Body Hair Selling: ತನ್ನ ಕಂಕುಳ ಕೂದಲು ಮಾರಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಾಳೆ ಈ ಗಾಯಕಿ
ಕೊರೊನಾ ಕಾಲದಲ್ಲಿ ಮ್ಯೂಸಿಕ್ ಬ್ಯಾಂಡ್ನಿಂದ ಆರ್ಥಿಕ ನಷ್ಟವನ್ನು ಹೊಂದಿದ್ದರಿಂದ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ತನ್ನ ಖಾತೆಯನ್ನು ಪ್ರಾರಂಭಿಸಲು ನಿರ್ಧರಿಸಿದಳು. ಅಂದಿನಿಂದ ಅವಳು ಅಭಿಮಾನಿಗಳಿಗಾಗಿ ಕೂದಲು ಮಾರಾಟ ಮಾರುವ ವ್ಯಾಪಾರವನ್ನು ಪ್ರಾರಂಭಿಸಿದಳು ಎಂದು ವರದಿಯಾಗಿದೆ.
ಲಂಡನ್ ಮೂಲದ ಖ್ಯಾತ ಸಂಗೀತಗಾರ್ತಿ ಮತ್ತು ರೂಪದರ್ಶಿ ಕ್ಯಾಮಿಲ್ಲೆ ಅಲೆಕ್ಸಾಂಡರ್(25) ತನ್ನ ಕಂಕುಳ ಕೂದಲು ಸೇರಿದಂತೆ ಖಾಸಗಿ ಭಾಗಗಳ ಕೂದಲು ಭಾರೀ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಾಳಂತೆ. ಅವಳ ಕೂದಲನ್ನು ಖರೀದಿಸಲು ಆಕೆಯ ಅಭಿಮಾನಿಗಳು ಮುಗಿಬೀಳುತ್ತಾರಂತೆ. ಡೈಲಿ ಸ್ಟಾರ್ ವರದಿಯ ಪ್ರಕಾರ, ಸುಮಾರು 4 ವರ್ಷಗಳ ಹಿಂದೆ ಕೊರೊನಾ ಕಾಲದಲ್ಲಿ ಈಕೆ ವ್ಯಾಕ್ಸಿಂಗ್ ಮತ್ತು ಶೇವಿಂಗ್ ಮಾಡೋದನ್ನು ನಿಲ್ಲಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಕೂದಲು ಮಾರುತ್ತಿದ್ದು, ಭಾರೀ ಬೇಡಿಕೆಯಿಂದ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.
ಎ ವಾಯ್ಡ್ ಎಂಬ ಮ್ಯೂಸಿಕ್ ಬ್ಯಾಂಡ್ ಹೊಂದಿದ್ದ ಕ್ಯಾಮಿಲ್ಲೆ ಗಾಯನದಿಂದಲೇ ಲಕ್ಷ ಲಕ್ಷ ಸಂಪಾದಿಸುತ್ತಿದ್ದಳು. ಆದರೆ ಕೊರೊನಾ ಕಾಲದಲ್ಲಿ ಮ್ಯೂಸಿಕ್ ಬ್ಯಾಂಡ್ನಿಂದ ಆರ್ಥಿಕ ನಷ್ಟವನ್ನು ಹೊಂದಿದ್ದರಿಂದ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ತನ್ನ ಖಾತೆಯನ್ನು ಪ್ರಾರಂಭಿಸಲು ನಿರ್ಧರಿಸಿದಳು. ಅಂದಿನಿಂದ ಅವಳು ವಯಸ್ಕ ಚಂದಾದಾರಿಕೆ ಅಂದರೆ ಕೇವಲ ಅಭಿಮಾನಿಗಳಿಗಾಗಿ ಕೂದಲು ಮಾರಾಟದ ವ್ಯಾಪಾರವನ್ನು ಪ್ರಾರಂಭಿಸಿದಳು. ಈಗ ಜನರು ಆಕೆಯ ಕೂದಲಿನ ಬಗ್ಗೆ ಹುಚ್ಚರಾಗಿದ್ದು, ಆಕೆಯ ಕೂದಲನ್ನು ಖರೀದಿಸಲು ದೊಡ್ಡ ಮೊತ್ತವನ್ನು ಪಾವತಿಸುತ್ತಾರೆ.
ಇದನ್ನೂ ಓದಿ: ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
ಅಷ್ಟೇ ಅಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಖಾಸಗಿ ಅಂಗದ ಕೂದಲು ಕತ್ತರಿಸಿ ಮಾರುತ್ತಾಳೆ. ಒಮ್ಮೆ ಈಕೆ 30 ಸಾವಿರ ರೂಪಾಯಿಗೆ ಒಳಉಡುಪುಗಳನ್ನು ಮಾರಾಟ ಮಾಡಿದ್ದಳು. ಕೂದಲು ಮಾರಾಟ ಮಾಡುವ ಮೂಲಕ ತಿಂಗಳಿಗೆ 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುತ್ತಾಳೆ ಎಂದು ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Thu, 25 April 24