AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny Leone: ಸನ್ನಿ ಲಿಯೋನ್ ಹೆಸರು ಬಂದಿದ್ದು ಹೇಗೆ? ಹಳೆ ಘಟನೆ ನೆನೆದ ನಟಿ

ನನ್ನ ಸಹೋದರನ ಹೆಸರು ಸಂದೀಪ್ ಸಿಂಗ್. ನಾವು ಅವರನ್ನು ಸನ್ನಿ ಎಂದು ಕರೆಯುತ್ತಿದ್ದೆವು. ಆ ಹೆಸರನ್ನೇ ನಾನು ಇಟ್ಟುಕೊಂಡೆ ಎಂದಿದ್ದಾರೆ ಸನ್ನಿ.

Sunny Leone: ಸನ್ನಿ ಲಿಯೋನ್ ಹೆಸರು ಬಂದಿದ್ದು ಹೇಗೆ? ಹಳೆ ಘಟನೆ ನೆನೆದ ನಟಿ
Sunny Leone
Follow us
ರಾಜೇಶ್ ದುಗ್ಗುಮನೆ
|

Updated on:Jul 21, 2023 | 7:02 AM

ನಟಿ ಸನ್ನಿ ಲಿಯೋನ್ (Sunny Leone) ಅವರು ಈ ಮೊದಲು ನೀಲಿ ಚಿತ್ರರಂಗದಲ್ಲಿದ್ದರು. ಅವರ ಮೊದಲ ಹೆಸರು ಕರಂಜೀತ್ ಕೌರ್​ ವೋಹ್ರಾ ಎಂದಾಗಿತ್ತು. ಕೆನಡಾದಲ್ಲಿ ವಾಸವಾಗಿದ್ದ ಸಿಖ್ ಕುಟುಂಬದಲ್ಲಿ ಸನ್ನಿ ಜನಿಸಿದರು. ಅವರಿಗೆ ಅಡಲ್ಟ್​ ಎಂಟರ್​ಟೇನ್​ಮೆಂಟ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡೋದು ಅನಿವಾರ್ಯ ಆಯಿತು. 2000ನೇ ಇಸವಿಯಲ್ಲಿ ಸನ್ನಿ ಪೋರ್ನ್ ಇಂಡಸ್ಟ್ರಿಯಲ್ಲಿ ಮಿಂಚಿದರು. ದಶಕಗಳ ಬಳಿಕ ಭಾರತಕ್ಕೆ ಬಂದರು. 2011ರಲ್ಲಿ ಬಿಗ್ ಬಾಸ್​ಗೆ ಕಾಲಿಟ್ಟರು. ಬಾಲಿವುಡ್​ಗೆ ಬರೋಕೆ ಇದು ಸಹಕಾರಿ ಆಯಿತು. ಹಾಗಾದರೆ ಸನ್ನಿ ಲಿಯೋನ್ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

‘ನಾನು ಅಮೆರಿಕದಲ್ಲಿ ಮ್ಯಾಗಜಿನ್ ಒಂದರಲ್ಲಿ ಸಂದರ್ಶಕಿಯಾಗಿ ಕೆಲಸ ಮಾಡುತ್ತಿದೆ. ‘ನಿಮ್ಮ ಹೆಸರು ಹೇಗಿರಬೇಕು ಎಂದು ನೀವು ಬಯಸುತ್ತೀರಿ’ ಎಂದು ಅವರು ನನನ್ನು ಕೇಳಿದರು. ನನಗೆ ಏನು ಹೇಳಬೇಕು ಎಂದು ಗೊತ್ತಿರಲಿಲ್ಲ. ನಾನು ಅದಕ್ಕೂ ಮೊದಲು ಟ್ಯಾಕ್ಸ್ ಫರ್ಮ್​​ನಲ್ಲಿ, ಎಚ್​​ಆರ್​ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಹೀಗಾಗಿ, ಏನು ಹೇಳಬೇಕು ಎಂಬುದೇ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಸನ್ನಿ.

‘ನನ್ನ ಹೆಸರನ್ನು ಸನ್ನಿ ಎಂದು ನೀವು ಬರೆದುಕೊಳ್ಳಿ. ಕೊನೆಯ ಹೆಸರನ್ನು ನೀವೆ ಆಯ್ಕೆ ಮಾಡಿಕೊಳ್ಳಿ ಎಂದೆ. ಸನ್ನಿ ಅನ್ನೋದು ನನ್ನ ಸಹೋದರನ ನಿಕ್​ನೇಮ್ ಆಗಿತ್ತು. ನನ್ನ ಸಹೋದರನ ಹೆಸರು ಸಂದೀಪ್ ಸಿಂಗ್. ನಾವು ಅವರನ್ನು ಸನ್ನಿ ಎಂದು ಕರೆಯುತ್ತಿದ್ದೆವು. ನನ್ನ ಹೆಸರನ್ನು ಸನ್ನಿ ಎಂದು ಮಾಡಿಕೊಂಡಿದ್ದು ನನ್ನ ಅಮ್ಮನಿಗೆ ಇಷ್ಟ ಆಗಿರಲಿಲ್ಲ’ ಎಂದಿದ್ದಾರೆ ಸನ್ನಿ ಲಿಯೋನ್.

ಇದನ್ನೂ ಓದಿ: ಪವನ್ ಕಲ್ಯಾಣ್​-ರೋಜಾ ಜಟಾಪಟಿ ಮಧ್ಯೆ ಸನ್ನಿ ಲಿಯೋನ್ ಎಂಟ್ರಿ

‘ಮ್ಯಾಗಜಿನ್ ಸಂಸ್ಥೆಗೆ ಇಟಲಿಯವರು ಮಾಲೀಕರಾಗಿದ್ದರು. ಲಿಯೋನ್ ಎಂಬುದನ್ನು ನೀಡಿದ್ದು ಅವರೇ. ನಾನು ಅದನ್ನು ಹಾಗೆಯೇ ಇಟ್ಟುಕೊಂಡೆ. ಆಗ ನನಗೆ 19 ವರ್ಷ ಮಾತ್ರ’ ಎಂದಿದ್ದಾರೆ ಸನ್ನಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:30 am, Fri, 21 July 23

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್