AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ದೊಡ್ಡಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗೋಪಾಯ

What to do with low credit scores: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸಾಮಾನ್ಯವಾಗಿ ಬ್ಯಾಂಕುಗಳು ಸಾಲ ಕೊಡಲು ನಿರಾಕರಿಸುತ್ತವೆ. ಅಥವಾ ಹೆಚ್ಚಿನ ಬಡ್ಡಿದರ ವಿಧಿಸುತ್ತವೆ. ಕ್ರೆಡಿಟ್ ಸ್ಕೊರ್ ಕಡಿಮೆ ಇದ್ದೂ ಕಡಿಮೆ ಬಡ್ಡಿಗೆಯೇ ಸಾಲ ಪಡೆಯಲು ಕೆಲ ಮಾರ್ಗೋಪಾಯಗಳಿವೆ. ಹೆಚ್ಚು ಮೊತ್ತದ ಡೌನ್ ಪೇಮೆಂಟ್ ನೀಡುವುದು, ಜಂಟಿಯಾಗಿ ಸಾಲ ಪಡೆಯುವುದು, ಆದಾಯ ಭದ್ರತೆ ಎನ್ನುವುದಕ್ಕೆ ಹೆಚ್ಚುವರಿ ದಾಖಲೆ ಒದಗಿಸುವುದು ಈ ಮಾರ್ಗೋಪಾಯಗಳಲ್ಲಿ ಕೆಲವಾಗಿವೆ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ದೊಡ್ಡಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗೋಪಾಯ
ಕ್ರೆಡಿಟ್ ಸ್ಕೋರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 22, 2024 | 12:26 PM

Share

ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ (credit score) ಬಹಳ ಮುಖ್ಯ. 300ರಿಂದ 900 ಅಂಕಗಳವರೆಗೆ ಇರುವ ಕ್ರೆಡಿಟ್ ಸ್ಕೋರ್​ನಲ್ಲಿ 750ಕ್ಕಿಂತ ಹೆಚ್ಚಿನದ್ದನ್ನು ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಅಲ್ಪ ಕ್ರೆಡಿಟ್ ಸ್ಕೋರ್ ಇದ್ದರೆ ಬ್ಯಾಂಕುಗಳು ಸಾಲ ಕೊಡಲು ಹಿಂದೇಟು ಹಾಕುತ್ತವೆ. ಸಾಲಕ್ಕೆ ಕ್ರೆಡಿಟ್ ಸ್ಕೋರ್ ಒಂದೇ ಮಾನದಂಡವಲ್ಲ. ಬ್ಯಾಂಕುಗಳು ಇನ್ನೂ ಕೆಲ ಅಂಶಗಳನ್ನು ಪರಿಗಣಿಸುತ್ತವೆ. ಆದ್ದರಿಂದ ನಿಮಗೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸಾಲ ಪಡೆಯಲು ಒಂದಿಲ್ಲೊಂದು ಮಾರ್ಗೋಪಾಯ ಇರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಸಾಲ ನಿರಾಕರಿಸಲಾಗುವುದಿಲ್ಲವಾದರೂ ಬಡ್ಡಿದರ ಹೆಚ್ಚಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ನೀವು ಸಾಲಕ್ಕೆ ಅರ್ಜಿ ಹಾಕುವವರಿದ್ದರೆ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಬೇರೆ ಬೇರೆ ಬ್ಯಾಂಕುಗಳಲ್ಲಿ ವಿಚಾರಿಸಿ

ಬೇರೆ ಬೇರೆ ಬ್ಯಾಂಕುಗಳಲ್ಲಿ ಸಾಲ ನೀಡುವ ಕ್ರಮ ಬೇರೆ ಇರಬಹುದು. ಕೆಲ ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಅನ್ನು ಪ್ರಮುಖ ಮಾನದಂಡವಾಗಿ ಇಟ್ಟಿರುತ್ತವೆ. ಬೇರೆ ಕೆಲ ಬ್ಯಾಂಕುಗಳು ಕ್ರೆಡಿಟ್ ಸ್ಕೋರ್​ಗೆ ಪ್ರಾಮುಖ್ಯತೆ ನೀಡದೇ ಹೋಗಬಹುದು. ಆದ್ದರಿಂದ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬೇರೆ ಬೇರೆ ಬ್ಯಾಂಕುಗಳಲ್ಲಿ ಸಾಲಕ್ಕೆ ವಿಚಾರಿಸಬಹುದು.

ಇದನ್ನೂ ಓದಿ: ಎನ್​ಪಿಎಸ್ ಮತ್ತು ಪಿಪಿಎಫ್ ಸ್ಕೀಮ್​ನಲ್ಲಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬ ಗೊಂದಲವಾ? ಇಲ್ಲಿದೆ ಒಂದು ಹೋಲಿಕೆ

ಡೌನ್ ಪೇಮೆಂಟ್ ಹೆಚ್ಚು ನೀಡಿ

ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಆಗ ಹೆಚ್ಚಿನ ಡೌನ್​ಪೇಮೆಂಟ್ ಕೊಡುವುದಾಗಿ ಆಫರ್ ಮಾಡಿರಿ. ಇದರಿಂದ ನಿಮ್ಮ ಬಗ್ಗೆ ಬ್ಯಾಂಕಿಗೆ ವಿಶ್ವಾಸ ಮೂಡಬಹುದು. ನಿಮಗೆ ಸಾಲದ ಹೊರೆಯೂ ಕಡಿಮೆ ಆಗಬಹುದು.

ಜಂಟಿಯಾಗಿ ಸಾಲ ಪಡೆಯುವ ಸಾಧ್ಯತೆ ನೋಡಿ

ಕ್ರೆಡಿಟ್ ಸ್ಕೋರ್ ಉತ್ತಮ ಇರುವ ಕುಟುಂಬ ಸದಸ್ಯರೊಬ್ಬರ ಜೊತೆ ಸೇರಿ ಜಂಟಿಯಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ ಐಡಿಯಾ ಎನಿಸಬಹುದು. ಜಂಟಿಯಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವವರಲ್ಲಿ ಒಬ್ಬರದ್ದಾದರೂ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಸಾಕಾಗುತ್ತದೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಹೂಡಿಕೆ ಮಾಡುತ್ತಿರುವಿರಾ? ಏಪ್ರಿಲ್ 5ರೊಳಗೆ ಹಣ ಕಟ್ಟದಿದ್ದರೆ ಕೈತಪ್ಪಲಿದೆ ಸಾವಿರಾರು ರೂ ಆದಾಯ

ಹೆಚ್ಚುವರಿ ದಾಖಲೆ ಒದಗಿಸಿ

ಕ್ರೆಡಿಟ್ ಸ್ಕೋರ್ ಬೇರೆ ಬೇರೆ ಕಾರಣ, ಒತ್ತಡಕ್ಕೆ ಕಡಿಮೆ ಆಗಿದ್ದಿರಬಹುದು. ಆದರೆ, ನಿಮಗೆ ಉತ್ತಮ ಆದಾಯ ಇದೆ, ಸ್ಥಿರ ಕೆಲಸ ಇದೆ, ಆಸ್ತಿಪಾಸ್ತಿ ಭದ್ರತೆ ಚೆನ್ನಾಗಿದ್ದ ಪಕ್ಷದಲ್ಲಿ ಅದನ್ನು ಬಿಂಬಿಸುವ ದಾಖಲೆಗಳನ್ನು ನೀಡಿರಿ. ಉದಾಹರಣೆಗೆ, ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ ಇತ್ಯಾದಿಯನ್ನು ಒದಗಿಸಬಹುದು. ಇದರಿಂದ ನಿಮ್ಮ ಹಣಕಾಸು ಬದ್ಧತೆ ಬಗ್ಗೆ ಬ್ಯಾಂಕಿಗೆ ವಿಶ್ವಾಸ ಬರಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?