Bengaluru: ಜೀನ್ಸ್ ಪ್ಯಾಂಟ್ ಬಣ್ಣ ಹೋಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ; ಭಾರೀ ಮೊತ್ತ ಮರು ಪಾವತಿಸುವಂತೆ ಕೋರ್ಟ್ ತೀರ್ಪು
ಮೂರು ಬಾರಿ ಪ್ಯಾಂಟ್ ತೊಳೆದಾಗ ಅದರ ಬಣ್ಣ ಮಾಸಿ ಹೋಗಿದೆ ಎಂದು ಪ್ರತಿಷ್ಠಿತ ಕಂಪೆನಿಯೊಂದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಬೆಂಗಳೂರಿನ ವ್ಯಕ್ತಿ. ಕಡೆಗೂ ಆತನ ಹೋರಾಟಕ್ಕೆ ಒಂದು ವರ್ಷದ ಬಳಿಕ ಜಯ ಸಿಕ್ಕಿದೆ. ಆತ ಪ್ಯಾಂಟ್ ಖರೀದಿಸಿದ ಬ್ಯ್ರಾಂಡ್ ಕಂಪೆನಿಗೆ ಹಣ ಮರುಪಾವತಿಸುವಂತೆ ಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಹರಿಹರನ್ ಬಾಬು ಎಕೆ ಎಂಬವರು ಏಪ್ರಿಲ್ 16, 2023 ರಂದು ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ನಿಂದ 4,499 ರೂ.ಗಳ ಜೀನ್ಸ್ ಪ್ಯಾಂಟ್ ಒಂದನ್ನು ಖರೀದಿಸಿದ್ದರು. ಆದರೆ ಈ ಪ್ಯಾಂಟ್ ಮೂರು ಬಾರಿ ತೊಳೆದ ನಂತರ ಬಣ್ಣ ಹೋಗಲು ಪ್ರಾರಂಭವಾಗಿತ್ತು. ಇದರಿಂದಾಗಿ ಶೋರೂಮ್‌ಗೆ ದೂರು ನೀಡಿ ಮರುಪಾವತಿಗೆ ವಿನಂತಿಸಿದ್ದರು. ಆದರೆ ಏನು ಪ್ರಯೋಜನವಾಗಿಲ್ಲ. ಇದರಿಂದಾಗಿ ಕೋಪಗೊಂಡಿದ್ದ ಹರಿಹರನ್ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಆದರೆ ಸುಮಾರು ಒಂದು ವರ್ಷಗಳ ಹೋರಾಟದ ನಂತರ ಜಯ ಸಿಕ್ಕಿದೆ. ಗ್ರಾಹಕರ ದೂರಿನ ಆಧಾರದ ಮೇಲೆ ಜೀನ್ಸ್ ಮೊತ್ತ 4,499ರೂ. ಮತ್ತು ಹೆಚ್ಚುವರಿ 1,000 ರೂ.ಗಳ ಮರುಪಾವತಿಸಲು ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ಕಂಪನಿಗೆ ಆದೇಶಿಸಿದೆ.
ಕಳೆದ ವರ್ಷ(2023) ಅಕ್ಟೋಬರ್‌ನಲ್ಲಿ ಆರಂಭವಾದ ಈ ಕಾನೂನು ಪ್ರಕ್ರಿಯೆಗಳು ಈ ವರ್ಷದ(2024) ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದೆ. ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ ಗ್ರಾಹಕರಿಗೆ ತೊಳೆಯುವ ಸೂಚನೆಗಳನ್ನು ನಮೂದಿಸಿರಲ್ಲಿಲ್ಲ ಎಂದು ಗ್ರಾಹಕರ ವೇದಿಕೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ
ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ಭಾರತೀಯ ಫ್ಯಾಷನ್ ಮತ್ತು ಚಿಲ್ಲರೆ ಉದ್ಯಮದಲ್ಲಿ ಪ್ರಮುಖ ಕಂಪನಿಯಾಗಿದೆ. ಇದು ಆದಿತ್ಯ ಬಿರ್ಲಾ ಗ್ರೂಪ್‌ನ ಒಂದು ಭಾಗವಾಗಿದೆ, ಇದು ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ABFRL ಔಪಚಾರಿಕ ಮತ್ತು ಸಾಂದರ್ಭಿಕ ಉಡುಗೆಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳನ್ನು ಪೂರೈಸುವ ಫ್ಯಾಷನ್ ಬ್ರಾಂಡ್‌ಗಳ ವೈವಿಧ್ಯಮಯ ಪೋರ್ಟ್‌ಫೋಲಿಯೊವನ್ನು ನಿರ್ವಹಿಸುತ್ತದೆ. ಅದರ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳಲ್ಲಿ ವ್ಯಾನ್ ಹ್ಯೂಸೆನ್, ಅಲೆನ್ ಸೋಲಿ, ಪ್ಯಾಂಟಲೂನ್ಸ್, ಪೀಟರ್ ಇಂಗ್ಲೆಂಡ್, ಮತ್ತು ಇತರವು ಸೇರಿವೆ. ಕಂಪನಿಯು ಉಡುಪು ಮತ್ತು ಪರಿಕರಗಳ ಉತ್ಪಾದನೆ, ವಿತರಣೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ