ಗೋಫಸ್ಟ್ ಗಾಯದ ಮೇಲೆ ಬರೆ; ಎಲ್ಲಾ 54 ವಿಮಾನಗಳನ್ನು ಮರಳಿಸಲು ದೆಹಲಿ ಹೈಕೋರ್ಟ್ ಆದೇಶ

Go First Airlines: ಗೋಫಸ್ಟ್ ಏರ್ಲೈನ್ಸ್​ಗೆ ಗುತ್ತಿಗೆಗೆ ನೀಡಲಾಗಿದ್ದ 54 ವಿಮಾನಗಳನ್ನು ಐದು ಕಾರ್ಯದಿನದೊಳಗೆ ಡೀರಿಜಿಸ್ಟರ್ ಮಾಡಬೇಕೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಬಳಿಕ ಈ ವಿಮಾನಗಳನ್ನು ಗುತ್ತಿಗೆದಾರ ಸಂಸ್ಥೆಗಳಿಗೆ ಮರಳಿಸುವ ಜವಾಬ್ದಾರಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರವಾದ ಎಎಐ ಮತ್ತು ಡಿಜಿಸಿಎಗೆ ಕೋರ್ಟ್ ವಹಿಸಿದೆ. ಆರ್ಥಿಕ ದಿವಾಳಿ ಸ್ಥಿತಿಯಿಂದ ಚೇತರಿಸಿಕೊಳ್ಳಲು ಹೆಣಗುತ್ತಿರುವ ಗೋಫಸ್ಟ್ ಏರ್ಲೈನ್ಸ್​ಗೆ ಇದು ಹಿನ್ನಡೆಯಾಗಿದೆ.

ಗೋಫಸ್ಟ್ ಗಾಯದ ಮೇಲೆ ಬರೆ; ಎಲ್ಲಾ 54 ವಿಮಾನಗಳನ್ನು ಮರಳಿಸಲು ದೆಹಲಿ ಹೈಕೋರ್ಟ್ ಆದೇಶ
ಗೋಫಸ್ಟ್ ಏರ್ಲೈನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2024 | 7:10 PM

ನವದೆಹಲಿ, ಏಪ್ರಿಲ್ 26: ಗೋ ಫಸ್ಟ್ ಏರ್​ಲೈನ್ ಸಂಸ್ಥೆಗೆ ತಾವು ನೀಡಿದ್ದ 54 ವಿಮಾನಗಳ ನೊಂದಣಿ ರದ್ದು ಮಾಡುವಂತೆ ವಿಮಾನ ಗುತ್ತಿಗೆದಾರರು (aircraft lessors) ಮಾಡಿದ ಮನವಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದೆ. ಐದು ಕಾರ್ಯದಿನದಲ್ಲಿ (working days) 54 ವಿಮಾನಗಳನ್ನು ಡೀರಿಜಿಸ್ಟರ್ ಮಾಡುವಂತೆ ಕೋರ್ಟ್ ಆದೇಶಿಸಿದೆ. ಈ ವಿಮಾನಗಳು ಸುಸ್ಥಿತಿಯಲ್ಲಿವೆಯಾ ಎಂದು ಪರಿಶೀಲಿಸಿ ಭಾರತದಿಂದ ಹೊರಕ್ಕೆ ಸಾಗಿಸಲು ಗುತ್ತಿಗೆದಾರ ಸಂಸ್ಥೆಗಳಿಗೆ ಸಹಾಯವಾಗಬೇಕೆಂದು ಡಿಜಿಸಿಎ ಮತ್ತು ಏರ್​ಪೋರ್ಟ್ ಪ್ರಾಧಿಕಾರಕ್ಕೆ (ಎಎಐ) ನಿರ್ದೇಶನ ಕೂಡ ನೀಡಿದೆ. ಇದರೊಂದಿಗೆ ದಿವಾಳಿ ಸ್ಥಿತಿಯಲ್ಲಿರುವ ಗೋಫಸ್ಟ್ ಏರ್ಲೈನ್ಸ್​ನ ಪುನಶ್ಚೇತನದ ಹಾದಿ ಮತ್ತೆ ಮಸುಕಾಗಿದೆ.

ಈ ಆದೇಶಕ್ಕೆ ತಡೆಯಾಜ್ಞೆ ತರಲು ಗೋಫಸ್ಟ್ ಪ್ರಯತ್ನಿಸಬಹುದು. ಅದು ಸಾಧ್ಯವಾಗದೇ ಹೋದರೆ ಎಲ್ಲಾ 54 ವಿಮಾನಗಳನ್ನು ಅದು ಕಳೆದುಕೊಳ್ಳಬೇಕಾಗುತ್ತದೆ. ಮತ್ತೆ ಹೊಸದಾಗಿ ವಿಮಾನಗಳ ಗುತ್ತಿಗೆ ಪಡೆಯಬೇಕಾಗುತ್ತದೆ. ಹಣಕಾಸು ಸಂಕಷ್ಟದಲ್ಲಿರುವ ಏರ್ಲೈನ್ ಸಂಸ್ಥೆಗೆ ಒಂದು ರೀತಿಯಲ್ಲಿ ಇದು ಇನ್ನಷ್ಟು ಹತಾಶೆಯ ಕೂಪಕ್ಕೆ ದೂಡಿದಂತಾಗುತ್ತದೆ.

ಪೆಂಬ್ರೋಕ್ ಏವಿಯೇಶನ್, ಆಕ್ಸಿಪಿಟರ್ ಇನ್ವೆಸ್ಟ್ಮೆಂಟ್ ಏರ್​ಕ್ರಾಫ್ಟ್ 2, ಇಒಎಸ್ ಏವಿಯೇಶನ್, ಎಸ್​ಎಂಬಿಸಿ ಏವಿಯೇಶನ್ ಮೊದಲಾದ ಕಂಪನಿಗಳು ಗುತ್ತಿಗೆಯ ಮೇಲೆ ವಿಮಾನಗಳನ್ನು ಗೋಫಸ್ಟ್​ಗೆ ನೀಡಿದ್ದವು. ಆದರೆ, ಹಣಕಾಸು ಸಂಕಷ್ಟಕ್ಕೆ ಸಿಲುಕಿ ವಿಮಾನ ಹಾರಾಟವನ್ನು ಗೋಫಸ್ಟ್ ನಿಲ್ಲಿಸಿತ್ತು. ಗೋಫಸ್ಟ್​ಗೆ ನೀಡಿದ್ದ ತಮ್ಮ ವಿಮಾನಗಳನ್ನು ಡೀರಿಜಿಸ್ಟರ್ ಮಾಡುವಂತೆ ಗುತ್ತಿಗೆದಾರ ಸಂಸ್ಥೆಗಳು ಮನವಿ ಮಾಡಿದ್ದವು. ಆದರೆ, ಅಷ್ಟರಲ್ಲಿ ಗೋಫಸ್ಟ್ ಸಂಸ್ಥೆ ಮೊರಾಟೋರಿಯಂ ಅರ್ಜಿ ಹಾಕಿತ್ತು. ಹೀಗಾಗಿ, ಡಿಜಿಸಿಎ ಗೋಫಸ್ಟ್ ವಿಮಾನಗಳನ್ನು ಡೀರಿಜಿಸ್ಟರ್ ಮಾಡಲು ನಿರಾಕರಿಸಿತ್ತು. ಇದು ಆಗಿದ್ದು 2023ರ ಮೇ ತಿಂಗಳಲ್ಲಿ.

ಇದನ್ನೂ ಓದಿ: ಕೇರಳದ ವಿಳಿಂಜಮ್ ಪೋರ್ಟ್; ಭಾರತದ ಮೊದಲ ಟ್ರಾನ್ಸ್​ಶಿಪ್ಮೆಂಟ್ ಬಂದರು ಕಾರ್ಯಾಚರಣೆಗೆ ಒಪ್ಪಿಗೆ ಪಡೆದ ಅದಾನಿ ಗ್ರೂಪ್

ಇದೀಗ ದೆಹಲಿ ಹೈಕೋರ್ಟ್ ವಿಮಾನ ಗುತ್ತಿಗೆದಾರ ಕಂಪನಿಗಳ ಪರವಾಗಿ ತೀರ್ಪು ನೀಡಿದೆ. ಗೋಫಸ್ಟ್​ನ ವ್ಯಾಜ್ಯ ಪರಿಹಾರಕ್ಕೆ ನಿಯೋಜನೆಯಾಗಿರುವ ರೆಸಲ್ಯೂಶನ್ ಪ್ರೊಫೆಷನಲ್ ಅಥವಾ ಆರ್​ಪಿ ಅವರು ಈಗ 54 ವಿಮಾನಗಳ ಮೈಂಟೆನೆನ್ಸ್ ವಿವರಗಳನ್ನು ಗುತ್ತಿಗೆದಾರರಿಗೆ ಕೊಡುವಂತೆ ಕೋರ್ಟ್ ಆದೇಶ ಪಡೆದಿದ್ದಾರೆ. ವಿಮಾನ ಹಾರಾಟಕ್ಕೆ ಅರ್ಹವಾಗಿದೆಯಾ ಎಂಬುದನ್ನು ಪರಿಶೀಲಿಸಲು ಏರ್ಪೋರ್ಟ್ ಅಥಾರಿಟಿಗೆ ಜವಾಬ್ದಾರಿ ಕೊಡಲಾಗಿದೆ.

ಗೋಫಸ್ಟ್ ಖರೀದಿಗೆ ಎರಡು ಸಂಸ್ಥೆಗಳ ಬಿಡ್ಡಿಂಗ್

ಗೋಫಸ್ಟ್ ಏರ್ಲೈನ್ಸ್ ಸಂಸ್ಥೆಯನ್ನು ಮಾರಾಟಕ್ಕೆ ಇಡಲಾಗಿದೆ. ಸದ್ಯ ಎರಡು ಬಿಡ್ ಸಲ್ಲಿಕೆ ಆಗಿವೆ. ಸ್ಪೈಸ್​ಜೆಟ್ ಏರ್ಲೈನ್ಸ್​ನ ಮುಖ್ಯಸ್ಥ ಅಜಯ್ ಸಿಂಗ್ ಅವರು ಬ್ಯುಸಿ ಬೀ ಏರ್ವೇಸ್ ಸಂಸ್ಥೆ ಜೊತೆ ಸೇರಿ ಬಿಡ್ ಸಲ್ಲಿಕೆ ಮಾಡಿದ್ದಾರೆ. ಇಲ್ಲಿ ಅಜಯ್ ಸಿಂಗ್ ವೈಯಕ್ತಿಕವಾಗಿ ಸೇರಿ ಬ್ಯುಸಿ ಬೀ ಏರ್ವೇಸ್ ಜೊತೆ ಉದ್ದಿಮೆ ರಚಿಸಿದ್ದಾರೆ. ಅದರಡಿಯಲ್ಲಿ ಗೋಫಸ್ಟ್ ಖರೀದಿಗೆ ಬಿಡ್ಡಿಂಗ್ ಮಾಡಲಾಗಿದೆ. ವರದಿ ಪ್ರಕಾರ 1,600 ಕೋಟಿ ರೂ ಅನ್ನು ಇದು ಆಫರ್ ಮಾಡಿದೆ.

ಇದನ್ನೂ ಓದಿ: ಚೀನಾ ಅವಲಂಬನೆ ತಪ್ಪಿಸಲು ಟಾಟಾದಿಂದ ಮಹತ್ವದ ಹೆಜ್ಜೆ; ಭಾರತದಲ್ಲೇ ಹೈಟೆಕ್ ಮೆಷಿನ್ ತಯಾರಿಕೆ

ಮತ್ತೊಂದು ಬಿಡ್ಡಿಂಗ್ ಸಲ್ಲಿಕೆಯಾಗಿರುವುದು ಶಾರ್ಜಾ ಮೂಲದ ಸ್ಕೈ ಒನ್ ಸಂಸ್ಥೆಯಿಂದ. ಇದು ಎಷ್ಟು ಹಣದ ಆಫರ್ ಮಾಡಿದೆ ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ