AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಬೆಳೆದು ಬಂದ ಹಾದಿಯ ಬಗ್ಗೆ ಆಪ್ತ ಗೆಳೆಯ ವಿವರಿಸಿದ್ದು ಹೀಗೆ

Darshan Friend: ನಟ ದರ್ಶನ್ ತೂಗುದೀಪ ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ನಟನಾಗುವ ಮುಂಚೆಯಿಂದಲೂ ದರ್ಶನ್ ಅವರನ್ನು ಹತ್ತಿರದಿಂದ ನೋಡಿರುವ ಶಿವಕುಮಾರ್, ದರ್ಶನ್ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಬೆಳೆದು ಬಂದ ಹಾದಿಯ ಬಗ್ಗೆ ಆಪ್ತ ಗೆಳೆಯ ವಿವರಿಸಿದ್ದು ಹೀಗೆ
Follow us
ಮಂಜುನಾಥ ಸಿ.
|

Updated on: Feb 17, 2024 | 9:42 PM

ನಟ ದರ್ಶನ್ (Darshan) ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿವೆ. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ದರ್ಶನ್ ಈಗ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಅವರ ಈ 25 ವರ್ಷಗಳ ಸಿನಿಮಾ ಪಯಣ ಸುಲಭದ್ದಾಗಿರಲಿಲ್ಲ. ಆರಂಭದಲ್ಲಿ ನಾನಾ ಕಷ್ಟಗಳನ್ನು ಎದುರಿಸಿ ನಟರಾದವರು, ನಟನಾದ ಮೇಲೆಯೂ ಸಾಕಷ್ಟು ಸವಾಲುಗಳನ್ನು ಎದುರಿಸಿ ಸತತ ಪರಿಶ್ರಮ ಪಟ್ಟು ಈಗಿರುವ ಸ್ಥಾನಕ್ಕೆ ಏರಿದ್ದಾರೆ ನಟ ದರ್ಶನ್. ತೂಗುದೀಪ ದರ್ಶನ್​ರ 25 ವರ್ಷಗಳ ಪಯಣವನ್ನು ಹತ್ತಿರದಿಂದ ನೋಡಿದ ಗೆಳೆಯರು ಕೆಲವರಷ್ಟೆ. ಅವರಲ್ಲಿ ಒಬ್ಬರು ನಿರ್ಮಾಪಕ ಶಿವಕುಮಾರ್. ತಮ್ಮ ಆಪ್ತ ಗೆಳೆಯ ಆರಂಭದಲ್ಲಿ ಎದುರಿಸಿದ ಕಷ್ಟಗಳು, ಬೆಳೆದ ರೀತಿ ಬಗ್ಗೆ ಅಪರೂಪದ ಸಂಗತಿಗಳನ್ನು ಶಿವಕುಮಾರ್ ಹಂಚಿಕೊಂಡಿದ್ದಾರೆ.

‘ಮೈಸೂರಿನಲ್ಲಿ ಒಂದು ಕೇಬಲ್ ಆಫೀಸ್ ಇತ್ತು ಅದು ನಮ್ಮ ಅಡ್ಡ. ಎಷ್ಟೋ ವರ್ಷಗಳ ಕಾಲ ದರ್ಶನ್ ಆ ಕೇಬಲ್ ಆಫೀಸ್​ನಲ್ಲೇ ಮಲಗಿದ್ದಾರೆ. ಈಗ ಮೈಸೂರಿನ ಗ್ಯಾಂಗ್ ಏನಿದೆಯೋ ಎಲ್ಲರಿಗೂ ಅದೇ ಅಡ್ಡ. ಆ ಗ್ಯಾಂಗ್ ಅನ್ನು ಕಟ್ಟಿದ್ದು ಸಹ ದರ್ಶನ್. ಆಗಿನಿಂದಲೂ ದರ್ಶನ್ ಶ್ರಮ ಜೀವಿ. ಹಸು ಸಾಕುತ್ತಿದ್ದರು, ಹಾಲು ಹಾಕುತ್ತಿದ್ದರು. ಹೊಲಕ್ಕೆ ಹೋಗಿ ಹಸುಗಳಿಗೆ ಮೇವು ಕೊಯ್ದು ತರುತ್ತಿದ್ದರು. ಹಸುಗಳ ಶೆಡ್ಡು ಕ್ಲೀನ್ ಮಾಡುತ್ತಿದ್ದರು’ ಎಂದು ಹಳೆಯ ದರ್ಶನ್ ಅನ್ನು ಶಿವಕುಮಾರ್ ನೆನಪು ಮಾಡಿಕೊಂಡರು.

ಇದನ್ನೂ ಓದಿ:21 ವರ್ಷದ ಬಳಿಕ ಒಂದಾದ ದರ್ಶನ್-ಪ್ರೇಮ್, ಈ ಬಾರಿ ರೌಡಿಸಂ ಕಥೆಯಲ್ಲ?

‘ಆಗಿನಿಂದಲೂ ದರ್ಶನ್​ಗೆ ನಟನಾಗಬೇಕು ಎಂಬ ಆಸೆ ಇತ್ತು. ಒಮ್ಮೆ ಮೈಸೂರಿನ ಪ್ರಭಾತ್ ಚಿತ್ರಮಂದಿರದ ಮುಂದೆ ಹೋಗುವಾಗ ‘ಆಕಸ್ಮಿಕ’ ಸಿನಿಮಾದ ಕಟೌಟ್ ನೋಡಿ ನಾನೂ ಸಿನಿಮಾ ಹೀರೋ ಆಗ್ತೀನಾ, ನನ್ನ ಕಟೌಟ್ ಹೀಗೆ ಬೀಳುತ್ತಾ ಎಂದು ಕೇಳುತ್ತಿದ್ದ. ಅದರಂತೆ ಕಷ್ಟಪಟ್ಟ ನೀನಾಸಂಗೆ ಹೋದ ನಟನೆ ಕಲಿತರು, ಅಲ್ಲಿಂದ ಬಂದು ಲೈಟ್ ಬಾಯ್ ಆಗಿ ಕೆಲಸ ಮಾಡಿದರು. ಗೌರಿಶಂಕರ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದರು. ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಬಹಳ ಕಷ್ಟಪಟ್ಟರು, ಎಲ್ಲಿಯೂ ತಮ್ಮ ಹಿನ್ನೆಲೆ ಹೇಳಿಕೊಳ್ಳಲಿಲ್ಲ, ಕೊನೆಗೆ ನಾಯಕನಾದರು’ ಎಂದು ಗೆಳೆಯನನ್ನು ಶಿವಕುಮಾರ್ ಕೊಂಡಾಡಿದರು.

ಸ್ಟಾರ್ ನಟನಾದರೂ ಗೆಳೆಯರ ಬಳಿಕ ಗೆಳೆಯನಂತೆ ಇರುತ್ತಾರೆ. ಎಷ್ಟೋ ಜನ ಗೆಳೆಯರಿಗೆ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ್ದಾರೆ. ನಮ್ಮನ್ನೆಲ್ಲ ಮೊದಲು ಫ್ಲೈಟ್ ಹತ್ತಿಸಿದ್ದು ದರ್ಶನ್. ಶೂಟಿಂಗ್​ಗೆ ನಮ್ಮನ್ನು ಕರೆದುಕೊಂಡು ಹೋದರೆ ನಮ್ಮ ಜೊತೆಗೆ ಸಾಮಾನ್ಯ ರೂಂನಲ್ಲಿ ಉಳಿಯುತ್ತಿದ್ದ. ನಾನು ನಿರ್ಮಾಪಕ ಆದಮೇಲೆ, ನನಗೆ ಸಹ ಮೂರು ಬಾರಿ ಕಾಲ್​ಶೀಟ್ ಕೊಟ್ಟಿದ್ದ ಆದರೆ ಮೂರೂ ಬಾರಿಯೂ ಸಿನಿಮಾ ಮಾಡಲು ಆಗಲಿಲ್ಲ. ಆದರೂ ನನ್ನ ಸಿನಿಮಾಗಳಿಗೆ ಬೆಂಬಲ ನೀಡುತ್ತಾನೆ’ ಎಂದರು ಶಿವಕುಮಾರ್.

ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬದಂದು ಅವರಿಗೆ ದೃಷ್ಟಿ ತೆಗೆದ ಮಹಿಳೆಯರ ಮಾತು

‘ದರ್ಶನ್ ಇನ್ನೂ ಏಳೆಂಟು ವರ್ಷಗಳ ಕಾಲ ಬ್ಯುಸಿಯಾಗಿದ್ದಾರೆ. ಅವರು ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಲು ಅವರಿಗೆ ಏಳರಿಂದ ಎಂಟು ವರ್ಷ ಸಮಯ ಬೇಕು. ಅವರು ಚಿತ್ರರಂಗದ ಬಗ್ಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಮಾಡುವ ಕಮಿಟ್​ಮೆಂಟ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ‘ಕಾಟೇರ’ ಸಿನಿಮಾ ಬರದೇ ಇದ್ದಿದ್ದರೆ ಚಿತ್ರರಂಗಕ್ಕೆ ಕಷ್ಟವಾಗಿರುತ್ತಿತ್ತು. ಚಿತ್ರರಂಗ ಇಂದು ಉಸಿರಾಡುತ್ತಿದೆ ಎಂದರೆ ಅದಕ್ಕೆ ದರ್ಶನ್ ಕಾರಣ’ ಎಂದರು ಶಿವಕುಮಾರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್