Viral Video : ಭಯವಿಲ್ಲದೆ ಬೈಕ್ ಓಡಿಸುತ್ತಿರುವ ಹನ್ನೆರಡರ ಪೋರ, ಇದು ಸರಿಯಲ್ಲ ಎಂದ ನೆಟ್ಟಿಗರು
ಈಗಿನ ಮಕ್ಕಳು ತುಂಬಾನೇ ಬುದ್ದಿವಂತರು, ಎಲ್ಲವನ್ನು ಬೇಗನೇ ಕಲಿತುಕೊಂಡು ಬಿಡುತ್ತಾರೆ. ಆದರೆ ಇದೀಗ 10-12 ವರ್ಷದ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬಾಲಕನು ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು. ಈ ಬಾಲಕನಿಗೆ ಕಾಲು ನೆಲಕ್ಕೆ ಎಟುಕದೇ ಇದ್ದರೂ, ಬೈಕ್ ಓಡಿಸುತ್ತಿರುವ ರೀತಿಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುವುದು ಮಾಮೂಲಿ. ಈ ಪುಟಾಣಿ ಮಕ್ಕಳ ಸಾಹಸಮಯ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಮಕ್ಕಳ ಕೆಲ ವಿಡಿಯೋಗಳು ನಗು ತರಿಸಿದರೆ, ಇನ್ನು ಕೆಲವು ವಿಡಿಯೋಗಳನ್ನು ನೋಡಿದಾಗ ಎದೆ ಝಲ್ ಎನ್ನುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹತ್ತು ಹನ್ನೆರಡ ಪೋರನೊಬ್ಬನು ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು. ಈ ಪೋರನಿಗೆ ಹತ್ತು ಹನ್ನೆರಡು ವರ್ಷ ವಯಸ್ಸು ಆಗಿರುವಂತೆ ಕಾಣುತ್ತದೆ.
ಈ ವಿಡಿಯೋವನ್ನು ನೋಡಿದಾಗ ಈ ಪುಟ್ಟ ಬಾಲಕನ ಎರಡೂ ಕಾಲುಗಳು ನೆಲಕ್ಕೆ ನಿಲುಕುವುದಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ ಈ ಬಾಲಕ ಮಾತ್ರ ಬೈಕ್ ಅನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದನು. ಇತ್ತ ಬೈಕ್ ಸ್ಟಾರ್ಟ್ ಮಾಡಿ ತನ್ನ ಹಿಂದೆ ಚಿಕ್ಕ ಮಗುವನ್ನು ಕೂರಿಸಿಕೊಂಡು ಬೈಕ್ ಓಡಿಸಿಕೊಂಡು ಹೋಗಿದ್ದಾನೆ. ಈ ವಿಡಿಯೋವನ್ನು ಹರಿಯಾಣದ ಕೇಡರ್‌ನ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಇದಕ್ಕಿಂತ ಹೆಚ್ಚು ಅಪಾಯಕಾರಿ ಏನು! ಪೋಷಕರೇ, ದಯವಿಟ್ಟು ನಿಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಿ. ಈ ಜೀವನ ಅಮೂಲ್ಯವಾದುದು’. ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಳ್ಳರನ್ನು ಹಿಡಿಯುವ ಪೊಲೀಸರೇ ಕಳ್ಳತನ ಮಾಡಿದ್ರೆ ಹೇಗೆ? ಬಲ್ಬ್ ಕದ್ದ ಕಾನ್‌ಸ್ಟೆಬಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
What can be more dangerous than this !!! Parents , pls take care of your loved ones . These lives are precious 🙏 pic.twitter.com/ydL4hkNoKX
— Pankaj Nain IPS (@ipspankajnain) April 22, 2024
ಕೇವಲ 25 ಸೆಕೆಂಡ್ ಗಳ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದುವರೆಗೆ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ನೆಟ್ಟಿಗರು ವಿಡಿಯೋ ನೋಡಿ ಆತಂಕ ವ್ಯಕ್ತಪಡಿಸಿದ್ದು, ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು,’ ಕೆಲವು ಪೋಷಕರು ತಮ್ಮ ಮಕ್ಕಳು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ಹೆಮ್ಮೆಪಡುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇದು ತುಂಬಾ ಅಪಾಯಕಾರಿ’ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ