Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗರ್ಭಿಣಿ ಎಂದು ಸುಳ್ಳು ಹೇಳಿ ರಜೆ ಜೊತೆಗೆ 98 ಲಕ್ಷ ರೂ. ಬಾಚಿಕೊಂಡಿದ್ದ ಮಹಿಳೆ

ಇಟಾಲಿಯ ಬಾರ್ಬರಾ ಐಯೋಲೆ (50) ಕಳೆದ ಸುಮಾರು 24 ವರ್ಷಗಳಿಂದ ಗರ್ಭಧಾರಣೆಯ ನಾಟಕವಾಡುತ್ತಾ ಬಂದಿರುವ ಮಹಿಳೆ. ಇಲ್ಲಿಯವರೆಗೆ ತಾನು ಐದು ಮಕ್ಕಳಿಗೆ ಜನ್ಮ ನೀಡಿದ್ದೇನೆ ಮತ್ತು 12 ಗರ್ಭಪಾತಗಳಿಗೆ ಒಳಗಾಗಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.ಇದೀಗಾ ಮಹಿಳೆಯ ಕಳ್ಳಾಟ ಬಹಿರಂಗಗೊಂಡಿದ್ದು, ಪೊಲೀಸರು ಮಹಿಳೆಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Viral News:  ಗರ್ಭಿಣಿ ಎಂದು ಸುಳ್ಳು ಹೇಳಿ ರಜೆ ಜೊತೆಗೆ 98 ಲಕ್ಷ ರೂ. ಬಾಚಿಕೊಂಡಿದ್ದ ಮಹಿಳೆ
Woman Fakes 17 PregnanciesImage Credit source: Pinterest
Follow us
ಅಕ್ಷತಾ ವರ್ಕಾಡಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 25, 2024 | 4:41 PM

ಕಾರ್ಮಿಕರ ಕಾನೂನು ಪ್ರಕಾರ ಹೆರಿಗೆಯಾದ ದಿನದಿಂದ ಅಂದಾಜು 6 ತಿಂಗಳುಗಳ ಕಾಲ ವೇತನ ಸಹಿತ ರಜೆಯನ್ನು ಹೊಸ ತಾಯಂದಿರಿಗೆ ನೀಡಲಾಗುತ್ತದೆ. ಜೊತೆಗೆ ಗರ್ಭಿಣಿಯರಿಗೆ ಸರ್ಕಾರದಿಂದಲೂ ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ಸಂಬಳದ ಜೊತೆಗೆ 6ತಿಂಗಳು ರಜೆ ಸಿಗುವುದರಿಂದ ಮತ್ತು ಹಣಕ್ಕಾಗಿ ಗರ್ಭಿಣಿ ಎಂದು ಒಂದಲ್ಲ ಎರಡಲ್ಲ ಬರೋಬ್ಬರಿ 17 ಬಾರಿ ಸುಳ್ಳು ಹೇಳಿ 98 ಲಕ್ಷಕ್ಕೂ ಅಧಿಕ ರೂ.ಗಳನ್ನು ಬಾಚಿಕೊಂಡಿದ್ದಾಳೆ. ಇದೀಗಾ ಮಹಿಳೆಯ ಕಳ್ಳಾಟ ಬಹಿರಂಗಗೊಂಡಿದ್ದು, ಪೊಲೀಸರು ಮಹಿಳೆಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಟಾಲಿಯ ಬಾರ್ಬರಾ ಐಯೋಲೆ (50) ಕಳೆದ ಸುಮಾರು 24 ವರ್ಷಗಳಿಂದ ಗರ್ಭಧಾರಣೆಯ ನಾಟಕವಾಡುತ್ತಾ ಬಂದಿರುವ ಮಹಿಳೆ. ಇಲ್ಲಿಯವರೆಗೆ ತಾನು ಐದು ಮಕ್ಕಳಿಗೆ ಜನ್ಮ ನೀಡಿದ್ದೇನೆ ಮತ್ತು 12 ಗರ್ಭಪಾತಗಳಿಗೆ ಒಳಗಾಗಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಮೆಟ್ರೋ ವರದಿಯ ಪ್ರಕಾರ, ಐಯೋಲೆ 98 ಲಕ್ಷಕ್ಕೂ ಹೆಚ್ಚು ಸರ್ಕಾರಿ ಪ್ರಯೋಜನಗಳನ್ನು ಪಡೆದಿದ್ದಾಳೆ. ಜೊತೆಗೆ ಪ್ರತೀ ಸಾರಿ 6 ತಿಂಗಳು ಕೆಲಸಕ್ಕೂ ಹೋಗದೇ ಆರಾಮ ಜೀವನ ಕಳೆದಿದ್ದಾಳೆ.

ಇದನ್ನೂ ಓದಿ: ಕೈ ಹಿಡಿದು ಸುತ್ತುವುದು ಪ್ರೇಮವಲ್ಲ, ಜೀವನದ ಪ್ರತಿ ಹಂತದಲ್ಲೂ ಈ ರಿಯಲ್ ಜೋಡಿಯಂತಿರಬೇಕು

17 ಬಾರಿ ಗರ್ಭಿಧಾರಣೆ ಎಂದು ಕಂಪೆನಿಯಿಂದ ರಜೆ ಹಾಗೂ ಸರ್ಕಾರದಿಂದ ಸಿಗುವ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಆಕೆಯ ಮೇಲೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ನಿಜ ಬಣ್ಣ ಬಯಲಾಗಿದೆ. ಗರ್ಭಿಣಿ ಎಂದು ನಂಬಿಸಲು ಹೊಟ್ಟೆಗೆ ದಿಂಬುಗಳನ್ನು ಬಳಸುತ್ತಿದ್ದಳು. ಜೊತೆಗೆ ಗರ್ಭಧಾರಣೆ ಹಾಗೂ ಹೆರಿಗೆಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಳು. “ಆಕೆ ಒಂದು ಬಾರಿಯೂ ಗರ್ಭಿಣಿಯಾಗಿಲ್ಲ. ಇಲ್ಲಿಯವೆರೆಗೆ ಆಕೆಯ ಗರ್ಭಿಣಿಯಂತೆ ನಟಿಸಿದ್ದಾಳೆ” ಎಂದು ಆಕೆಯ ಪತಿ ಡೇವಿಡ್ ಪಿಜ್ಜಿನಾಟೊ ಕೂಡ ಆಕೆಯ ವಿರುದ್ಧ ಸಾಕ್ಷ್ಯ ನುಡಿದಿದ್ದಾನೆ. ಪೊಲೀಸರು ಆಕೆಯನ್ನು ವಶಪಡಿಸಿ ಒಂದು ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್