ದರ್ಶನ್ ತೂಗುದೀಪ (Darshan Thoogudeepa) ಅವರು ಇಂದು ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ದರ್ಶನ್ರ ಮನವಿಯಂತೆ ಹಲವು ಅಭಿಮಾನಿಗಳು ದವಸ-ಧಾನ್ಯಗಳನ್ನು ತಂದು ದರ್ಶನ್ರಿಗೆ ಅರ್ಪಿಸಿದ್ದಾರೆ. ರೈತ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮಂದಿಯೂ ಸಹ ಆಗಮಿಸಿ ದರ್ಶನ್ ಅವರಿಗೆ ಇಂದು ಶುಭ ಹಾರೈಸಿದರು. ಇದರ ನಡುವೆ ಕೆಲವು ಮಹಿಳಾ ಅಭಿಮಾನಿಗಳು ಒಟ್ಟಿಗೆ ಬಂದು ದರ್ಶನ್ ಅವರಿಗೆ ದೃಷ್ಟಿ ತೆಗೆದಿದ್ದು ವಿಶೇಷವಾಗಿ ಕಾಣಿಸಿತು. ಹಲವಾರು ಮಂದಿ ಮಹಿಳೆಯರು ಒಟ್ಟಿಗೆ ದರ್ಶನ್ರಿಗೆ ದೃಷ್ಟಿ ತೆಗೆದರು. ಆ ಮಹಿಳೆಯರ ತಂಡ ಟಿವಿ9 ಜೊತೆ ಮಾತನಾಡಿದೆ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ