Viral Video: ಸೀಮಂತ ಶಾಸ್ತ್ರಕ್ಕೆ ಒಣ ದ್ರಾಕ್ಷಿ,ಗೋಡಂಬಿಯಿಂದ ತಯಾರಿಸಿದ ಆಭರಣ ತೊಟ್ಟು ಮಿಂಚಿದ ಮಹಿಳೆ
ಸೀಮಂತ ಶಾಸ್ತ್ರಕ್ಕೆ ಮಹಿಳೆಯೊಬ್ಬಳು ಡ್ರೈ ಫ್ರೂಟ್ಸ್ಗಗಳಿಂದ ತಯಾರಿಸಿದ ಆಭರಣಗಳನ್ನು ತೊಟ್ಟು ಮಿಂಚಿದ್ದಾರೆ. ಕಿವಿಯೋಲೆ, ಸೊಂಟದ ಡಾಬು, ಸರ, ಕೈ ಪಟ್ಟಿ ಎಲ್ಲದರಲ್ಲೂ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಗೂ ಪಿಸ್ತಾಗಳನ್ನು ಕಾಣಬಹುದು. ವಿಡಿಯೋ ಇಲ್ಲಿದೆ ನೋಡಿ.
ಮದುವೆ ಅಥವಾ ಯಾವುದೇ ವಿಶೇಷ ಕಾರ್ಯಕ್ರಮ ಬಂತೆಂದರೆ ಸಾಕು ಮಹಿಳೆಯರು ಹೊಸ ಬಟ್ಟೆ , ಒಡವೆ ಖರೀದಿಯಲ್ಲೇ ಬ್ಯೂಸಿಯಾಗಿ ಬಿಡುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಸೀಮಂತ ಶಾಸ್ತ್ರಕ್ಕೆ ಡ್ರೈ ಫ್ರೂಟ್ಸ್ಗಗಳಿಂದ ತಯಾರಿಸಿದ ವಿಶೇಷ ವಿನ್ಯಾಸದ ಆಭರಣ ತೊಟ್ಟು ಮಿಂಚಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಗರ್ಭಿಣಿಯವಿಯೋಲೆ, ಸೊಂಟದ ಡಾಬು, ಸರ, ಕೈ ಪಟ್ಟಿ ಎಲ್ಲದರಲ್ಲೂ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಗೂ ಪಿಸ್ತಾಗಳನ್ನು ಕಾಣಬಹುದು. ವಿಡಿಯೋ ಇಲ್ಲಿದೆ ನೋಡಿ.
ವೈರಲ್ ವಿಡಿಯೋ ಇಲ್ಲಿದೆ:
View this post on Instagram
ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ
ಈ ವಿಡಿಯೊವನ್ನು @vasudhaa_makeover ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 12ಮಿಲಿಯನ್ ಅಂದರೆ ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 172,316 ಲೈಕ್ಸ್ಗಳನ್ನು ಪಡೆದುಕೊಂಡಿದೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಜನರು ತಿನ್ನುವ ಆಹಾರವನ್ನು ಏಕೆ ವೇಸ್ಟ್ ಮಾಡುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಅಲಂಕಾರದ ಹೆಸರಿನಲ್ಲಿ ಡ್ರೈ ಫ್ರೂಟ್ಸ್ ಹಾಳುಮಾಡುತ್ತೀರಿ’ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ