ಗುದದ್ವಾರಕ್ಕೆ ಬಲವಂತವಾಗಿ ಗಾಳಿ ತುಂಬಿದ ವ್ಯಕ್ತಿ: ಜೀವನ್ಮರಣ ಹೋರಾಟದಲ್ಲಿ 12ರ ಬಾಲಕ
12ವರ್ಷದ ಪುಟ್ಟ ಬಾಲಕನನ್ನು ಹಿಡಿದು ವ್ಯಕ್ತಿಯೊಬ್ಬ ಬಲವಂತವಾಗಿ ಆತನ ಗುದದ್ವಾರಕ್ಕೆ ಗಾಳಿ ತುಂಬಿಸಿದ್ದಾನೆ. ಹೊಟ್ಟೆ ನೋವು ತಾಳಲಾರದೇ ಪುಟ್ಟ ಬಾಲಕ ಅಲ್ಲೇ ಕುಸಿದು ಬಿದ್ದಿದ್ದು, ವಿಷಯ ತಿಳಿದ ಸ್ಥಳೀಯರು ತಕ್ಷಣ ಪುಟ್ಟ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಂಧ್ರಪ್ರದೇಶ: ಚೇಷ್ಟೆಗೂ ಮಿತಿಯಿದೆ, ಮನುಷ್ಯನ ಕ್ರೌರ್ಯಕ್ಕೆ ಮಿತಿಯೇ ಇಲ್ಲವೇ? ಎಂದು ಈ ಘಟನೆಯ ಬಗ್ಗೆ ಕೇಳಿದಾಗ ಹೀಗೊಂದು ಪ್ರಶ್ನೆ ಮನಸಲ್ಲಿ ಮೂಡುವುದು ಸಹಜ. ವಾಲಿಬಾಲ್ ಆಡುತ್ತಿದ್ದ ವೇಳೆ ಬಾಲ್ನಲ್ಲಿ ಗಾಳಿ ಖಾಲಿಯಾಗಿದೆ ಎಂದು ಗಾಳಿ ತುಂಬಿಸಲು ಹೋಗಿದ್ದ 12ವರ್ಷದ ಪುಟ್ಟ ಬಾಲಕನನ್ನು ಹಿಡಿದು ವ್ಯಕ್ತಿಯೊಬ್ಬ ಬಲವಂತವಾಗಿ ಆತನ ಗುದದ್ವಾರಕ್ಕೆ ಗಾಳಿ ತುಂಬಿಸಲಾಗಿದೆ. ಬಾಲಕ ತೀವ್ರ ಅಸ್ವಸ್ಥನಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀರಾಮುಲು ಅನಿಕೆಪಲ್ಲಿಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, 12 ವರ್ಷದ ಶ್ರೀಪೊಟ್ಟಿ ಶ್ರೀರಾಮುಲು ಎಂಬ ಬಾಲಕ ಬುಧವಾರ ತನ್ನ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ. ಈ ವೇಳೆ ಬಾಲ್ನಲ್ಲಿ ಗಾಳಿ ಖಾಲಿಯಾಗಿದೆ. ಮಕ್ಕಳು ಗಾಳಿ ತುಂಬಿಸಲು ಏರ್ ಪಂಪ್‌ಗಾಗಿ ಸಮೀಪದ ಗ್ರಾಮದ ವಾಲಿಬಾಲ್ ಆಡುವ ಯುವಕರ ಬಳಿಗೆ ತೆರಳಿದ್ದಾರೆ. ಅಲ್ಲಿದ್ದ ರಾಜಾ ಎನ್ನುವ ವ್ಯಕ್ತಿ ಶ್ರೀರಾಮುಲು ಅನ್ನು ಬಲವಂತವಾಗಿ ಹಿಡಿದು ಆತನ ಗುದದ್ವಾರದೊಳಗೆ ಗಾಳಿ ತುಂಬಿಸಿದ್ದಾನೆ.
ಇದನ್ನೂ ಓದಿ: ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
ಹೊಟ್ಟೆ ನೋವು ತಾಳಲಾರದೇ ಪುಟ್ಟ ಬಾಲಕ ಅಲ್ಲೇ ಕುಸಿದು ಬಿದ್ದಿದ್ದು, ವಿಷಯ ತಿಳಿದ ಸ್ಥಳೀಯರು ತಕ್ಷಣ ಪುಟ್ಟ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಹೀನಾ ಕೃತ್ಯವನ್ನು ಎಸಗಿದ ವ್ಯಕ್ತಿಯ ಮೇಲೆ ಈಗಾಗಲೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ