Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕೈ ಹಿಡಿದು ಸುತ್ತುವುದು ಪ್ರೇಮವಲ್ಲ, ಜೀವನದ ಪ್ರತಿ ಹಂತದಲ್ಲೂ ಈ ರಿಯಲ್ ಜೋಡಿಯಂತಿರಬೇಕು

ಪ್ರೇಮ ಎನ್ನುವುದು ಒಂದು ದಿನದ ಸಂಭ್ರಮವಲ್ಲ. ಜೀವನ ಪರ್ಯಂತ ಜೊತೆಗಿದ್ದು ಕಷ್ಟ ಸುಖಗಳಿಗೆ ಜೊತೆಯಾಗುವುದು. ಪ್ರೇಮಿಗಳ ದಿನಾಚರಣೆಯು ಮುಗಿದಿದ್ದು, ಈ ಬಾರಿಯ ಪ್ರೇಮಿಗಳ ದಿನವನ್ನು ಪ್ರೇಮಿಗಳು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಮನದರಸಿಯನ್ನು ಮೆಚ್ಚಿಸಲು ನಾನಾ ರೀತಿಯ ಉಡುಗೊರೆಗಳನ್ನು ನೀಡಿದ್ದಾರೆ. ಪ್ರೇಯಸಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಸುತ್ತಾಡಿದ್ದು ಆಗಿದೆ. ಆದರೆ ಪ್ರೇಮಿಗಳ ದಿನದಂದು ಅಪರೂಪದ ಜೋಡಿಯ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಪತಿಯು ಮೇವನ್ನು ತುಂಬಿಕೊಂಡು ಪತ್ನಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುವ ದೃಶ್ಯವನ್ನು ಕಾಣಬಹುದಾಗಿದೆ.

Viral Video : ಕೈ ಹಿಡಿದು ಸುತ್ತುವುದು ಪ್ರೇಮವಲ್ಲ, ಜೀವನದ ಪ್ರತಿ ಹಂತದಲ್ಲೂ ಈ ರಿಯಲ್ ಜೋಡಿಯಂತಿರಬೇಕು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 17, 2024 | 3:51 PM

ಪ್ರೀತಿ ಎನ್ನುವುದು ಎರಡು ಮನಸ್ಸುಗಳ ಸಮ್ಮಿಲನ. ಪ್ರೇಮವನ್ನು ಸಂಭ್ರಮಿಸುವುದಲು ಪ್ರೇಮಿಗಳ ದಿನವೇ ಬೇಕಾಗಿಲ್ಲ. ಪ್ರೀತಿಸುವ ವ್ಯಕ್ತಿಯು ಜೊತೆಗಿದ್ದರೆ ಪ್ರತಿ ದಿನವು ಪ್ರೇಮಿಗಳ ದಿನವೇ. ಜೀವಕ್ಕೆ ಜೀವ ಎನ್ನುವಂತೆ ಯಾರು ಪ್ರೇಮಿಸುತ್ತಾರೋ ಅವರೆಲ್ಲರು ಕೂಡ ಒಂದರ್ಥದಲ್ಲಿ ಪ್ರೇಮಿಗಳೇ. ಹೀಗಾಗಿ ಪ್ರೀತಿ ಎಂದರೆ ಒಬ್ಬ ವ್ಯಕ್ತಿಯನ್ನು ಪ್ರತಿಕ್ಷಣವು ಆರಾಧಿಸುವುದು, ಕಷ್ಟ ಸುಖ ನೋವು ನಲಿವುಗಳಿಗೆ ಜೊತೆಯಾಗಿ ನಿಲ್ಲುವುದು. ಒಬ್ಬರ ಕೆಲಸದಲ್ಲಿ ಮತ್ತೊಬ್ಬರು ಸಹಾಯ ಮಾಡುವುದು. ಅವರ ಪ್ರತಿ ಏಳಿಗೆಯಲ್ಲಿ ಖುಷಿ ಕಾಣುವುದು ನಿಜವಾದ ಪ್ರೀತಿ. ಬೆಸ್ಟ್ ಜೋಡಿಯೆನ್ನುವಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ದಂಪತಿಗಳಿಬ್ಬರು ಬೈಕ್ ನಲ್ಲಿ ಹೋಗುತ್ತಿರುವ ವೇಳೆಯಲ್ಲಿ ತೆಗೆದ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ರಕ್ಷಾ ಬೆಳ್ಳಿ ಎನ್ನುವವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ‘ಪ್ರೇಮವೆಂದರೆ ಮುಖದ ಹೊಳಪಲ್ಲ ಹೃದಯೊಳಗಿನ ಬೆಳಕು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ದಂಪತಿ ಬೈಕ್‌ನಲ್ಲಿ ಹೋಗುವಾಗ ಕಾರಿನಲ್ಲಿ ಹೋಗುತ್ತಿರುವವರು ಈ ವೀಡಿಯೋ ಚಿತ್ರೀಕರಿಸಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ದಂಪತಿಗಳು ಮನೆಯಲ್ಲಿರುವ ದನಕ್ಕೆ ಮೇವು ಬೈಕ್‌ನಲ್ಲಿ ತರುತ್ತಿದ್ದರು ಎನ್ನುವುದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ ಹೀಗಾಗಿ ಬೈಕ್‌ನ ಹಿಂದೆ ಕೂರಲು ಸಾಧ್ಯವಿರಲಿಲ್ಲ, ಹೀಗಾಗಿ ಆತ ತನ್ನ ಮುದ್ದಿನ ಮಡದಿಯನ್ನು ಪ್ರೆಟ್ರೋಲ್‌ ಟ್ಯಾಂಕ್‌ ಮೇಲೆ ಕೂರಿಸಿಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಮೆಚ್ಚುಗೆಯ ಸುರಿಮಳೆಗಳು ವ್ಯಕ್ತವಾಗಿವೆ. ವೀಡಿಯೋ ನೋಡಿದ ಬಳಕೆದಾರರೊಬ್ಬರು ತುಂಬಾನೇ ರೊಮ್ಯಾಂಟಿಕ್, ಜೋಡಿ ಅಂದರೆ ಹೀಗಿರಬೇಕು ಎಂದಿದ್ದಾರೆ.

ಇದನ್ನೂ ಓದಿ: ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ ರೈತ

ಮತ್ತೊಬ್ಬರು, ಅವರಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಎಂದಿದ್ದಾರೆ. ಇನ್ನೊಬ್ಬರು, ನಾವು ಹಳ್ಳಿ ಜನ ಸ್ವಾಮಿ ನೋಡೋದಕ್ಕೆ ಸ್ವಲ್ಪ ಕೊಳಕ ಆಗಿರಬಹುದು ಆದರೆ ಮನಸ್ಸು ಹಾಲಿನಂತೆ ಇವರಿಬ್ಬರಿಗೂ ಆಗೋ ಈ ವಿಡಿಯೋ ಮಾಡಿ ಜನರಿಗೆ ತೋರಿಸುವ ಕೆಲಸ ಮಾಡಿದ ನಿಮಗೂ ಪ್ರೇಮಿಗಳ ದಿನಾಚರಣೆ ಶುಭಾಶಯಗಳು ಈ ದಿನವನ್ನು ಈ ಹೆಸರಲ್ಲಿ ಕರೆಯಬಾರದು ಇರಲಿ ಪ್ರೀತಿ ವಿಶ್ವಾಸ ಸ್ನೇಹ ಎಲ್ಲಾ ದಿನವೂ ಒಂದೇ ರೀತಿ ಇರುತ್ತದೆ ‘ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Sat, 17 February 24

ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ