AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ

2014 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ 'ಮೇಕ್ ಇನ್ ಇಂಡಿಯಾ' ಯೋಜನೆಯ ಅಡಿ, ಸ್ವದೇಶಿ ಉತ್ಪನ್ನಗಳ ಬಳಕೆಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಅಂಬಾನಿ ಕುಟುಂಬ ನಿರ್ಧರಿಸಿದೆ. ಈ ಮೂಲಕ ತನ್ನ ಕಿರಿಯ ಪುತ್ರ ಅನಂತ್​​ ಅಂಬಾನಿ ಮದುವೆಗೆ ಬರುವ ಗಣ್ಯರಿಗೆ ಮಹಾಬಲೇಶ್ವರದಿಂದ ದೃಷ್ಟಿಹೀನ ಕುಶಲಕರ್ಮಿಗಳು ವಿನ್ಯಾಸಗೊಳಿಸಿದ ವಿಶೇಷ ಮೇಣದಬತ್ತಿಗಳನ್ನು ಉಡುಗೊರೆ ನೀಡಲಾಗುತ್ತಿದೆ.

ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ  ಉಡುಗೊರೆ
Anant Ambani and Radhika Merchant's Wedding Gift
Follow us
ಅಕ್ಷತಾ ವರ್ಕಾಡಿ
|

Updated on:Feb 27, 2024 | 5:04 PM

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹಕ್ಕೆ ಅದ್ದೂರಿಯಾಗಿ ಸಕಲ ಸಿದ್ದತೆಗಳು ನಡೆಯುತ್ತಿವೆ. ಜನವರಿ 2023 ರಲ್ಲಿ ಅನಂತ್​​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ  ನಡೆದಿತ್ತು. ಇದೀಗಾ ಈ ಮದುವೆಗೆ ಅಂಬಾನಿ ಕುಟುಂಬ ಗಣ್ಯರಿಗೆ ನೀಡಲು ವಿಶೇಷ ಉಡುಗೊರೆಯನ್ನು ಸಿದ್ಧಪಡಿಸುತ್ತಿದೆ. ಅಂಬಾನಿ ಅವರ ತವರೂರಾದ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ವಿವಾಹ ಪೂರ್ವ ಸಂಭ್ರಮಾರಣೆ ನಡೆಯಲಿದೆ. ಈ ಸಮಯದಲ್ಲಿ ಗಣ್ಯರ ದಿಂಡೇ ವಿವಾಹದಲ್ಲಿ ಪಾಲ್ಗೊಳ್ಳಲಿದ್ದು, ಆಗಮಿಸುವ ಗಣ್ಯರಿಗೆ ಅಂಬಾನಿ ಕುಟುಂಬ ವಿಶೇಷ ಉಡುಗೊರೆ ನೀಡಿ ಗೌರವಿಸಲಿದೆ.

2014 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಅಡಿ, ಸ್ವದೇಶಿ ಉತ್ಪನ್ನಗಳ ಬಳಕೆಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಅಂಬಾನಿ ಕುಟುಂಬ ನಿರ್ಧರಿಸಿದೆ. ಈ ಮೂಲಕ ತನ್ನ ಕಿರಿಯ ಪುತ್ರ ಅನಂತ್​​ ಅಂಬಾನಿ ಮದುವೆಗೆ ಬರುವ ಗಣ್ಯರಿಗೆ ಮಹಾಬಲೇಶ್ವರದಿಂದ ದೃಷ್ಟಿಹೀನ ಕುಶಲಕರ್ಮಿಗಳು ವಿನ್ಯಾಸಗೊಳಿಸಿದ ವಿಶೇಷ ಮೇಣದಬತ್ತಿಗಳನ್ನು ಉಡುಗೊರೆ ನೀಡಲಾಗುತ್ತಿದೆ. ಈ ಕುರಿತು @Swadesh_Online ಟ್ವಿಟರ್​ ಖಾತೆಯನ್ನು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿದೆ  ನೋಡಿ:

ಈ ಸುಂದರ ಸಂದರ್ಭದಲ್ಲಿ, ‘ಸ್ವದೇಶ್’ ಮೆರುಗು ನೀಡುತ್ತಿರುವುದು ಮಾತ್ರವಲ್ಲದೇ ಪ್ರಾಚೀನ ಕರಕುಶಲತೆಯ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸುವ ಕೆಲಸದಲ್ಲಿ ಅಂಬಾನಿ ಕುಟುಂಬ ತೊಡಗಿಸಿಕೊಂಡಿದೆ.

ಇದನ್ನೂ ಓದಿ: ಅಂಬಾನಿಯ ಕಿರಿಯ ಪುತ್ರನ ವಿವಾಹ ಪೂರ್ವ ಸಮಾರಂಭದ ಆಮಂತ್ರಣ ಪತ್ರಿಕೆ ವೈರಲ್

ಆಧುನಿಕ ಭಾರತ ಕಂಡ ಅತ್ಯಂತ ದುಬಾರಿ ಮದುವೆ ಎಂದೇ ಖ್ಯಾತಿ ಪಡೆದಿದ್ದ ಮದುವೆ ಇಶಾ ಅಂಬಾನಿಯ ಮದುವೆ. ಅಂಬಾನಿಯ ಮುದ್ದಿನ ಮಗಳ ಮದುವೆ ಬರೋಬ್ಬರಿ 700 ಕೋಟಿ ರೂ. ಖರ್ಚು ಮಾಡಿದ್ದರು. ಆದರೆ ಇದೀಗಾ ಕಿರಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮದುವೆ ಇದಕ್ಕಿಂತೂ ಅದ್ಧೂರಿಯಾಗಿ ನಡೆಯಲಿದೆ ಎಂಬ ಸುದ್​ದಿ ಎಲ್ಲೆಡೆ ಹರಿದಾಡಿದೆ. ಈ ಅದ್ದೂರಿ ವಿವಾಹಕ್ಕೆ 1200ಕ್ಕೂ ಅಧಿಕ ಅತಿಥಿಗಳನ್ನು ಅಂಬಾನಿ ಕುಟುಂಬ ಆಹ್ವಾನಿಸಿದೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಸೇರಿದಂತೆ ಖ್ಯಾತ ಗಾಯಕರು ಪ್ರದರ್ಶನ ನೀಡಲಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Fri, 16 February 24