Viral Video : ಹಾವುಗಳಿರುವ ಪೆಟ್ಟಿಗೆಯೊಳಗೆ ಕುಳಿತಿರುವ ಎಂಟೆದೆ ಭಂಟ, ಇಲ್ಲಿದೆ ನೋಡಿ ಭಯಾನಕ ವಿಡಿಯೋ

ಹಾವುಗಳ ಹೆಸರು ಕೇಳಿದರೇ ನಡುಕ ಶುರುವಾಗುತ್ತದೆ. ಈ ಭಯಾನಕ ಹಾವುಗಳು ಎದುರಿಗೆ ಬಂದರೆ ಕೇಳುವುದೇ ಬೇಡ, ಒಂದು ಮೈಲಿ ದೂರ ಓಡುವವರೇ ಹೆಚ್ಚು. ಆದರೆ ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹಾವುಗಳನ್ನು ಸಲೀಸಾಗಿ ಹಿಡಿದು ಮುದ್ದಿಸುವ, ಮೈ ಮೇಲೆ ಹಾವುಗಳು ತೆವಳುವ ವಿಡಿಯೋಗಳು ಕಾಣಸಿಗುತ್ತವೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಾವುಗಳ ರಾಶಿಯಿರುವ ಪೆಟ್ಟಿಗೆಯಲ್ಲಿ ವ್ಯಕ್ತಿಯೊಬ್ಬರು ಯಾವುದೇ ಅಳುಕಿಲ್ಲದೇ ಕುಳಿತುಕೊಂಡಿದ್ದಾರೆ. ಹಾವುಗಳೆಲ್ಲವು ಅವರ ಮೈ ಮೇಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಸುತ್ತಿಕೊಂಡಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.

Viral Video : ಹಾವುಗಳಿರುವ ಪೆಟ್ಟಿಗೆಯೊಳಗೆ ಕುಳಿತಿರುವ ಎಂಟೆದೆ ಭಂಟ, ಇಲ್ಲಿದೆ ನೋಡಿ ಭಯಾನಕ ವಿಡಿಯೋ
ವೈರಲ್​​​ ವಿಡಿಯೋ ಇಲ್ಲಿದೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 17, 2024 | 3:55 PM

ಹಾವುಗಳೆಂದರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ, ಹೆಚ್ಚಿನವರು ಈ ಹಾವುಗಳ ಹೆಸರು ಕೇಳಿದರೆ ಸಾಕು ಮೈಯೆಲ್ಲಾ ಒಮ್ಮೆ ಜುಂ ಆಗುತ್ತದೆ. ಎಷ್ಟೇ ಧೈರ್ಯವಂತನಿಗಾದರೂ ಒಂದು ಕ್ಷಣ ಎದೆ ಝಲ್ ಎನ್ನುತ್ತದೆ. ಹೀಗಾಗಿ ಈ ಹಾವುಗಳ ಭಯ ಇರುವವರು ಅಷ್ಟು ಸುಲಭವಾಗಿ ಈ ಹಾವುಗಳ ಬಳಿಯೂ ಸುಳಿಯುವುದೇ ಇಲ್ಲ. ಧೈರ್ಯ ಇರುವ ವ್ಯಕ್ತಿಗಳು ಮಾತ್ರ ಈ ವಿಷಕಾರಿ ಹಾವುಗಳನ್ನು ಹಿಡಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಈ ವಿಷಜಂತುಗಳನ್ನು ಕೈಯಲ್ಲಿ ಸಲೀಸಾಗಿ ಹಿಡಿಯುವುದನ್ನು ನೋಡಿದಾಗ ಇವರಿಗೇನು ಭಯ ಅನ್ನೋದೇ ಇಲ್ಲವಾ ಎಂದೆನಿಸುತ್ತದೆ. ಮನೋರಂಜನೆಯ ತಾಣವಾದ ಈ ಸೋಶಿಯಲ್ ಮೀಡಿಯಾದಲ್ಲಿ ಭಯ ಹುಟ್ಟಿಸುವ, ಕ್ಷಣಾರ್ಧದಲ್ಲಿ ಹಾವಿನಿಂದ ಪಾರಾದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವ್ಯಕ್ತಿಯೊಬ್ಬರು ದೈತ್ಯಾಕಾರದ ಹಾವುಗಳಿರುವ ಪೆಟ್ಟಿಗೆಯನ್ನು ಭಯವಿಲ್ಲದೇ ಕುಳಿತುಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ವಿಡಿಯೋವನ್ನು ಮೃಗಾಲಯದ ಕೀಪರ್ ಜೇ ಬ್ರೂವರ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದು, “ಈ ಅದ್ಭುತ ದಿನದಂದು ನಿಮ್ಮೆಲ್ಲರಿಗೂ ದೊಡ್ಡ ಹಾವುಗಳನ್ನು ತೋರಿಸುತ್ತಿದ್ದೇನೆ ಎಂದು ನಾನು ಭಾವಿಸಿದೆ. ಈ ಎಲ್ಲಾ ಹಾವುಗಳನ್ನು ಚಿಕ್ಕದಿಂದ ಬೆಳೆಸಿದ್ದು, ಈಗ ಅವುಗಳನ್ನು ನೋಡಿ” ಎಂದಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಜೇ ಬ್ರೂವರ್ ಅವರು ಪೆಟ್ಟಿಗೆಯ ಮಧ್ಯದಲ್ಲಿ ಕುಳಿತಿರುವುದನ್ನು ನೋಡಬಹುದು. ಅವರ ಸುತ್ತಲೂ ದೈತ್ಯಾಕಾರದ ಹಾವುಗಳಿವೆ. ಈ ಹಾವುಗಳು ಅವರ ಮೇಲೆ ತೆವಳುತ್ತಿದ್ದು ಇಡೀ ದೇಹವನ್ನೇ ಆವರಿಸಿಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ 27.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಲೈಕ್ಸ್ ಗಳು ಬಂದಿವೆ.

ಇದನ್ನೂ ಓದಿ: ಕೈ ಹಿಡಿದು ಸುತ್ತುವುದು ಪ್ರೇಮವಲ್ಲ, ಜೀವನದ ಪ್ರತಿ ಹಂತದಲ್ಲೂ ಈ ರಿಯಲ್ ಜೋಡಿಯಂತಿರಬೇಕು

ನೆಟ್ಟಿಗರು ಭಯಭೀತರಾಗಿ ನಾನಾ ರೀತಿಯಲ್ಲಿ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ” ಈ ಹಾವುಗಳು ನಿಮ್ಮನ್ನು ಕಚ್ಚುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದರೆ, ಮತ್ತೊಬ್ಬರು, “ಅದ್ಭುತ! ಅವುಗಳು ನಿಮ್ಮ ಮೇಲೆ ಆಕ್ರಮಣ ಮಾಡುವುದಿಲ್ಲ, ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತವೆ ” ಎಂದಿದ್ದಾರೆ. ಇನ್ನೊಬ್ಬರು “ನನ್ನ ದುಃಸ್ವಪ್ನಗಳನ್ನು ನೀವು ಚಿತ್ರೀಕರಿಸಿದಂತಿದೆ. ನನಗೆ ಹಾವುಗಳೆಂದರೆ ತುಂಬಾ ಭಯ” ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM