ಕಡಿಮೆ ಸಂಬಳ ಇದ್ದರೆ, ಉದ್ಯೋಗ ಕಳೆದುಕೊಂಡರೆ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ವಾಸ್ತವಿಕ ಅಂಶಗಳು

Credit score real facts: ಕ್ರೆಡಿಟ್ ಸ್ಕೋರ್ ಬಗ್ಗೆ ಕೆಲವರಿಗೆ ಒಂದಷ್ಟು ಗೊಂದಲಗಳಿವೆ. ಸ್ಕೋರ್ ಮೇಲೆ ಪ್ರಭಾವ ಬೀರುವ ಮತ್ತು ಪ್ರಭಾವ ಬೀರದ ವಿಚಾರಗಳಿವೆ. ಸಂಬಳ ಕಡಿಮೆ ಇದ್ದರೆ ಕ್ರೆಡಿಟ್ ಸ್ಕೋರ್ ಹೆಚ್ಚಾಗುವುದಿಲ್ಲ ಎನ್ನುವ ಭಾವನೆ ಇದೆ. ಹಾಗೆಯೆ ಕೆಲಸ ಹೋದರೆ ಅಥವಾ ಆದಾಯ ನಿಂತರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಇವೆರಡೂ ಅಭಿಪ್ರಾಯ ಅಥವಾ ಭಾವನೆ ತಪ್ಪು. ನಾವು ತೆಗೆದುಕೊಳ್ಳುವ ಸಾಲವನ್ನು ಹೇಗೆ ನಿರ್ವಹಿಸುತ್ತೇವೆ, ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ಹೇಗೆ ಕಟ್ಟುತ್ತೇವೆ ಇತ್ಯಾದಿ ಹಣಕಾಸು ಶಿಸ್ತು ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪ್ರಭಾವಿಸುತ್ತವೆ.

ಕಡಿಮೆ ಸಂಬಳ ಇದ್ದರೆ, ಉದ್ಯೋಗ ಕಳೆದುಕೊಂಡರೆ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ವಾಸ್ತವಿಕ ಅಂಶಗಳು
ಕ್ರೆಡಿಟ್ ಸ್ಕೋರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 07, 2024 | 8:54 AM

ಕ್ರೆಡಿಟ್ ಸ್ಕೋರ್ ಎಂಬುದು ಒಬ್ಬ ವ್ಯಕ್ತಿಯ ಸಾಲ ನಿರ್ವಹಣಾ ಸಾಮರ್ಥ್ಯದ ಪ್ರತೀಕವಾಗಿದೆ. ಸಿಬಿಲ್ ಇತ್ಯಾದಿ ನಾಲ್ಕೈದು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ (credit score) ನೀಡುತ್ತವೆ. ಈ ಕ್ರೆಡಿಟ್ ಸ್ಕೋರ್ ಯಾರದೇ ಹಣಕಾಸು ಜೀವನದಲ್ಲಿ ಬಹಳ ಮಹತ್ವದ್ದಾಗಿರುತ್ತದೆ. 300ರಿಂದ 900ರವರೆಗೆ ಅಂಕಗಳು ಕ್ರೆಡಿಟ್ ಸ್ಕೋರ್​ನಲ್ಲಿ ಇರುತ್ತದೆ. 300 ಕನಿಷ್ಠ ಅಂಕವಾದರೆ, 900 ಗರಿಷ್ಠ ಅಂಕ. 650ಕ್ಕಿಂತಲೂ ಹೆಚ್ಚು ಅಂಕಗಳಿದ್ದರೆ ಅದು ಉತ್ತಮ ಕ್ರೆಡಿಟ್ ಸ್ಕೋರ್. ಬ್ಯಾಂಕುಗಳು ನಮಗೆ ಸಾಲ ನೀಡಲು, ಕ್ರೆಡಿಟ್ ಕಾರ್ಡ್ ನೀಡಲು ಈ ಸ್ಕೋರ್ ಮಾನದಂಡವಾಗಿರುತ್ತದೆ. 750ಕ್ಕಿಂತಲೂ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ಸಾಲ ಸುಲಭವಾಗಿ ಸಿಗುತ್ತದೆ. ಬಡ್ಡಿದರವೂ ಕಡಿಮೆ ಇರುತ್ತದೆ. ನಾವು ಸಾಲವನ್ನು ಶಿಸ್ತುಬದ್ಧವಾಗಿ ಮರುಪಾವತಿ ಮಾಡದೇ ಹೋದರೆ, ಅಥವಾ ಕ್ರೆಡಿಟ್ ಕಾರ್ಡ್ ಬಿಲ್​​ಗಳನ್ನು ಸರಿಯಾದ ದಿನದೊಳಗೆ ಕಟ್ಟದೇ ಹೋದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ಇದೇ ವೇಳೆ, ನಾವು ಉದ್ಯೋಗ ಕಳೆದುಕೊಂಡರೆ, ಅಥವಾ ಸಂಬಳ ಕಡಿಮೆ ಇದ್ದರೆ ಸ್ಕೋರ್ ಕಡಿಮೆ ಆಗುತ್ತದೆ ಎಂಬುದು ಹಲವರ ಶಂಕೆ. ತಜ್ಞರ ಪ್ರಕಾರ ಕ್ರೆಡಿಟ್ ಸ್ಕೋರ್​ಗೂ ಸಂಬಳಕ್ಕೂ, ಉದ್ಯೋಗಕ್ಕೂ ಸಂಬಂಧ ಇರುವುದಿಲ್ಲ.

ಸಂಬಳ ಅಲ್ಲ, ಹಣಕಾಸು ಶಿಸ್ತು ಮುಖ್ಯ

ನಿಮ್ಮ ಸಂಬಳ 15,000 ರೂ ಇರಲಿ, ಅಥವಾ ಅದಕ್ಕಿಂತಲೂ ಕಡಿಮೆ ಇರಲಿ ಕ್ರೆಡಿಟ್ ಏಜೆನ್ಸಿಗಳಿಗೆ ಅದು ಮುಖ್ಯ ಆಗುವುದಿಲ್ಲ. ನೀವು ತೆಗೆದುಕೊಂಡಿದ್ದ ಸಾಲದ ಕಂತುಗಳನ್ನು ನಿಯಮಿತವಾಗಿ ಕಟ್ಟಿಕೊಂಡು ಹೋಗಿದ್ದೀರಾ ಎಂಬದು ಮುಖ್ಯ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನೂ ನಿಗದಿತ ದಿನದೊಳಗೆ ಕಟ್ಟಿದ್ದರೆ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ.

ನೀವು ಒಂದು ಲಕ್ಷ ರೂ ಸಂಬಳ ಪಡೆಯುತ್ತಿದ್ದರೂ ಸಾಲ ನಿರ್ವಹಣೆಯಲ್ಲಿ ಶಿಸ್ತು ಇಲ್ಲದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಧಃಪತನಗೊಳ್ಳುತ್ತದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್​ನಿಂದ ಆರೋಗ್ಯ ಸಾಲ, ಮಹಿಳಾ ಉಳಿತಾಯ ಖಾತೆ ಮತ್ತಿತರ ಹೊಸ ಯೋಜನೆಗಳು

ಉದ್ಯೋಗ, ನಿರುದ್ಯೋಗ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಇಲ್ಲ

ನೀವ ನಿಯಮಿತ ಸಂಬಳ ತರುವ ಉದ್ಯೋಗದಲ್ಲೇ ಇರಲಿ, ಅಥವಾ ಸ್ವಂತ ಉದ್ಯೋಗ ಮಾಡುತ್ತಿರಲಿ, ಅಂಗಡಿ ಮುಂಗಟ್ಟು ನಡೆಸುತ್ತಿರಲಿ, ಅಥವಾ ಕೆಲಸ ಕಳೆದುಕೊಂಡು ಮನೆಯಲ್ಲೇ ಇರಲಿ, ಇವ್ಯಾವ ಅಂಶಗಳೂ ನಿಮ್ಮ ಕ್ರೆಡಿಟ್ ಸ್ಕೋರ್ ಮೆಲೆ ಪರಿಣಾಮ ಬೀರುವುದಿಲ್ಲ.

ಹಾಗೆಯೇ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಟ್ಟಿದ್ದೀರಾ, ಎಷ್ಟು ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದೀರಾ, ಎಷ್ಟು ಮೊತ್ತದ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ್ದೀರಾ ಈ ಅಂಶಗಳೂ ಕೂಡ ಕ್ರೆಡಟ್ ಸ್ಕೋರ್ ಅನ್ನು ಪ್ರಭಾವಿಸುವುದಿಲ್ಲ. ನೀವು ನಿಯಮಿತವಾಗಿ ಕಟ್ಟುವ ನೀರಿನ ಬಿಲ್, ವಿದ್ಯುತ್ ಬಿಲ್ ಇತ್ಯಾದಿ ಕೂಡ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ.

ಇದನ್ನೂ ಓದಿ: ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್​ಮೆಂಟ್ ಇದೆ ನೋಡಿ

ಆದರೆ, ಬ್ಯಾಂಕುಗಳಲ್ಲಿ ಸಾಲ ಪಡೆಯುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಜೊತೆಗೆ ನಿಮ್ಮ ಸೇವಿಂಗ್ಸ್, ನಿಮ್ಮ ಸಂಬಳ ಇತ್ಯಾದಿ ಅಂಶಗಳನ್ನು ಬ್ಯಾಂಕುಗಳು ಗಮನಿಸುವ ಸಾಧ್ಯತೆ ಇರುತ್ತದೆ. ಅದು ಬಿಟ್ಟರೆ ಕ್ರೆಡಿಟ್ ಸ್ಕೋರ್ ಮೇಲೆ ಈ ಮೇಲಿನ ಅಂಶಗಳ ಪ್ರಭಾವ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ