AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕ ಅಂಗಡಿಯಲ್ಲಿ ಮಗಳಿಗಾಗಿ ಚಾಕೊಲೇಟ್​ ಖರೀದಿಸಿದ ಯಶ್​; ಫೋಟೋ ವೈರಲ್​

ಯಶ್​ ಅವರು ಅಪ್ಪಟ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಪತ್ನಿ ಮತ್ತು ಮಕ್ಕಳ ಸಲುವಾಗಿ ಅವರು ಸಮಯ ಮೀಸಲಿಡುತ್ತಾರೆ. ಮಗಳ ಸಲುವಾಗಿ ಅವರು ಪುಟ್ಟ ಅಂಗಡಿಗೆ ತೆರಳಿ ಚಾಕೊಲೇಟ್​ ಖರೀದಿಸಿರುವ ಫೋಟೋ ವೈರಲ್​ ಆಗಿದೆ. ಯಶ್​ ಅವರ ಸರಳತೆ ಕಂಡು ಫ್ಯಾನ್ಸ್​ ವಾವ್​ ಎನ್ನುತ್ತಿದ್ದಾರೆ. ಈಗ ‘ಟಾಕ್ಸಿಕ್​’ ಚಿತ್ರದ ಕೆಲಸಗಳಲ್ಲಿ ಯಶ್ ಬ್ಯುಸಿ ಆಗಿದ್ದಾರೆ.

ಚಿಕ್ಕ ಅಂಗಡಿಯಲ್ಲಿ ಮಗಳಿಗಾಗಿ ಚಾಕೊಲೇಟ್​ ಖರೀದಿಸಿದ ಯಶ್​; ಫೋಟೋ ವೈರಲ್​
ಯಶ್​, ರಾಧಿಕಾ ಪಂಡಿತ್​
ಮದನ್​ ಕುಮಾರ್​
|

Updated on: Feb 17, 2024 | 10:35 AM

Share

ಕನ್ನಡದ ನಟ ಯಶ್​ (Rocking Star Yash) ಅವರು ಪ್ಯಾನ್​ ಇಂಡಿಯಾ ಹೀರೋ ಆಗಿ ಬೆಳೆದಿದ್ದಾರೆ. ಅವರಿಗೆ ವಿಶ್ವಾದ್ಯಂತ ಈಗ ಅಭಿಮಾನಿಗಳು ಇದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಯಶ್​ ಇಂದಿಗೂ ಕೂಡ ಸರಳತೆಯನ್ನು ಮರೆತಿಲ್ಲ. ಅಪ್ಪಟ ಫ್ಯಾಮಿಲಿ ಮ್ಯಾನ್​ ಆಗಿ ಅವರು ಜೀವನ ಸಾಗಿಸುತ್ತಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit)​ ಮತ್ತು ಮಕ್ಕಳಾದ ಆಯ್ರಾ ಹಾಗೂ ಯಥರ್ವ್​ ಸಲುವಾಗಿ ಯಶ್​ ಸಮಯ ಹೊಂದಿಸಿಕೊಳ್ಳುತ್ತಾರೆ. ಜನ ಜಂಗುಳಿಯ ನಡುವೆ ಮಗಳನ್ನು ಹೆಗಲ ಮೇಲೆ ಹೊತ್ತು ಅವರು ಸಾಗುತ್ತಾರೆ. ಪುತ್ರಿಯಾಗಿ (Yash Daughter) ಚಿಕ್ಕ ಅಂಗಡಿಯಲ್ಲಿ ಯಶ್​ ಚಾಕೊಲೇಟ್​ ಖರೀದಿಸಿದ್ದಾರೆ. ಆ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಕುಟುಂಬದ ಜೊತೆ ತೆರಳಿದ್ದಾಗ ಮಗಳಿಗೆ ಚಾಕೊಲೇಟ್​ ಕೊಡಿಸುವ ಸಲುವಾಗಿ ಯಶ್​ ಅವರು ಪೆಟ್ಟಿಗೆ ಅಂಗಡಿಗೆ ಭೇಟಿ ನೀಡಿದ್ದಾರೆ. ಮಗಳು ಕೇಳಿದ ಚಾಕೊಲೇಟ್​ ಕೊಡಿಸಿದ್ದಾರೆ. ಅವರ ಇಡೀ ಕುಟುಂಬವೇ ಸಿಂಪಲ್​. ಪೆಟ್ಟಿಗೆ ಅಂಗಡಿಗೆ ಯಶ್​ ತೆರಳಿದ್ದಾಗ ಅವರ ಜೊತೆ ರಾಧಿಕಾ ಪಂಡಿತ್​ ಕೂಡ ಇದ್ದರು. ಸಿಂಪಲ್​ ಮಹಿಳೆಯ ರೀತಿ ಅವರು ಅಲ್ಲಿ ಕುಳಿತಿರುವ ಫೋಟೋ ವೈರಲ್​ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾನಲ್ಲಿ ಶಾರುಖ್ ಖಾನ್ ನಟಿಸ್ತಾರಾ? ಯಶ್ ಕೊಟ್ಟರು ಉತ್ತರ

ತುಂಬ ಕಷ್ಟದಿಂದ ಬೆಳೆದುಬಂದ ನಟ ಯಶ್​ ಅವರಿಗೆ ಇಂದು ಬಹುಭಾಷೆಯಲ್ಲಿ ಬೇಡಿಕೆ ಇದೆ. ಹಾಗಂತ ಅವರಲ್ಲಿನ ಸರಳತೆ ಕಾಣೆಯಾಗಿಲ್ಲ. ಕಷ್ಟ ಮತ್ತು ಬಡತನವನ್ನು ಕಂಡು ಬಂದಿರುವ ಅವರಿಗೆ ಎಲ್ಲ ಅನುಭವ ಇದೆ. ಮಗಳಿಗಾಗಿ ಸಾಮಾನ್ಯರಂತೆ ಪುಟ್ಟ ಅಂಗಡಿಗೆ ಬಂದ ಯಶ್​ ಅವರ ಫೋಟೋ ನೋಡಿ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ. ಈ ಗುಣ ಎಲ್ಲರಿಗೂ ಇಷ್ಟ ಆಗಿದೆ. ಅನೇಕರಿಗೆ ಯಶ್​ ಸಹಾಯ ಮಾಡಿದ್ದಾರೆ. ಆ ಕಾರಣದಿಂದಲೂ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಯಶ್ ಫೋಟೋ:

‘ರಾಕಿಂಗ್​ ಸ್ಟಾರ್​’ ಯಶ್​ ಅವರು ಈಗ ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸೂಪರ್​ ಹಿಟ್​ ಆದ ನಂತರ ಯಶ್​ ಈ ಸಿನಿಮಾ ಒಪ್ಪಿಕೊಂಡಿದ್ದರಿಂದ ನಿರೀಕ್ಷೆ ಜೋರಾಗಿದೆ. ಟೈಟಲ್​ ಟೀಸರ್​ ನೋಡಿ ಫ್ಯಾನ್ಸ್​ ವಾವ್​ ಎಂದಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈ ಚಿತ್ರದಿಂದ ಬರುವ ಪ್ರತಿಯೊಂದು ಅಪ್​ಡೇಟ್​ಗಾಗಿ ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ