ಯವಾಗಿ 30-40 ವರ್ಷವಾಗುತ್ತಿದ್ದಂತೆ ಎಲ್ಲಾ ವಿಧವಾದ ನೋವು, ಮಾನಸಿಕ ಒತ್ತಡ, ರಕ್ತದೊತ್ತಡ, ಮಧುಮೇಹ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಆದರೆ ಈ ವ್ಯಕ್ತಿಗೆ 110 ವರ್ಷ ವಯಸ್ಸಾಗಿದ್ದರೂ ಯುವಕರಂತೆ ಅದೇ ವರ್ಚಸ್ಸನ್ನು ಮುಂದುವರೆಸಿಕೊಂಡು ಬಂದಿದ್ದಾರೆ, ಅವರ ಈ ಆರೋಗ್ಯಕರ ಆರೋಗ್ಯದ ಗುಟ್ಟೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

110 ವರ್ಷ ವಯಸ್ಸು, ಒಬ್ಬರೇ ಇರ್ತಾರೆ, ಕಾರು ಓಡಿಸ್ತಾರೆ, ಯಾವುದೇ ರೋಗ ಇಲ್ಲ, ಆಹಾರ ಕ್ರಮ ಹೇಗಿದೆ ಗೊತ್ತೇ?
Follow us
ನಯನಾ ರಾಜೀವ್
|

Updated on: Apr 26, 2024 | 10:52 AM

ಈಗೆಲ್ಲಾ 30 ರಿಂದ 40 ವರ್ಷಕ್ಕೆಲ್ಲಾ ಕೈ-ನೋವು ಕಾಲು ನೋವು, ಮಧುಮೇಹ, ಬಿಪಿ ಹೀಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು. ಆದರೆ 110 ವರ್ಷವಾದರೂ ಯಾವುದೇ ರೋಗ ಸುಳಿಯದೆ ಆರೋಗ್ಯವನ್ನು ಕಾಪಾಡಿಕೊಂಡಿರುವ ಈ ವ್ಯಕ್ತಿಯ ಬಗ್ಗೆ ನಿಮಗೆ ಹೇಳಲೇಬೇಕು. ಈ ವ್ಯಕ್ತಿ ಮನೆಯಲ್ಲಿ ಒಬ್ಬರೇ ಇರುತ್ತಾರೆ, ಅವರ ಕೆಲಸ ಅವರು ಮಾಡಿಕೊಳ್ಳುತ್ತಾರೆ. ಒಂದೇ ಒಂದು ರೋಗವೂ ಅವರ ಬಳಿ ಸುಳಿದಿಲ್ಲ.

ಕ್ಯಾನ್ಸರ್​, ಮರೆವಿನ ಕಾಯಿಲೆ, ಬೆನ್ನು ನೋವು, ಬಿಪಿ, ತಲೆನೋವು ಕೂಡ ಅವರ ಬಳಿ ಇದುವರೆಗೂ ಸುಳಿದಿಲ್ಲ.ಇದೀಗ ಅವರು ತಮ್ಮ ಫಿಟ್ನೆಸ್​ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುವ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಕಳೆದ ತಿಂಗಳು ತಮ್ಮ 110 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

100 ವರ್ಷ ವಯಸ್ಸಿನವರಾಗಿದ್ದರೂ ಉತ್ತಮ ಜೀವನವನ್ನು ನಡೆಸುತ್ತಿರುವ ವಿಶ್ವದ ಅದ್ಭುತ ವ್ಯಕ್ತಿಗಳಲ್ಲಿ ಒಬ್ಬರು. ಡ್ರಾನ್ಸ್‌ಫೀಲ್ಡ್ ಅಗ್ನಿಶಾಮಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿಂದ ಶಿಸ್ತುಬದ್ಧ ಜೀವನ ನಡೆಸುವ ಪಾಠ ಕಲಿತರು. ಅವರು ಮನೆಯ ಕೆಲಸಕ್ಕೂ ಯಾರನ್ನೂ ನೇಮಿಸಿಕೊಂಡಿಲ್ಲ, ಅವರ ಕೆಲಸ ಅವರೇ ಮಾಡಿಕೊಳ್ಳುತ್ತಾರೆ, ಆಹಾರ ಕೂಡ ಅವರೇ ತಯಾರಿಸಿಕೊಳ್ಳುತ್ತಾರೆ.

ಮತ್ತಷ್ಟು ಓದಿ: Viral Video : ಅಬ್ಬಬ್ಬಾ! ಏನ್ ಎನರ್ಜಿ ಗುರು ಈ ಅಜ್ಜಿಗೆ, ಈ ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್‌

ಮೂರು ಅಂತಸ್ತಿನ ಮನೆಯನ್ನು ಅವರೇ ಸ್ವಚ್ಛಗೊಳಿಸುತ್ತಾರೆ. ಮಾರುಕಟ್ಟೆಗೆ ಅವರೇ ಕಾರು ಚಲಾಯಿಸಿಕೊಂಡು ಹೋಗುತ್ತಾರೆ. ಮನೆಗೆ ಏನೇ ಸಾಮಾನುಗಳನ್ನು ಕೊಂಡೊಯ್ದರೂ ಅವರೇ ಮೇಲೆ ತೆಗೆದುಕೊಂಡು ಹೋಗಿ ಇಡುತ್ತಾರೆ. ಡ್ರಾನ್ಸ್‌ಫೀಲ್ಡ್ ಅವರು 1914 ರಲ್ಲಿ ಜನಿಸಿದರು ಎಂದು ಹೇಳುತ್ತಾರೆ, ಆದರೆ ಅವರು ಎಂದಿಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ. ಇದೇ ಕಾರಣಕ್ಕೆ ಮೊಣಕಾಲು ನೋವು ಬಿಟ್ಟರೆ ಬೇರಾವುದೇ ಕಾಯಿಲೆ ಅವರಿಗಿಲ್ಲ.

ಡ್ರಾನ್ಸ್‌ಫೀಲ್ಡ್ 20 ವರ್ಷ ವಯಸ್ಸಿನವರೆಗೂ ಸಿಗರೇಟ್ ಸೇದುತ್ತಿದ್ದರು ಎಂದು ಅವರ ಮೊಮ್ಮಗಳು ತಿಳಿಸಿದ್ದಾರೆ. 15 ರಿಂದ 70 ವರ್ಷ ವಯಸ್ಸಿನವರೆಗೆ ಕೆಲಸ ಮಾಡಿದರು. ನಮಗೆ ಯಾವುದು ಇಷ್ಟವೋ ಅದನ್ನು ಮಾಡುತ್ತೇವೆ. ಅವರಿಗೆ ಹ್ಯಾಂಬರ್ಗರ್, ಮಿಲ್ಕ್ ಚಾಕೊಲೇಟ್ ಮತ್ತು ಇಟಾಲಿಯನ್ ಫುಡ್ ತುಂಬಾ ಇಷ್ಟ. ಕೆಲವೊಮ್ಮೆ ಬಿಯರ್ ಕೂಡ ಕುಡಿಯುತ್ತೇವೆ. ನಾನು ಪ್ರತಿದಿನ ಕಾಫಿ ಕುಡಿಯಲು ಇಷ್ಟಪಡುತ್ತೇನೆ.

ನನ್ನ ಬಳಿ ಇರುವುದು ಒಂದೇ ಮಂತ್ರ ಅದು ನನಗೆ ಏನು ಇಷ್ಟವೋ ಅದನ್ನು ಮಾಡುವುದು ಇದು ನಿಮ್ಮನ್ನು ಮಾನಸಿಕವಾಗಿ ಸದೃಢವಾಗಿರಿಸುತ್ತದೆ ಎಂದು ಅವರು ಹೇಳುತ್ತಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್