Suhana Khan: ಹಣೆಗೆ ಬಿಂದಿ ಇಟ್ಟುಕೊಂಡು ಪೋಸ್​ ನೀಡಿದ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​; ಫೋಟೋ ವೈರಲ್​

Suhana Khan Viral Photo: ಸುಹಾನಾ ಖಾನ್​ ಅವರು ಕೆಂಪು ಸೀರೆ ಧರಿಸಿದ್ದಾರೆ. ಅದಕ್ಕೆ ಒಪ್ಪುವ ರೀತಿಯಲ್ಲಿ ಕೆಂಪು ಬಿಂದಿ ಇಟ್ಟುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ.

Suhana Khan: ಹಣೆಗೆ ಬಿಂದಿ ಇಟ್ಟುಕೊಂಡು ಪೋಸ್​ ನೀಡಿದ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​; ಫೋಟೋ ವೈರಲ್​
ಸುಹಾನಾ ಖಾನ್​ ವೈರಲ್​ ಫೋಟೋ
Follow us
ಮದನ್​ ಕುಮಾರ್​
|

Updated on: Jul 16, 2023 | 3:30 PM

ನಟಿ ಸುಹಾನಾ ಖಾನ್​ (Suhana Khan) ಅವರು ಒಂದಿಲ್ಲೊಂದು ಕಾರಾಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಆ ಸಿನಿಮಾ ರಿಲೀಸ್​ ಆಗೋದಕ್ಕಿಂತ ಮುನ್ನವೇ ಸುಹಾನಾ ಖಾನ್​ ಅವರು ಸ್ಟಾರ್​ ನಟಿಯರ ರೀತಿ ಮಿಂಚುತ್ತಿದ್ದಾರೆ. ದಿನದಿಂದ ದಿನಕ್ಕೆ ಶಾರುಖ್​ ಖಾನ್​ (Shah Rukh Khan) ಪುತ್ರಿಯ​ಅಭಿಮಾನಿ ಬಳಗ ಹಿರಿದಾಗುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ಸುಹಾನಾ ಖಾನ್​ ಅವರನ್ನು ಸದ್ಯಕ್ಕೆ ಬರೋಬ್ಬರಿ 39 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಗಳಿಗಾಗಿ ಅವರು ಆಗಾಗ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ಶೇರ್​ ಮಾಡಿಕೊಂಡಿರುವ ಒಂದು ಫೋಟೋ ವೈರಲ್​ ಆಗಿದೆ. ಸುಹಾನಾ ಖಾನ್​ ಅವರು ಹಣೆಗೆ ಬಿಂದಿ (Bindi) ಇಟ್ಟುಕೊಂಡು ಪೋಸ್​ ನೀಡಿದ್ದಾರೆ.

ಸುಹಾನಾ ಖಾನ್​ ಅವರು ಕೆಂಪು ಸೀರೆ ಧರಿಸಿದ್ದಾರೆ. ಅದಕ್ಕೆ ಒಪ್ಪುವ ರೀತಿಯಲ್ಲಿ ಕೆಂಪು ಬಿಂದಿ ಇಟ್ಟುಕೊಂಡಿದ್ದಾರೆ. ಕಸಿನ್​ ಮತ್ತು ಗೆಳೆತಿಯ ಜೊತೆ ಸೇರಿ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ತಮ್ಮ ಖಾತೆಗಳಲ್ಲಿ ಈ ಫೋಟೋವನ್ನು ಹಂಚಿಕೊಂಡು ಖುಷಿಪಡುತ್ತಿದ್ದಾರೆ.

ಇದನ್ನೂ ಓದಿ: Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ವ್ಯಕ್ತಿತ್ವ ಹೇಗಿದೆ? ಎಲ್ಲವನ್ನೂ ವಿವರಿಸಿದ ನೃತ್ಯ ನಿರ್ದೇಶಕ

ಅಚ್ಚುಕಟ್ಟಾಗಿ ಡ್ರೆಸ್​ ಮಾಡಿಕೊಂಡ ಕಾರಣಕ್ಕೆ ಸುಹಾನಾ ಖಾನ್​ ಅವರು ಈ ಮೊದಲು ಕೂಡ ಮೆಚ್ಚುಗೆ ಪಾತ್ರವಾಗಿದ್ದರು. ಅನೇಕ ಜಾಗತಿಕ ಮಟ್ಟದ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಸುಹಾನಾ ಖಾನ್​ ನಡೆದುಕೊಂಡ ರೀತಿಗೆ ಎಲ್ಲರೂ ಭೇಷ್​ ಎಂದಿದ್ದರು. ಆಗ ಶಾರುಖ್​ ಖಾನ್​ ಅವರು ಖುಷಿಯಿಂದ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ‘ಈ ಚಾನ್ಸ್​ ಪಡೆದಿದ್ದಕ್ಕೆ ಅಭಿನಂದನೆಗಳು ಮಗಳೇ. ನಿನ್ನ ಬಟ್ಟೆ, ನಡೆ, ನುಡಿ ಎಲ್ಲವೂ ಉತ್ತಮವಾಗಿದೆ. ನಿನ್ನನ್ನು ಸರಿಯಾಗಿ ಬೆಳೆಸಿದ್ದಕ್ಕೆ ನಾನು ಕ್ರಿಡಿಟ್​ ತೆಗೆದುಕೊಳ್ಳಲೇ? ಲವ್​ ಯೂ’ ಎಂದು ಶಾರುಖ್​ ಖಾನ್​ ಅವರು ಪೋಸ್ಟ್​ ಮಾಡಿದ್ದು ವೈರಲ್​ ಆಗಿತ್ತು.

ಇದನ್ನೂ ಓದಿ: ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆದ ಶಾರುಖ್ ಮಗಳು ಸುಹಾನಾ ಖಾನ್

ಸುಹಾನಾ ಖಾನ್​ ನಟನೆಯ ಮೊದಲ ಸಿನಿಮಾ ‘ದಿ ಆರ್ಚೀಸ್​’ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಿಲ್ಲ. ಅದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಆದರೆ ಸುಹಾನಾ ಅಭಿನಯಿಸುವ 2ನೇ ಸಿನಿಮಾ ಅದ್ದೂರಿಯಾಗಿ ಥಿಯೇಟರ್​ನಲ್ಲಿ ತೆರೆಕಾಣಬೇಕು ಎಂದು ಫ್ಯಾನ್ಸ್ ಬಯಸಿದ್ದಾರೆ. ಆ ಚಿತ್ರಕ್ಕೆ ಶಾರುಖ್​ ಖಾನ್​ ಅವರು ಬಂಡವಾಳ ಹೂಡುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಹೆಚ್ಚಿನ ಅಪ್​ಡೇಟ್​ ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ