Viral Video: ವಿಮಾನವನ್ನು ಐಷಾರಾಮಿ ಬಂಗಲೆಯನ್ನಾಗಿ ಮಾಡಿದ ವ್ಯಕ್ತಿ; ವಿಡಿಯೋ ಇಲ್ಲಿದೆ ನೋಡಿ

ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊದಲಿಗೆ ನೀವು ಹೊರಗಿನಿಂದ ವಿಮಾನವನ್ನು ಕಾಣಬಹುದು. ಆದರೆ ವಿಮಾನದ ಒಳಗೆ ಪ್ರವೇಶಿಸುತ್ತಿದ್ದಂತೆ ಐಷಾರಾಮಿ ಸೌಕರ್ಯವನ್ನೊಳಗೊಂಡ ಬೃಹತ್​​ ಬಂಗಲೆಯನ್ನು ಕಾಣಬಹುದು. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

Viral Video: ವಿಮಾನವನ್ನು ಐಷಾರಾಮಿ ಬಂಗಲೆಯನ್ನಾಗಿ ಮಾಡಿದ ವ್ಯಕ್ತಿ; ವಿಡಿಯೋ ಇಲ್ಲಿದೆ ನೋಡಿ
ವಿಮಾನವನ್ನು ಐಷಾರಾಮಿ ಬಂಗಲೆಯನ್ನಾಗಿ ಮಾಡಿದ ವ್ಯಕ್ತಿ
Follow us
ಅಕ್ಷತಾ ವರ್ಕಾಡಿ
|

Updated on: Feb 18, 2024 | 12:58 PM

ಭಾರತದ ಹಿರಿಯ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು, ತಮ್ಮ ಅನುಯಾಯಿಗಳಿಗಾಗಿ ಟ್ರೆಂಡಿಂಗ್ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗಾ ವಿಮಾನವನ್ನು ಐಷಾರಾಮಿ ಬಂಗಲೆಯನ್ನಾಗಿ ಮಾಡಿದ ವ್ಯಕ್ತಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ವಿಡಿಯೋ ಎಲ್ಲಡೆ ವೈರಲ್​​ ಆಗಿದೆ.

ರಷ್ಯಾದ ಉದ್ಯಮಿ ಫೆಲಿಕ್ಸ್ ಡೆಮಿನ್ ಕೈಬಿಟ್ಟ ಬೋಯಿಂಗ್ 737 ಅನ್ನು ಐಷಾರಾಮಿ ಖಾಸಗಿ ವಿಲ್ಲಾವನ್ನಾಗಿ ಮಾಡಿದ್ದಾರೆ. ಈ ವಿಶಿಷ್ಟ ಐಷಾರಾಮಿ ಬಂಗಲೆ ಇಂಡೋನೇಷ್ಯಾದ ಬಾಲಿಯಲ್ಲಿರುವ ನಿಯಾಂಗ್ ನಿಯಾಂಗ್ ರಾಕ್ಸ್ ಮೇಲೆ ನೆಲೆಗೊಂಡಿದೆ. ಇದು ಎರಡು ಮಲಗುವ ಕೋಣೆ, ಹಿಂದೂ ಮಹಾಸಾಗರದ ಮೇಲಿರುವ ಈಜುಕೊಳ, ಬಾರ್, ಲಾಂಜ್ಗಳು ಮತ್ತು ಇತರ ಅನೇಕ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ.

ಫೆಲಿಕ್ಸ್ ಡೆಮಿನ್ 2021 ರಲ್ಲಿ ಕೈಬಿಟ್ಟ ಬೋಯಿಂಗ್ 737 ಅನ್ನು ಖರೀದಿಸಿದರು. ಅದನ್ನು ಬಾಲಿಗೆ ಒಯ್ದು ವಿಲ್ಲಾ ಆಗಿ ಪರಿವರ್ತಿಸಿದ್ದಾರೆ. ಅವರು 2023 ರಲ್ಲಿ ಈ ವಿಲ್ಲಾವನ್ನು ಬಳಸಲು ಪ್ರಾರಂಭಿಸಿದರು. ವಿಲ್ಲಾ ಶೀಘ್ರದಲ್ಲೇ ವಿಶ್ವದ ಅತ್ಯಂತ ಪ್ರತಿಷ್ಠಿತ ಐಷಾರಾಮಿ ವಿಲ್ಲಾಗಳಲ್ಲಿ ಒಂದಾಗಿದೆ.

ವಿಮಾನ ಐಷಾರಾಮಿ ವಿಲ್ಲಾ ಆಗಿ ಮಾರ್ಪಟ್ಟ ವಿಡಿಯೋ ಇಲ್ಲಿದೆ:

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ

ಆನಂದ್ ಮಹೀಂದ್ರಾ ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊದಲಿಗೆ ನೀವು ಹೊರಗಿನಿಂದ ವಿಮಾನವನ್ನು ಕಾಣಬಹುದು. ಆದರೆ ವಿಮಾನದ ಒಳಗೆ ಪ್ರವೇಶಿಸುತ್ತಿದ್ದಂತೆ ಐಷಾರಾಮಿ ಸೌಕರ್ಯವನ್ನೊಳಗೊಂಡ ಬೃಹತ್​​ ಬಂಗಲೆಯನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಅನೇಕ ನೆಟ್ಟಿಗರು “ಇದರಲ್ಲಿ ಉಳಿಯಲು ಅವಕಾಶ ಸಿಗುತ್ತದೆಯೇ, ಈ ವಿಲ್ಲಾ ಬಾಡಿಗೆಗೆ ಕೂಡ ಲಭ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು