ಉತ್ತರ ಪ್ರದೇಶ: ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್ ಫೋಟೊ
ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಅವರ ಹೆಸರಿನೊಂದಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸನ್ನಿ ಲಿಯೋನ್ ಹೆಸರಿನ ಪ್ರವೇಶ ಪತ್ರ ಮತ್ತು ಆಕೆಯ ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಯುಪಿ ಪೊಲೀಸ್ ಕಾನ್ಸ್‌ಟೇಬಲ್(Police Constable) ನೇಮಕಾತಿ ಪರೀಕ್ಷೆಯಂದು ಪ್ರವೇಶಪತ್ರವೊಂದರಲ್ಲಿ ಸನ್ನಿ ಲಿಯೋನ್(Sunny Leone) ಚಿತ್ರ ಇರುವುದು ಕಂಡುಬಂದಿದೆ. ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದೆ. ಪರೀಕ್ಷೆಯ ಮೊದಲ ದಿನ, ಕನೌಜ್ ಜಿಲ್ಲೆಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಯ ಪ್ರವೇಶ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಅಡ್ಮಿಟ್ ಕಾರ್ಡ್ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿರುವಾಗಲೇ ಈ ಅಡ್ಮಿಟ್ ಕಾರ್ಡ್ ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾಯಿತು. ಅಷ್ಟಕ್ಕೂ ಈ ಅಡ್ಮಿಟ್ ಕಾರ್ಡ್ ನಲ್ಲಿ ಏನಿತ್ತು ಇಲ್ಲಿದೆ ಮಾಹಿತಿ.
ಈ ಘಟನೆಯು ಕನೌಜ್ ಜಿಲ್ಲೆಯ ತಿರ್ವಾ ಪಟ್ಟಣ ಪ್ರದೇಶದಲ್ಲಿರುವ ಸೋನಶ್ರೀ ಬಾಲಕಿಯರ ಕಾಲೇಜಿನಲ್ಲಿ ನಡೆದಿದೆ, ಅಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು, ಅದೇ ಪರೀಕ್ಷಾ ಕೇಂದ್ರದಲ್ಲಿ, ಅಭ್ಯರ್ಥಿ ಅಂಕಿತ್‌ನ ಪ್ರವೇಶ ಪತ್ರದಲ್ಲಿ ಸಿನಿ ತಾರೆ ಸನ್ನಿ ಲಿಯೋನ್ ಚಿತ್ರವನ್ನು ಅಂಟಿಸಲಾಗಿತ್ತು. ಮಹೋಬಾ ಜಿಲ್ಲೆಯ ನಿವಾಸಿ, ಅಂಕಿತ್ ಚಿತ್ರದ ಜಾಗದಲ್ಲಿ ಈ ಫೋಟೊವಿತ್ತು. ಈ ಅಡ್ಮಿಟ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಸುದ್ದಿ ರಾಜ್ಯಾದ್ಯಂತ ಹಬ್ಬಿತ್ತು.
ಅಡ್ಮಿಟ್ ಕಾರ್ಡ್‌ನಲ್ಲಿ ಬರೆದಿರುವ ನಂಬರ್‌ನಲ್ಲಿ ಫೋನ್‌ನಲ್ಲಿ ಮಾಹಿತಿ ತೆಗೆದುಕೊಂಡಾಗ, ವಿದ್ಯಾರ್ಥಿ ಅಂಕಿತ್ ಅವರು ಸಾರ್ವಜನಿಕ ಸೇವಾ ಕೇಂದ್ರದಿಂದ ಅರ್ಜಿಯನ್ನು ಭರ್ತಿ ಮಾಡಿರುವುದಾಗಿ ಹೇಳಿದರು. ಆದರೆ ಫೋಟೋವನ್ನು ಹೇಗೆ ಬದಲಾಯಿಸಲಾಗಿದೆ ಎಂಬುದು ತಿಳಿದಿಲ್ಲ.
ಮತ್ತಷ್ಟು ಓದಿ: Sunny Leone: ಸನ್ನಿ ಲಿಯೋನ್ ಹೆಸರು ಬಂದಿದ್ದು ಹೇಗೆ? ಹಳೆ ಘಟನೆ ನೆನೆದ ನಟಿ
ಈ ಫೋಟೋವನ್ನು ಬದಲಾಯಿಸಿದ್ದರಿಂದ, ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಪ್ರವೇಶ ಪತ್ರದಲ್ಲಿ ನಮೂದಿಸಿರುವ ವಿಳಾಸ ಮುಂಬೈ. ಆದರೆ ನೋಂದಣಿ ಸಮಯದಲ್ಲಿ ತವರು ಜಿಲ್ಲೆಯನ್ನು ಕನ್ನೌಜ್ ಎಂದು ಉಲ್ಲೇಖಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ ಪ್ರಕಾರ, ಈ ಪ್ರವೇಶ ಪತ್ರದಲ್ಲಿ ಯಾವುದೇ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಲಿಲ್ಲ.
ವಿಷಯ ಸ್ಥಳೀಯ ಅಧಿಕಾರಿಗಳಿಗೆ ತಲುಪಿದಾಗ ಅವರು ಪ್ರವೇಶ ಪತ್ರದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು. ಉಳಿದ ವಿಷಯಗಳ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಅಂತಹ ಕೃತ್ಯಗಳನ್ನು ಎಸಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕನೌಜ್ ಜಿಲ್ಲೆಯಲ್ಲಿ ಫೆಬ್ರವರಿ 17 ಮತ್ತು 18 ರಂದು ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ನಡೆಯಲಿದೆ. ಮೊದಲ ದಿನ 9464 ಅಭ್ಯರ್ಥಿಗಳು 10 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:07 am, Sun, 18 February 24