ಈ ವೈರಲ್​​ ಜೀನ್ಸ್​​ ಪ್ಯಾಂಟ್​ ಕಂಡು ‘ಬೇಸಿಗೆಗೆ ಹೇಳಿ ಮಾಡಿಸಿದ ಜೀನ್ಸ್’​​ ಎಂದ ನೆಟ್ಟಿಗರು

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ "ಸುಡು ಬಿಸಿಲಿಗೆ ಜೀನ್ಸ್​​ ಧರಿಸಲು ಸಾಧ್ಯವಿಲ್ಲ. ಆದರೆ ಇದು ಬೇಸಿಗೆಗೆ ಹೇಳಿ ಮಾಡಿಸಿದ ಜೀನ್ಸ್" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಈ ವೈರಲ್​​ ಜೀನ್ಸ್​​ ಪ್ಯಾಂಟ್​ ಕಂಡು 'ಬೇಸಿಗೆಗೆ ಹೇಳಿ ಮಾಡಿಸಿದ ಜೀನ್ಸ್'​​ ಎಂದ ನೆಟ್ಟಿಗರು
Follow us
ಅಕ್ಷತಾ ವರ್ಕಾಡಿ
|

Updated on: Apr 19, 2024 | 12:15 PM

ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಹೆಸರಿನಲ್ಲಿ ವಿಚಿತ್ರ ರೀತಿಯ ಬಟ್ಟೆ ಬರೆಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ ವಿಚಿತ್ರವಾದ ಜೀನ್ಸ್​​ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಹರಿದಿರುವಂತೆ ವಿನ್ಯಾಸಗೊಳಿಸಲಾಗಿರುವ ಡೆನಿಮ್ ಜೀನ್ಸ್ ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಅಂದರೆ ಜೀನ್ಸ್ ಹೆಚ್ಚು ಹರಿದಿದ್ದಷ್ಟೂ ಬೆಲೆ ಜಾಸ್ತಿ. ಆದರೆ ಇಲ್ಲೊಂದು ವೈರಲ್​​ ಆಗಿರುವ ವಿಡಿಯೋದ ಜೀನ್ಸ್​​ ಕಂಡು ನೆಟ್ಟಿಗರು ದಂಗಾಗಿ ಹೋಗಿದ್ದಾರೆ.

ಈ ವೈರಲ್​ ವಿಡಿಯೋವನ್ನು @chefinhodobras ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ತಿಂಗಳುಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 19.1 ಮಿಲಿಯನ್​​ ಅಂದರೆ 1.9 ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 304,992 ಹೆಚ್ಚು ಜನರು ವಿಡಿಯೋಗೆ ಲೈಕ್​ ಮಾಡಿದ್ದು, ಸಾಕಷ್ಟು ಹಾಸ್ಯಸ್ಪದ ಕಾಮೆಂಟುಗಳು ಕೂಡ ಬಂದಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Kaique (@chefinhodobras)

ಮತ್ತಷ್ಟು ಓದಿ: ಖಾಸಗಿ ಕಂಪನಿ ಕೆಲಸ ಬಿಟ್ಟು ಹಂದಿ ಸಾಕಾಣಿಕೆಯಿಂದ ಯಶಸ್ಸು ಕಂಡ 26ರ ಯುವತಿ

“ಸುಡು ಬಿಸಿಲಿಗೆ ಜೀನ್ಸ್​​ ಧರಿಸಲು ಸಾಧ್ಯವಿಲ್ಲ. ಆದರೆ ಇದು ಬೇಸಿಗೆಗೆ ಹೇಳಿ ಮಾಡಿಸಿದ ಜೀನ್ಸ್” ಎಂದು ನೆಟ್ಟಿಗರೊಬ್ಬರು ಬರೆದುಕೊಂಡರೆ ಮತ್ತೊಬ್ಬರು “ಇದನ್ನು ಹಾಕುವುದು ಹೇಗೆ?, ಈಜೀನ್ಸ್​​ ಹಾಕದ್ದಿದ್ದರೂ ನಡೆಯುತ್ತದೆ” ಎಂದು ಹಾಸ್ಯಸ್ಪದವಾಗಿ ಬರೆದುಕೊಂಡಿದೆ. ವಿಡಿಯೋದಲ್ಲಿ ಈ ರೀತಿಯ ಲಕ್ಷಾಂತದ ಹಾಸ್ಯಸ್ಪದ ಕಾಮೆಂಟ್​​ಗಳನ್ನು ಕಾಣಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ