ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ 15x15x15 ಸೂತ್ರದಿಂದ ಬೇಗ ಕೋಟಿ ಸಂಪಾದಿಸಿ
Mutual Fund Investment Tricks: ಮ್ಯುಚುವಲ್ ಫಂಡ್ ಎಸ್ಐಪಿಯಲ್ಲಿ 15x15x15 ಹೂಡಿಕೆ ತಂತ್ರ ಗಮನದಲ್ಲಿಡಿ. ಇದರಲ್ಲಿ ಪ್ರತೀ ತಿಂಗಳು 15 ಸಾವಿರ ರೂ ಹಣವನ್ನು 15 ವರ್ಷದವರೆಗೆ ಕಟ್ಟಿದರೆ ಒಂದು ಕೋಟಿ ರೂ ಗಳಿಸಲು ಸಾಧ್ಯವಾಗುತ್ತದೆ. 15 ವರ್ಷದಲ್ಲಿ ನೀವು ಮಾಡುವ 27 ಲಕ್ಷ ರೂ ಹೂಡಿಕೆ ಒಂದು ಕೋಟಿಯಾಗಬೇಕಾದರೆ ನಿಮ್ಮ ಹೂಡಿಕೆ ವರ್ಷದಲ್ಲಿ ಶೇ. 15ರ ದರದಲ್ಲಿ ಬೆಳೆಯಬೇಕು. ಇದುವೇ 15x15x15 ಸೂತ್ರ.
ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಮ್ಯೂಚುವಲ್ ಫಂಡ್ (Mutual fund) ಪ್ರಮುಖವಾದುದು. ಹೂಡಿಕೆಯ ಎಬಿಸಿಡಿ ತಿಳಿಯದವರಿಂದ ಹಿಡಿದು ಪರಿಣಿತರವರೆಗೂ ಹೆಚ್ಚಿನ ಜನರು ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡುತ್ತಾರೆ. ಬೇರೆ ಉದ್ಯೋಗದಲ್ಲಿದ್ದು ಷೇರು ಮಾರುಕಟ್ಟೆ (stock market) ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗದೇ ಇದ್ದವರು ನಿಶ್ಚಿಂತೆಯಿಂದ ಮ್ಯೂಚುವಲ್ ಫಂಡ್ನಲ್ಲಿ ಹಣ ಇನ್ವೆಸ್ಟ್ ಮಾಡಬಹುದು. ಅದರಲ್ಲೂ ಎಸ್ಐಪಿ ಪ್ಲಾನ್ ಪ್ರಕಾರ ನಿಯಮಿತವಾಗಿ ಹೂಡಿಕೆ ಮಾಡಬಹುದು. ಹೂಡಿಕೆಯಲ್ಲಿ ಬಹಳ ಮಹತ್ತರವಾದ ಗುಣ ದೀರ್ಘಕಾಲೀನ ಹೂಡಿಕೆ. ಹಾಗೆಯೇ, 15 x 15 x 15 ಸೂತ್ರ ಸದಾ ನೆನಪಿರಲಿ. ಬಹಳ ಬೇಗ ಒಂದು ಕೋಟಿ ರೂ ಗಳಿಸಲು ಈ ಸೂತ್ರ ಬಹಳ ಮುಖ್ಯ.
ಏನಿದು 15x15x15 ಸೂತ್ರ?
ಇಲ್ಲಿ ಮೂರು 15 ಇದೆ. ತಿಂಗಳಿಗೆ 15,000 ರೂ ಹಣವನ್ನು ಮ್ಯೂಚುವಲ್ ಫಂಡ್ನ ಎಸ್ಐಪಿಯಲ್ಲಿ ಹೂಡಿಕೆ ಮಾಡುತ್ತಾ ಹೋಗುವುದು. 15 ವರ್ಷ ಕಾಲ ಹೂಡಿಕೆ ಮುಂದುವರಿಸಬೇಕು. ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ ವಾರ್ಷಿಕವಾಗಿ ಶೇ. 15ರ ದರದಲ್ಲಿ ಲಾಭ ಮಾಡಿರಬೇಕು.
ಇದನ್ನೂ ಓದಿ: ಪರ್ಸನಲ್ ಲೋನ್ನಿಂದ ಲಾಭ ಏನು, ನಷ್ಟ ಏನು? ಇಲ್ಲಿದೆ ನೀವು ತಿಳಿದಿರಬೇಕಾದ ಅಂಶಗಳು
ಇಲ್ಲಿ 15 ವರ್ಷ ಕಾಲ ಹೂಡಿಕೆ ಮಾಡುವುದು ನಮ್ಮ ನಿಯಂತ್ರಣದಲ್ಲಿರುತ್ತದೆ. ಆದರೆ ಶೇ. 15ರ ದರದಲ್ಲಿ ಫಂಡ್ ಬೆಳೆಯುವುದು ನಮ್ಮ ಕೈಲಿರೋದಿಲ್ಲ. ಆದರೂ ಒಂದು ವೇಳೆ ಮ್ಯೂಚುವಲ್ ಫಂಡ್ ವಾರ್ಷಿಕವಾಗಿ ಶೇ. 15ರಷ್ಟು ಬೆಳೆದಿದ್ದೇ ಆದಲ್ಲಿ 15 ವರ್ಷದಲ್ಲಿ ನಿಮ್ಮ ಹೂಡಿಕೆ ಒಂದು ಕೋಟಿ ರೂ ದಾಟುತ್ತದೆ.
ತಿಂಗಳಿಗೆ 15,000 ರೂನಂತೆ 15 ವರ್ಷ ನೀವು ಕಟ್ಟುವ ಒಟ್ಟು ಮೊತ್ತ 27 ಲಕ್ಷ ರೂ ಆಗುತ್ತದೆ. ವರ್ಷಕ್ಕೆ ಶೇ. 15ರಷ್ಟು ಬೆಳೆದರೆ 15 ವರ್ಷದಲ್ಲಿ 1,01,52,946 ರೂ ಆಗುತ್ತದೆ. ಸುಮಾರು 75 ಲಕ್ಷ ರೂ ಲಾಭ ನಿಮ್ಮದಾಗುತ್ತದೆ.
ಒಂದು ವೇಳೆ ನಿಮ್ಮ ಹೂಡಿಕೆ ಶೇ. 15ರ ಬದಲು ಶೇ. 12ರ ದರದಲ್ಲಿ ಬೆಳೆದಿದ್ದೇ ಆದಲ್ಲಿ ನಿಮಗೆ ಸಿಗುವ ರಿಟರ್ನ್ 75 ಲಕ್ಷ ರೂ ಆಗುತ್ತದೆ. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ಗಳು ಶೇ. 10ರಿಂದ 15ರ ವಾರ್ಷಿಕ ದರದಲ್ಲಿ ಲಾಭ ತರಬಲ್ಲುವು. ಹಲವು ಫಂಡ್ಗಳು ಕಳೆದ 10 ವರ್ಷದಲ್ಲಿ ಶೇ 15ಕ್ಕಿಂತ ಹೆಚ್ಚಿನ ವಾರ್ಷಿಕ ದರದಲ್ಲಿ ಲಾಭ ಮಾಡಿವೆ.
ಇದನ್ನೂ ಓದಿ: ಎಸ್ಐಪಿಯಲ್ಲಿ ತಿಂಗಳಿಗೆ ಕೇವಲ 5,000 ರೂ ಹೂಡಿಕೆ ಆರಂಭಿಸಿ, 5 ಕೋಟಿ ರಿಟರ್ನ್ ಪಡೆಯಿರಿ
ಕಾಂಪೌಂಡಿಂಗ್ ಗುಣ
ದೀರ್ಘಾವಧಿ ಹೂಡಿಕೆಯಲ್ಲಿ ಅನುಕೂಲ ಮಾಡಿಕೊಡುವ ಅಂಶವೆಂದರೆ ಕಾಂಪೌಂಡಿಂಗ್ ಗುಣದ್ದು. ಅಂದರೆ ನಿಮ್ಮ ಹೂಡಿಕೆಯಿಂದ ಬರುವ ಕಾಲ ಕಾಲದ ಲಾಭವು ಒಟ್ಟುಗೂಡುತ್ತಲೇ ಇರುತ್ತದೆ. ಇದರಿಂದ ಹೂಡಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿ ಕಾಂಪೌಂಡಿಂಗ್ ಗುಣದಿಂದ ಲಾಭ ಹೆಚ್ಚಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ