Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ಸನಲ್ ಲೋನ್​ನಿಂದ ಲಾಭ ಏನು, ನಷ್ಟ ಏನು? ಇಲ್ಲಿದೆ ನೀವು ತಿಳಿದಿರಬೇಕಾದ ಅಂಶಗಳು

Personal Loan, Advantages and Disadvantages: ವೈಯಕ್ತಿಕ ಸಾಲ ಬಹಳ ಸುಲಭವಾಗಿರುವ ಸಾಲಗಳಲ್ಲಿ ಒಂದು. ಸರಿಯಾಗಿ ನಿರ್ವಹಿಸಿದರೆ ಪರ್ಸನಲ್ ಲೋನ್ ನಿಮ್ಮ ಕ್ರೆಡಿಟ್ ಸ್ಕೋರ್ ಬಹಳ ಉತ್ತಮಗೊಳ್ಳುತ್ತದೆ. ಭವಿಷ್ಯದಲ್ಲಿ ನಿಮಗೆ ಸರಾಗವಾಗಿ ಸಾಲ ಸಿಗಲು ಅನುಕೂಲ ಮಾಡಿಕೊಡುತ್ತದೆ. ಆದರೆ, ಪರ್ಸನಲ್ ಲೋನ್ ಅನ್​ಸೆಕ್ಯೂರ್ಡ್ ಲೋನ್ ಆದ್ದರಿಂದ ಬ್ಯಾಂಕುಗಳು ಹೆಚ್ಚು ಬಡ್ಡಿದರ ವಿಧಿಸುತ್ತವೆ. ಅದರಲ್ಲೂ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದವರಿಗೆ ಡಬಲ್ ಬಡ್ಡಿ ವಿಧಿಸಬಹುದು.

ಪರ್ಸನಲ್ ಲೋನ್​ನಿಂದ ಲಾಭ ಏನು, ನಷ್ಟ ಏನು? ಇಲ್ಲಿದೆ ನೀವು ತಿಳಿದಿರಬೇಕಾದ ಅಂಶಗಳು
ಪರ್ಸನಲ್ ಲೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 23, 2024 | 11:11 AM

ಬ್ಯಾಂಕುಗಳಲ್ಲಿ ಪಡೆಯಲಾಗುವ ಅತಿಹೆಚ್ಚು ಸಾಲವೆಂದರೆ ಅದು ಪರ್ಸನಲ್ ಲೋನ್. ಬ್ಯಾಂಕುಗಳ ಹೆಚ್ಚಿನ ಆದಾಯ ಇಂಥ ಪರ್ಸನಲ್ ಲೋನ್​ಗಳಿಂದಲೇ (Personal Loan) ಬರುತ್ತದೆ. ತುರ್ತಾಗಿ ಸಾಲ ಪಡೆಯಲು ಇದು ಅನುಕೂಲ. ಆದರೆ, ವೈಯಕ್ತಿಕ ಸಾಲ ಪಡೆದರೆ ಅದರ ಕಂತುಗಳನ್ನು ಬಹಳ ಎಚ್ಚರಿಕೆಯಿಂದ ಪಾವತಿಸುವುದು ಮುಖ್ಯ. ನೀವು ಭವಿಷ್ಯದಲ್ಲಿ ಬೇರಾವುದೇ ಸಾಲ ಪಡೆಯಬೇಕಾದರೆ ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಜೊತೆಗೆ ನಿಮ್ಮ ಹಿಂದಿನ ಸಾಲಗಳ ಕಂತುಗಳನ್ನು ಎಷ್ಟು ನಿಖರವಾಗಿ ಮರುಪಾವತಿ ಮಾಡಿದ್ದೀರಿ ಎಂಬುದನ್ನು ಗಮನಿಸುತ್ತಾರೆ. ಹೀಗಾಗಿ, ಪರ್ಸನಲ್ ಲೋನ್ ಪಡೆದುಕೊಳ್ಳುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾಗಿ ಮರುಪಾವತಿ ಮಾಡುವುದೂ ಬಹಳ ಮುಖ್ಯ.

ಪರ್ಸನಲ್ ಲೋನ್ ವಿಚಾರದಲ್ಲಿ ಈ ಅಂಶಗಳು ತಿಳಿದಿರಲಿ…

ವೈಯಕ್ತಿಕ ಸಾಲಗಳಲ್ಲಿ ಸಾಮಾನ್ಯವಾಗಿ ಬಡ್ಡಿದರ ಹೆಚ್ಚಿರುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವವರಿಗೆ ಈಗ ವರ್ಷಕ್ಕೆ ಶೇ. 12ರಷ್ಟು ಬಡ್ಡಿದರದಲ್ಲಿ ಪರ್ಸನಲ್ ಲೋನ್ ಸಿಗಬಹುದು. ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಸಾಲಕ್ಕೆ ಬಡ್ಡಿದರ ಶೇ. 18ಕ್ಕಿಂತಲೂ ಹೆಚ್ಚಿರಬಹುದು.

ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ದೊಡ್ಡಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗೋಪಾಯ

ಪರ್ಸನಲ್ ಲೋನ್ ಅಡಮಾನರಹಿತ ಸಾಲವಾದ್ದರಿಂದ ಬ್ಯಾಂಕುಗಳು ಈ ಸಾಲದ ಬಗ್ಗೆ ಎಚ್ಚರದಿಂದಿರುತ್ತವೆ. ನೀವು ಸರಿಯಾಗಿ ಮರುಪಾವತಿ ಮಾಡಲಿಲ್ಲವೆಂದರೆ ಡೀಫಾಲ್ಟ್ ಆಗಬಹುದು. ಹಾಗೇನಾದರೂ ಆದರೆ ನಿಮ್ಮ ಕ್ರೆಡಿಟ್ ಸ್ಕೋರ್​ಗೆ ಹೊಡೆತ ಬೀಳುತ್ತದೆ. ಮುಂದೆ ನೀವು ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ಕಷ್ವವಾಗಬಹುದು.

ಕೆಲ ಪರ್ಸನಲ್ ಲೋನ್​ನಲ್ಲಿ ಅವಧಿಗೆ ಮುನ್ನ ಸಾಲ ಮರುಪಾವತಿ ಅವಕಾಶ ಇರುವುದಿಲ್ಲ. ಸಾಲ ಪಡೆಯುವ ಮುನ್ನ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಪರ್ಸನಲ್ ಲೋನ್ ಅಧಿಕ ಬಡ್ಡಿಯದ್ದಾದ್ದರಿಂದ ಅದು ನಿಮ್ಮ ಕೊನೆಯ ಆಯ್ಕೆ ಆಗಿರಬೇಕು. ಸಾಧ್ಯವಾದರೆ ಅಡಮಾನ ಸಾಲ ಪಡೆಯಿರಿ. ಗೋಲ್ಡ್ ಲೋನ್ ಬಹಳ ಉತ್ತಮ ಆಯ್ಕೆ.

ಇದನ್ನೂ ಓದಿ: ಜನರು ಹೆಲ್ತ್ ಇನ್ಷೂರೆನ್ಸ್ ತಿರಸ್ಕರಿಸಲು ಏನು ಕಾರಣ? ಪಾಲಿಸಿ ಮಾಡಿಸಲು ಏನು ಕಾರಣ? ಇಲ್ಲಿದೆ ಇಂಟರೆಸ್ಟಿಂಗ್ ಸೈಕಾಲಜಿ

ಪರ್ಸನಲ್ ಲೋನ್ ಅನುಕೂಲಗಳೇನು?

ನಿಮಗೆ ತುರ್ತಾಗಿ ಮತ್ತು ತಾತ್ಕಾಲಿಕವಾಗಿ ಹಣದ ಅಗತ್ಯ ಬಿದ್ದರೆ ವೈಯಕ್ತಿಕ ಸಾಲ ಅನುಕೂಲವಾಗಿರುತ್ತದೆ.

ವೈಯಕ್ತಿಕ ಸಾಲ ಪಡೆಯುವಾಗ ಕ್ರೆಡಿಟ್ ಸ್ಕೋರ್ ಕಡಿಮೆಗೊಂಡರೂ ನೀವು ಕಂತುಗಳನ್ನು ಸರಿಯಾಗಿ ಕಟ್ಟುತ್ತಾ ಹೋದಲ್ಲಿ ಕ್ರೆಡಿಟ್ ಸ್ಕೋರ್ ಬಹಳ ಉತ್ತಮಗೊಳ್ಳುತ್ತದೆ.

ನೀವು ಹಿಂದೆ ಪರ್ಸನಲ್ ಲೋನ್ ಪಡೆದುಕೊಂಡು ಅದನ್ನು ಸರಿಯಾಗಿ ಕಟ್ಟಿದ್ದರೆ ಬ್ಯಾಂಕುಗಳು ನಿಮಗೆ ಆದ್ಯತೆ ಕೊಡುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ