Viral Video: ಮನೆ ಬಾಗಿಲಿನ ಮುಂದೆಯೇ ರಾಜಾರೋಷವಾಗಿ ಹಾದು ಹೋದ ಕರಿಚಿರತೆ; ಇಲ್ಲಿದೆ ನೋಡಿ ವಿಡಿಯೋ
ಕರಿಚಿರತೆಯೊಂದು ರಾಜಾರೋಷವಾಗಿ ಮನೆ ಬಾಗಿಲಿನ ಮುಂದೆಯೇ ಹಾದುಹೋಗುತ್ತಿರುವ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮನೆಯ ಪ್ರವೇಶದ್ವಾರದ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ದೃಶ್ಯ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
ತಮಿಳುನಾಡಿನ ನೀಲಗಿರಿಯ ಕುನ್ನೂರಿನ ಮನೆಯೊಂದರ ಮುಂಭಾಗದಲ್ಲಿ ರಾಜಾರೋಷವಾಗಿ ಹಾದು ಹೋಗುತ್ತಿದ್ದ ಕರಿಚಿರತೆ(Black Panther)ಯ ವಿಡಿಯೋ ಮನೆಯ ಮುಂಭಾಗದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗಾ ಎಲ್ಲೆಡೆ ವೈರಲ್ ಆಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮನೆಯ ಪ್ರವೇಶದ್ವಾರದ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಿಂದ ಸೆರೆಹಿಡಿಯಲಾದ ದೃಶ್ಯಾವಳಿಗಳಲ್ಲಿ ಕರಿಚಿರತೆ ಮನೆಯ ಮುಂಭಾಗದಿಂದಲೇ ಹಾದು ಹೋಗುತ್ತಿರುವುದನ್ನು ಕಾಣಬಹುದು. ಬಹುಶಃ ರಾತ್ರಿಯ ಹೊತ್ತು ಆಹಾರ ಹುಡುಕಿಕೊಂಡು ಬಂದಂತೆ ತೋರುತ್ತದೆ.
ರಾಜಾರೋಷವಾಗಿ ಹಾದು ಹೋದ ಕರಿಚಿರತೆ ವಿಡಿಯೋ ಇಲ್ಲಿದೆ ನೋಡಿ:
Imagine somebody visiting you like this. Video from a house in Nilgiris. Do you know where else you can find black Panther ? pic.twitter.com/kCy95CMpTe
— Parveen Kaswan, IFS (@ParveenKaswan) February 16, 2024
ಇದನ್ನೂ ಓದಿ: ಕೈ ಹಿಡಿದು ಸುತ್ತುವುದು ಪ್ರೇಮವಲ್ಲ, ಜೀವನದ ಪ್ರತಿ ಹಂತದಲ್ಲೂ ಈ ರಿಯಲ್ ಜೋಡಿಯಂತಿರಬೇಕು
ಈ ವಿಡಿಯೋವನ್ನು ಫೆಬ್ರವರಿ 16 ರಂದು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್(@ParveenKaswan) ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಇದೀಗಾಗಲೇ 2ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 4 ಸಾವಿರಕ್ಕೂ ಅಧಿಕ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ