Sunny Leone: ಅಶ್ಲೀಲ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ‘ಧರ್ಮ ಪ್ರೊಡಕ್ಷನ್​’, ‘ಯಶ್​ ರಾಜ್​ ಫಿಲ್ಮ್ಸ್​’ಗೆ ಹೋಲಿಸಿದ ಸನ್ನಿ ಲಿಯೋನ್​

Yash Raj Films: ಸನ್ನಿ ಲಿಯೋನ್​ ಅವರು ಅಶ್ಲೀಲ ಸಿನಿಮಾಗಳಲ್ಲಿ ನಟಿಸುವಾಗ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಈಗ ನೆನಪಿಸಿಕೊಂಡಿದ್ದಾರೆ. ಕಷ್ಟದ ದಿನಗಳ ಬಗ್ಗೆ ಅವರು ಮಾತನಾಡಿದ್ದಾರೆ.

Sunny Leone: ಅಶ್ಲೀಲ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ‘ಧರ್ಮ ಪ್ರೊಡಕ್ಷನ್​’, ‘ಯಶ್​ ರಾಜ್​ ಫಿಲ್ಮ್ಸ್​’ಗೆ ಹೋಲಿಸಿದ ಸನ್ನಿ ಲಿಯೋನ್​
ಸನ್ನಿ ಲಿಯೋನ್​
Follow us
ಮದನ್​ ಕುಮಾರ್​
|

Updated on: Jul 16, 2023 | 12:59 PM

ನಟಿ ಸನ್ನಿ ಲಿಯೋನ್​ (Sunny Leone) ಅವರು ಒಂದು ಕಾಲದಲ್ಲಿ ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನೀಲಿ ಚಿತ್ರಗಳ ಲೋಕದಲ್ಲಿ ಅವರಿಗೆ ಸಖತ್​ ಬೇಡಿಕೆ ನಿರ್ಮಾಣ ಆಗಿತ್ತು. ಹಾಗಿದ್ದರೂ ಕೂಡ ಅವರು ಆ ಕ್ಷೇತ್ರವನ್ನು ಬಿಟ್ಟುಬಂದರು. ನೀಲಿ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು, ಸಂಪೂರ್ಣವಾಗಿ ಅವರು ಬಾಲಿವುಡ್​ನಲ್ಲಿ ತೊಡಗಿಕೊಂಡರು. ಆರಂಭದಲ್ಲಿ ಸನ್ನಿ ಲಿಯೋನ್​ ಅವರನ್ನು ಬಾಲಿವುಡ್​ (Bollywood) ಮಂದಿ ವಿಚಿತ್ರವಾಗಿ ನೋಡುತ್ತಿದ್ದರು. ಈಗ ಹಳೆಯ ವೃತ್ತಿಯನ್ನು ಮರೆತು ಅವರು ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಸನ್ನಿ ಲಿಯೋನ್​ ಅವರು ‘ಧರ್ಮ ಪ್ರೊಡಕ್ಷನ್​’ (Dharma Productions) ಮತ್ತು ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆಗಳನ್ನು ಅಶ್ಲೀಲ ಸಿನಿಮಾಗಳ ನಿರ್ಮಾಣ ಸಂಸ್ಥೆಗಳಿಗೆ ಹೋಲಿಸಿದ್ದಾರೆ. ಅದಕ್ಕೆ ಕಾರಣ ಏನು? ಇಲ್ಲಿದೆ ಉತ್ತರ..

ಸನ್ನಿ ಲಿಯೋನ್​ ಅವರು ಅಶ್ಲೀಲ ಸಿನಿಮಾಗಳಲ್ಲಿ ನಟಿಸುವಾಗ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಈಗ ನೆನಪಿಸಿಕೊಂಡಿದ್ದಾರೆ. ಕಷ್ಟದ ದಿನಗಳ ಬಗ್ಗೆ ಅವರು ಮಾತನಾಡಿದ್ದಾರೆ. ಅಶ್ಲೀಲ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ದೊಡ್ಡ ದೊಡ್ಡ ಕಂಪನಿಗಳು ಮುಂಚೂಣಿಯಲ್ಲಿವೆ. ಅಂತಹ ಕೆಲವು ಬ್ಯಾನರ್​ಗಳ ಜೊತೆ ಸನ್ನಿ ಲಿಯೋನ್​ ಕೆಲಸ ಮಾಡಿದ್ದರು. ಆ ಸಂಸ್ಥೆಗಳನ್ನು ಅವರು ‘ಧರ್ಮ ಪ್ರೊಡಕ್ಷನ್​’ ಮತ್ತು ‘ಯಶ್​ ರಾಜ್​ ಫಿಲ್ಮ್ಸ್​’ ಬ್ಯಾನರ್​ಗೆ ಹೋಲಿಸಿದ್ದಾರೆ. ಅಂದರೆ ಬಾಲಿವುಡ್​ನಲ್ಲಿ ‘ಧರ್ಮ ಪ್ರೊಡಕ್ಷನ್​’ ಹಾಗೂ ‘ಯಶ್​ ರಾಜ್​ ಫಿಲ್ಮ್ಸ್​’ ಹೇಗೆ ಪ್ರಭಾವಿ ಆಗಿವೆಯೋ ಅದೇ ರೀತಿ ಅಶ್ಲೀಲ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆಗಳ ಜೊತೆ ತಾವು ಕೆಲಸ ಮಾಡಿರುವುದಾಗಿ ಸನ್ನಿ ಲಿಯೋನ್​ ಹೇಳಿದ್ದಾರೆ.

ಇದನ್ನೂ ಓದಿ: Sunny Leone: ಬೀಚ್​ನಲ್ಲಿ ಸನ್ನಿ ಲಿಯೋನ್ ಮಸ್ತ್ ಪೋಸ್; ಇಲ್ಲಿದೆ ಫೋಟೋ ಆಲ್ಬಂ

‘ನಾನು ಪೋರ್ನ್​ ಇಂಡಸ್ಟ್ರಿಯ ಅತ್ಯುತ್ತಮವಾದ ಕಂಪನಿಗಳ ಜೊತೆ ಕೆಲಸ ಮಾಡಿದ್ದೇನೆ. ಬೆಸ್ಟ್​ ಎಂದರೆ ಅವುಗಳನ್ನು ನಾನು ‘ಧರ್ಮ ಪ್ರೊಡಕ್ಷನ್​’ ಮತ್ತು ‘ಯಶ್​ ರಾಜ್​ ಫಿಲ್ಮ್ಸ್​’ ಜೊತೆ ಮಾತ್ರ ಹೋಲಿಸಬಹುದು. ಅದೇ ನನ್ನ ಜಗತ್ತು ಆಗಿತ್ತು’ ಎಂದು ಸನ್ನಿ ಲಿಯೋನ್​ ಹೇಳಿದ್ದಾರೆ. ‘ಒಪ್ಪಂದ ಪತ್ರದಲ್ಲಿನ ಪ್ರತಿ ಸಾಲುಗಳನ್ನು ನಾನು ಸರಿಯಾಗಿ ಓದುತ್ತಿದ್ದೆ. ತಪ್ಪಿದ್ದರೆ ಸರಿಪಡಿಸುತ್ತಿದ್ದೆ. ಅದರಿಂದ ಕಂಪನಿಗಳು ತಮಗೆ ಬೇಕಾಗಿದ್ದನ್ನು ಪಡೆಯಬಹುದು. ನಾನು ನನಗೆ ಬೇಕಾಗಿದ್ದನ್ನು ಪಡೆಯಬಹುದು. ಹಾಗಾಗಿ ನನ್ನನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದಿದ್ದಾರೆ ಸನ್ನಿ ಲಿಯೋನ್​.

ಇದನ್ನೂ ಓದಿ: ಸನ್ನಿ ಲಿಯೋನ್​ ಬಾಲ್ಯದಲ್ಲಿ ಹೇಗಿದ್ರು ನೋಡಿ; ಇಲ್ಲಿವೆ ಕ್ಯೂಟ್​ ಫೋಟೋಸ್

ಅಶ್ಲೀಲ ಸಿನಿಮಾ ಇಂಡಸ್ಟ್ರಿ ಬಗ್ಗೆ ಜನರು ತಿಳಿದುಕೊಂಡಿರುವುದೇ ಬೇರೆ. ಅದರ ಒಳಗೆ ನಡೆಯುವುದೇ ಬೇರೆ. ಇನ್ನುಳಿದ ನಟಿಯರಿಗೆ ಹೋಲಿಸಿದರೆ ಸನ್ನಿ ಲಿಯೋನ್​ ಅವರು ಆ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ತುಂಬ ಕಷ್ಟಪಡಬೇಕಿತ್ತು. ಯಾಕೆಂದರೆ ಬೇರೆ ನಟಿಯರು ಮಾಡುತ್ತಿದ್ದ ಅನೇಕ ಕೆಲಸಗಳನ್ನು ಮಾಡಲು ಸನ್ನಿ ಲಿಯೋನ್​ ಒಪ್ಪಿಕೊಂಡಿರಲಿಲ್ಲ. ಹಾಗಾಗಿ ತಾವು ಬಹಳ ಕಷ್ಟಪಟ್ಟು ಆ ಕ್ಷೇತ್ರದಲ್ಲಿ ಯಶಸ್ಸು ಪಡೆದಿರುವುದಾಗಿ ಸನ್ನಿ ಲಿಯೋನ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ