ಜಿಡಿಪಿ ದರಕ್ಕೆ ತಕ್ಕಂತೆ ಬೆಲೆ ಏರಿಕೆ ಇಲ್ಲವಲ್ಲ; ಭಾರತದ ಆರ್ಥಿಕ ವೃದ್ಧಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಘುರಾಮ್ ರಾಜನ್

Raghuram Rajan on Indian growth story: ಭಾರತದ ಜಿಡಿಪಿ ಬೆಳವಣಿಗೆ ಶೇ. 8ರಿಂದ 8.5 ಇದೆ ಎಂದು ಅನಿಸುವುದಿಲ್ಲ. ನೈಜ ಜಿಡಿಪಿ ದರ ಶೇ. 6ರಿಂದ 6.5 ಮಾತ್ರವೇ ಇರಬಹುದು ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಯೂನಿವರ್ಸಿಟಿಯೊಂದರಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಭಾರತದಲ್ಲಿ ಜಿಡಿಪಿ ವೃದ್ಧಿ ವೇಗವಾಗಿ ಇದ್ದಿದ್ದರೆ ಹಣದುಬ್ಬರವೂ ಹೆಚ್ಚಿರಬೇಕಿತ್ತು ಎಂದು ವಾದಿಸಿದ್ದಾರೆ. ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೆ ಸುಬ್ರಮಣಿಯನ್ ಜೊತೆ ಸಂವಾದದಲ್ಲಿ ರಘುರಾಮ್ ರಾಜನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜಿಡಿಪಿ ದರಕ್ಕೆ ತಕ್ಕಂತೆ ಬೆಲೆ ಏರಿಕೆ ಇಲ್ಲವಲ್ಲ; ಭಾರತದ ಆರ್ಥಿಕ ವೃದ್ಧಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಘುರಾಮ್ ರಾಜನ್
ರಘುರಾಮ್ ರಾಜನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 30, 2024 | 12:10 PM

ನವದೆಹಲಿ, ಏಪ್ರಿಲ್ 30: ಕೋವಿಡ್ ಬಳಿಕ ಭಾರತದ ಜಿಡಿಪಿ ದರ (gdp growth rate) ಸತತವಾಗಿ ಶೇ. 7ರ ಮಟ್ಟಕ್ಕಿಂತ ಮೇಲಿದೆ. ಆದರೆ, ಈ ಮಟ್ಟದ ಬೆಳವಣಿಗೆಯ ಅಂಕಿ ಅಂಶಗಳ ಬಗ್ಗೆ ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ (Raghuram Rajan) ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಜಿಡಿಪಿ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಹಣದುಬ್ಬರ ವ್ಯಕ್ತವಾಗುತ್ತಿಲ್ಲ. ಅಂತೆಯೇ ಅವರು ಭಾರತದ ನೈಜ ಆರ್ಥಿಕ ಬೆಳವಣಿಗೆ ಶೇ. 6ರಿಂದ 6.5ರಷ್ಟು ಮಾತ್ರವೇ ಇರಬಹುದು ಎಂದು ಅಂದಾಜು ಮಾಡಿದ್ದಾರೆ. ಅಮೆರಿಕದ ಇಲಿನಾಯ್ಸ್ ರಾಜ್ಯದ ನಾರ್ಥ್ ವೆಸ್ಟರ್ನ್ ಯೂನಿವರ್ಸಿಟಿಯ ಕೆಲ್ಲಾಗ್ ಬಿಸಿನೆಸ್ ಸ್ಕೂಲ್​ನಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಘುರಾಜನ್ ಮಾತನಾಡುತ್ತಿದ್ದರು. ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಜೊತೆಗಿನ ಸಂವಾದದ ವೇಳೆ ಭಾರತದ ಜಿಡಿಪಿ ಬಗ್ಗೆ ರಾಜನ್ ತಮ್ಮ ವಿಶ್ಲೇಷಣೆ ನೀಡಿದ್ದಾರೆ.

ಜಿಡಿಪಿ ದರಕ್ಕೂ ಹಣದುಬ್ಬರಕ್ಕೂ ತಾಳೆ ಆಗುತ್ತಿಲ್ಲವಾ?

ಭಾರತದ ಜಿಡಿಪಿ ಕೆಲ ನಾಲ್ಕು ತ್ರೈಮಾಸಿಕ ಅವಧಿಯಿಂದ ಸರಾಸರಿಯಾಗಿ ಸುಮಾರು ಶೇ. 8ರ ದರದಲ್ಲಿ ಬೆಳೆದಿದೆ. ಹಣದುಬ್ಬರ ಈ ವೇಳೆ ತಕ್ಕಮಟ್ಟಿಗೆ ತಹಬದಿಗೆ ಬಂದಿದೆ. ಇದು ಆರ್ಥಿಕತೆಯ ಸುಸ್ಥಿತಿಗೆ ದ್ಯೋತಕವಾಗಿದೆ ಎಂದನಿಸಬಹುದು. ಆದರೆ, ರಘುರಾಮ್ ರಾಜನ್ ಹೇಳುವ ಪ್ರಕಾರ ಜಿಡಿಪಿ ವೃದ್ಧಿಯ ವೇಗ ಹೆಚ್ಚಾದರೆ ಹಣದುಬ್ಬರವೂ ಹಾಗೇ ಹೆಚ್ಚಾಗಬೇಕಾಗುತ್ತದೆ. ಆದರೆ, ಭಾರತದಲ್ಲಿ ಹಾಗಾಗಿಲ್ಲ ಎನ್ನುತ್ತಾರೆ.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಕಪ್ಪುಹಣ ಹೆಚ್ಚಾಗುತ್ತೆ: ಹಿರಿಯ ವಕೀಲ ಆರ್ಯಮ ಸುಂದರಂ

‘ನೀವು ವೇಗವಾಗಿ ಬೆಳೆಯುತ್ತಿದ್ದು ಸರಬರಾಜು ಕಡಿಮೆ ಆಗಿ ಹೋದರೆ ಹಣದುಬ್ಬರ ಹೆಚ್ಚಾಗಿ ಹೋಗುತ್ತದೆ. ನಿಮ್ಮ ಕಾರ್ಮಿಕ ವೆಚ್ಚ, ಸಂಬಳ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ, ಭಾರತದಲ್ಲಿ ಈ ರೀತಿ ಆಗಿಲ್ಲ,’ ಎಂದು ರಾಜನ್ ಹೇಳಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಮಿಕರಿದ್ದಾರೆ. ಕೇಂದ್ರ ಒತ್ತು ಕೊಡುತ್ತಿರುವ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಾಗಲೀ, ಸರ್ವಿಸ್ ಕ್ಷೇತ್ರದಲ್ಲಾಗಲೀ ಕಾರ್ಮಿಕರ ಸಂಖ್ಯೆ ಹೆಚ್ಚಾಗಿಲ್ಲ. ಒಂದು ದೇಶ ವೇಗವಾಗಿ ಬೆಳೆಯುತ್ತಿದೆ ಎಂದರೆ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತಿದ್ದರೆ ಆ ವೃದ್ಧಿಯು ವೃದ್ಧಿಯೇ ಅಲ್ಲ. ಕಡಿಮೆ ಉತ್ಪನ್ನಶೀಲತೆ ಇರುವ ಕೃಷಿಯಲ್ಲಿ ಜನರು ಯಾಕೆ ಉದ್ಯೋಗ ಕಂಡುಕೊಳ್ಳುತ್ತಾರೆ? ಬೇರೆಡೆ ಕೆಲಸ ಪಡೆಯಬೇಕಲ್ಲವೇ ಎಂದು ರಘುರಾಮ್ ರಾಜನ್ ಪ್ರಶ್ನೆ ಮಾಡಿದ್ದಾರೆ.

ಸರ್ಕಾರಿ ಕೆಲಸಗಳಿಗೆ ಮುಗಿಬೀಳುತ್ತಿರುವುದು ಯಾಕೆ?

ಇದೇ ವೇಳೆ ರಘುರಾಮ್ ರಾಜನ್ ಮತ್ತೊಂದು ತರ್ಕ ಮುಂದಿಟ್ಟಿದ್ದಾರೆ. ಅವರ ಪ್ರಕಾರ ಭಾರತದಲ್ಲಿ ಕಾರ್ಮಿಕ ಕ್ಷೇತ್ರ ಗಟ್ಟಿಯಾಗಿಲ್ಲ. ಈ ಕಾರಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ವೃದ್ಧಿ ಆಗಿದೆಯಾದರೂ ಅದು ಬಂಡವಾಳ ಹೆಚ್ಚಿರುವ ಕಡೆಯಲ್ಲಿ ಮಾತ್ರ. ಆದರೆ, ಕಾರ್ಮಿಕರ ಅಗತ್ಯತೆ ಇರುವ ಕಡೆಯಲ್ಲಿ ಈ ಬೆಳವಣಿಗೆ ಕಾಣುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಭಾರತೀಯನಾಗದಿದ್ದರೆ ಅಮೆರಿಕದಲ್ಲಿ ಸಿಇಒ ಆಗೋಕ್ಕಾಗಲ್ಲ: ಬದಲಾದ ವಾಸ್ತವ ಬಿಚ್ಚಿಟ್ಟಿದ್ದಾರೆ ಅಮೆರಿಕದ ರಾಯಭಾರಿ

ಕಾರು, ದ್ವಿಚಕ್ರ ವಾಹನಗಳ ಮಾರಾಟ ಅಂಕಿ ಅಂಶಗಳು ಏನು ಹೇಳುತ್ತವೆ?

ಭಾರತದಲ್ಲಿ ಕಾರುಗಳ ಮಾರಾಟ ಹೆಚ್ಚಾಗಿರುವುದು ಮತ್ತು ದ್ವಿಚಕ್ರ ವಾಹನಗಳ ಮಾರಾಟ ಕಡಿಮೆ ಆಗಿರುವ ಸಂಗತಿಯನ್ನೂ ರಾಜನ್ ಉಲ್ಲೇಖಿಸಿದ್ದಾರೆ. ಹೆಚ್ಚು ಹಣ ಉಳ್ಳವರು ಬಳಸುವ ಕಾರುಗಳ ಮಾರಾಟ ಸಂಖ್ಯೆ ಕೋವಿಡ್ ಮುಂಚಿನ ಪ್ರಮಾಣಕ್ಕಿಂತ ಹೆಚ್ಚಿದೆ. ಮಧ್ಯಮ ವರ್ಗದವರು ಬಳಸುವ ದ್ವಿಚಕ್ರ ಮಾರಾಟ ಪ್ರಮಾಣವು ಇನ್ನೂ ಕೋವಿಡ್ ಮುಂಚಿನ ಸ್ಥಿತಿಗೆ ಮರಳಿಲ್ಲ ಎಂದು ಹೇಳುವ ಮಾಜಿ ಆರ್​​ಬಿಐ ಗವರ್ನರ್ ರಾಜನ್, ಇದು ಉದ್ಯೋಗ ಸಾಕಷ್ಟು ಸೃಷ್ಟಿಯಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್