AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್​-ರೋಜಾ ಜಟಾಪಟಿ ಮಧ್ಯೆ ಸನ್ನಿ ಲಿಯೋನ್ ಎಂಟ್ರಿ

‘ಪವನ್ ಕಲ್ಯಾಣ್ ಮೌಲ್ಯಗಳ ಬಗ್ಗೆ ಮಾತನಾಡುವುದೂ ಒಂದೇ, ಸನ್ನಿ ಲಿಯೋನ್ ನಮಗೆ ವೇದಗಳನ್ನು ಕಲಿಸುವುದೂ ಒಂದೇ’ ಎಂದು ಟೀಕೆ ಮಾಡಿದ್ದರು.

ಪವನ್ ಕಲ್ಯಾಣ್​-ರೋಜಾ ಜಟಾಪಟಿ ಮಧ್ಯೆ ಸನ್ನಿ ಲಿಯೋನ್ ಎಂಟ್ರಿ
ರೋಜಾ-ಸನ್ನಿ
ರಾಜೇಶ್ ದುಗ್ಗುಮನೆ
|

Updated on: Jul 17, 2023 | 1:20 PM

Share

ಜನಸೇನಾ ನಾಯಕ ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ಅವರು ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರು ಇತ್ತೀಚೆಗೆ ಸಿಎಂ ವೈಎಸ್​ ಜಗನ್ ಮೋಹನ್ ರೆಡ್ಡಿ ಹಾಗೂ ವೈಎಸ್​ಆರ್​ ಸರ್ಕಾರವನ್ನು ಟೀಕಿಸಿದ್ದರು. ಈ ಹೇಳಿಕೆಯನ್ನು ಸಚಿವೆ ರೋಜಾ ಖಂಡಿಸಿದ್ದಾರೆ. ಪವನ್ ಅವರನ್ನು ಸನ್ನಿ ಲಿಯೋನ್​ಗೆ ಹೋಲಿಕೆ ಮಾಡಿದ್ದಾರೆ. ಸಿನಿಮಾ ನಟಿಯಾಗಿರುವ ರೋಜಾ ಮತ್ತೋರ್ವ ನಟಿಯನ್ನು ಹೀಯಾಳಿಸುವುದು ಎಷ್ಟು ಸರಿ ಎಂಬ ಚರ್ಚೆ ನಡೆದಿದೆ.

ರೋಜಾ ಹೇಳಿಕೆ ಏನು?

ಪವನ್ ಕಲ್ಯಾಣ್ ಅವರು ಜಗನ್ ಮೇಲೆ ಮೌಕಿಕ ದಾಳಿ ಮಾಡಿದ್ದನ್ನು ರೋಜಾ ಖಂಡಿಸಿದ್ದರು. ‘ಪವನ್ ಕಲ್ಯಾಣ್ ಮೌಲ್ಯಗಳ ಬಗ್ಗೆ ಮಾತನಾಡುವುದೂ ಒಂದೇ, ಸನ್ನಿ ಲಿಯೋನ್ ನಮಗೆ ವೇದಗಳನ್ನು ಕಲಿಸುವುದೂ ಒಂದೇ’ ಎಂದು ಟೀಕೆ ಮಾಡಿದ್ದಾರೆ. ಸನ್ನಿ ಲಿಯೋನ್ ಅವರು ಈ ಮೊದಲು ಪೋರ್ನ್​ ಇಂಡಸ್ಟ್ರಿಯಲ್ಲಿ ಇದ್ದರು. ಆ ಬಳಿಕ ಅದನ್ನು ತೊರೆದರು. ಈಗ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ನೀಲಿ ಚಿತ್ರರಂಗವನ್ನು ತೊರೆದ ಬಳಿಕವೂ ಅದರ ಬಗ್ಗೆ ಮಾತನಾಡುವುದು ಏಕೆ ಎಂದು ಅನೇಕರು ರೋಜಾ ಅವರನ್ನು ಪ್ರಶ್ನೆ ಮಾಡಿದ್ದಾರೆ.

ವೈರಲ್ ಆಯ್ತು ಫೇಕ್ ಉತ್ತರ

ರೋಜಾ ಹೇಳಿಕೆಗೆ ಸನ್ನಿ ಲಿಯೋನ್ ಪ್ರತಿಕ್ರಿಯಿಸಿದ್ದಾರೆ ಎಂಬ ಪೋಸ್ಟ್ ಒಂದು ವೈರಲ್ ಆಗಿದೆ. ಆದರೆ, ಅಸಲಿಗೆ ಅಲ್ಲಿ ಆಗಿರುವುದೇ ಬೇರೆ. ಸನ್ನಿ ಲಿಯೋನ್ ಹೆಸರಿನಲ್ಲಿರುವ ನಕಲಿ ಖಾತೆ ಮೂಲಕ ಪ್ರತಿಕ್ರಿಯೆ ನೀಡಲಾಗಿದೆ.

ಫೇಕ್ ಖಾತೆ ಮೂಲಕ ಹೇಳಿದ್ದೇನು?

‘ನಾನು ಪೋರ್ನ್‌ಸ್ಟಾರ್ ಆಗಿದ್ದೆ ಮತ್ತು ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನಗೆ ಏನು ಮಾಡಬೇಕು ಅನಿಸಿತೋ ಅದನ್ನು ನಾನು ಓಪನ್ ಆಗಿ ಮಾಡಿದ್ದೇನೆ. ನನಗೆ ಹಾಗೂ ನಿಮಗೆ ಇರುವ ವ್ಯತ್ಯಾಸ ಏನು ಎಂದರೆ ನಾನು ಇಂಡಸ್ಟ್ರಿಯನ್ನು ಬಿಟ್ಟೆ, ಆದರೆ ನೀವು ಬಿಡಲಿಲ್ಲ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಅಶ್ಲೀಲ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ‘ಧರ್ಮ ಪ್ರೊಡಕ್ಷನ್​’, ‘ಯಶ್​ ರಾಜ್​ ಫಿಲ್ಮ್ಸ್​’ಗೆ ಹೋಲಿಸಿದ ಸನ್ನಿ ಲಿಯೋನ್​

ಇದೇ ನಿಜವೆಂದು ನಂಬಿದ ಫ್ಯಾನ್ಸ್

ಸನ್ನಿ ಲಿಯೋನ್ ಫೇಕ್ ಅಕೌಂಟ್​ನಿಂದ ಮಾಡಲಾದ ಕಮೆಂಟ್​ನ ಅನೇಕರು ನಂಬಿದ್ದಾರೆ. ಇದು ನಿಜಕ್ಕೂ ಸನ್ನಿ ಲಿಯೋನ್ ಕೊಟ್ಟ ಉತ್ತರ ಎಂದು ಅನೇಕರು ಭಾವಿಸಿದ್ದಾರೆ. ಉತ್ತರ ನೀಡಿದ ಫೇಕ್​ ಅಕೌಂಟ್​ಗೆ ಯಾವುದೇ ಬ್ಲ್ಯೂಟಿಕ್ ಇಲ್ಲ. ಹೀಗಾಗಿ, ಇದು ನಕಲಿ ಖಾತೆ ಎಂದು ಹೇಳುವ ಪ್ರಯತ್ನ ಕೆಲವರಿಂದ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ