Viral Video : ನೆಚ್ಚಿನ ಶಿಕ್ಷಕಿಗೆ ಸರ್ಪ್ರೈಸ್ ನೀಡಿದ ವಿದ್ಯಾರ್ಥಿಗಳು; ಮಕ್ಕಳ ಪ್ರೀತಿ ಕಂಡು ಭಾವುಕ
ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿದೆ. ಆದರೆ ಇವಾಗಿನ ಮಕ್ಕಳು ಮೂರು ವರ್ಷ ತುಂಬುತ್ತಿದ್ದಂತೆ ಶಾಲೆಯ ಮೆಟ್ಟಿಲು ಹತ್ತಿರುತ್ತಾರೆ. ಹೀಗಾಗಿ ಶಿಕ್ಷಕರ ಜೊತೆಗೆ ಮಕ್ಕಳ ಬಾಂಧವ್ಯವು ಬೆಸೆದುಕೊಳ್ಳುತ್ತದೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ನೇಹಿತರಂತೆಯೇ ಕಾಣುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಬಾಂಧವ್ಯವನ್ನು ಸಾರುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಹೃದಯ ಸ್ಪರ್ಶಿ ವಿಡಿಯೋದಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಪ್ರೀತಿಯ ಶಿಕ್ಷಕಿಗೆ ಬೇಬಿ ಶವರ್ ಆಯೋಜಿಸಿ ಖುಷಿ ಪಡಿಸಿದ್ದಾರೆ. ಈ ಸರ್ಪ್ರೈಸ್ ಗೆ ಶಿಕ್ಷಕಿ ಸಂತೋಷದಿಂದ ಭಾವುಕರಾಗಿದ್ದಾರೆ.
ಭಾರತದಂತಹ ದೇಶದಲ್ಲಿ ಪುರಾತನ ಕಾಲದಿಂದಲೂ ವಿದ್ಯೆ ಕಲಿಸುವ ಗುರುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಗುರುವನ್ನು ಕಂಡೊಡನೆ ಭಕ್ತಿ ಭಾವವು ತುಂಬಿ ತುಳುಕುತ್ತಿತ್ತು. ಆದರೆ ಇದೀಗ ಗುರು ಶಿಷ್ಯರು ಸ್ನೇಹಿತರಂತೆ ಆಗಿ ಬಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗುರು ಶಿಷ್ಯರ ಬಂಧವನ್ನು ಸಾರುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಪ್ರೀತಿಯ ಶಿಕ್ಷಕಿಗೆ ಬೇಬಿ ಶವರ್ ಆಯೋಜಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ವಿದ್ಯಾರ್ಥಿಗಳು ನೀಡಿದ ಸರ್ಪ್ರೈಸ್ ನೋಡಿ ಶಿಕ್ಷಕಿಯ ಸಂತೋಷವನ್ನು ವರ್ಣಿಸಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.
ಹೌದು, ಕೇರಳದ ತಲಶ್ಶೇರಿಯಲ್ಲಿರುವ ಕೋ-ಆಪರೇಟಿವ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕರೊಬ್ಬರಿಗೆ ಆಶ್ಚರ್ಯಕರವಾದ ಬೇಬಿ ಶವರ್ ಅನ್ನು ಆಯೋಜಿಸಿದ್ದರು. ಈ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತರಗತಿಯನ್ನು ವರ್ಣರಂಜಿತ ಬಲೂನ್‌ಗಳು ಮತ್ತು ರುಚಿಕರವಾದ ಕೇಕ್‌ನಿಂದ ಅಲಂಕರಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ: ಹಾವುಗಳಿರುವ ಪೆಟ್ಟಿಗೆಯೊಳಗೆ ಕುಳಿತಿರುವ ಎಂಟೆದೆ ಭಂಟ, ಇಲ್ಲಿದೆ ನೋಡಿ ಭಯಾನಕ ವಿಡಿಯೋ
ಶಿಕ್ಷಕಿಯು ತರಗತಿಯನ್ನು ಪ್ರವೇಶಿಸುತ್ತಿದ್ದಂತೆ, ವಿದ್ಯಾರ್ಥಿಗಳು ಗೌರವಾರ್ಥವಾಗಿ ಏರ್ಪಡಿಸಿದ ಈ ಬೇಬಿ ಶವರ್ ಕಾರ್ಯಕ್ರಮವನ್ನು ಕಂಡು ಆಶ್ಚರ್ಯವಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆ ಬಳಿಕ ಶಿಕ್ಷಕಿಯ ಮುಖದಲ್ಲಿ ಹೇಳಲಾರದ ಸಂತೋಷ ಹಾಗೂ ಮನಸ್ಸು ಪೂರ್ವಕವಾಗಿ ನಗುವುದನ್ನು ಕಾಣಬಹುದು. ವಿದ್ಯಾರ್ಥಿಗಳ ಈ ಪ್ರೀತಿಗೆ ಶಿಕ್ಷಕಿಯು ಕಣ್ಣಂಚಲಿ ಸಂತೋಷದ ಕಣ್ಣೀರು ಜಿನುಗಿದೆ. ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ತಿನ್ನಿಸಿದ್ದಾರೆ.
ಇದೇ ಫೆಬ್ರವರಿ 6 ರಂದು ಹಂಚಿಕೊಂಡ ಈ ವಿಡಿಯೋ ಈಗಾಗಲೇ 4.2 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, “ಅವಳು ತನ್ನ ಇಡೀ ಜೀವನದಲ್ಲಿ ಈ ಬ್ಯಾಚ್ ಅನ್ನು ನೆನಪಿಸಿಕೊಳ್ಳುತ್ತಾಳೆ” ಎಂದಿದ್ದಾರೆ. ಮತ್ತೊಬ್ಬರು, “ಆ ಸಂತೋಷವು ಅಮೂಲ್ಯವಾದುದು.” ಎಂದಿದ್ದಾರೆ. ಇನ್ನೊಬ್ಬರು, ನಾನು ಎಷ್ಟು ವೀಕ್ಷಿಸಿದ್ದೇನೆ ಎಂದು ನನಗೆ ತಿಳಿದಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಈ ಘಟನೆಯ ಮಾಸ್ಟರ್ ಮೈಂಡ್ ಯಾರು ?? ನಿಮಗೆ ವರ್ಚುವಲ್ ಅಪ್ಪುಗೆಯನ್ನು ನೀಡಲು ನಾನು ಬಯಸುತ್ತೇನೆ,” ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ