ಎನ್ಪಿಎಸ್ ಮತ್ತು ಪಿಪಿಎಫ್ ಸ್ಕೀಮ್ನಲ್ಲಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬ ಗೊಂದಲವಾ? ಇಲ್ಲಿದೆ ಒಂದು ಹೋಲಿಕೆ
NPS vs PPF: ನ್ಯಾಷನಲ್ ಪೆನ್ಷನ್ ಸಿಸ್ಟಂ ಮತ್ತು ಪಿಪಿಎಫ್ ಎರಡೂ ಕೂಡ ಸರ್ಕಾರದಿಂದ ನಿರ್ವಹಣೆಯಾಗುವ ವಿಶೇಷ ಯೋಜನೆಗಳು. ಪಿಪಿಎಫ್ 15 ವರ್ಷದ ಪ್ಲಾನ್ ಆಗಿದ್ದು ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇದೆ. ಈ ಹೂಡಿಕೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಸಿಗುತ್ತದೆ. ನ್ಯಾಷನಲ್ ಪೆನ್ಷನ್ ಸಿಸ್ಟಂ ಅಥವಾ ಎನ್ಪಿಎಸ್ ಸಂಪೂರ್ಣ ರಿಟೈರ್ಮೆಂಟ್ ಸ್ಕೀಮ್ ಆಗಿದೆ. ನಿವೃತ್ತಿ ಬಳಿಕ ನಿಮ್ಮ ಒಟ್ಟು ಹಣದ ಶೇ. 60ರಷ್ಟು ಮೊತ್ತವನ್ನು ವಾಪಸ್ ಪಡೆದುಕೊಳ್ಳಬಹುದು. ಇನ್ನುಳಿದ ಶೇ. 40ರಷ್ಟು ಮೊತ್ತಕ್ಕೆ ಪೆನ್ಷನ್ ಪ್ಲಾನ್ ಪಡೆಯಬೇಕಾಗುತ್ತದೆ.
ಸಾಮಾನ್ಯವಾಗಿ ನಮ್ಮ ಹೂಡಿಕೆಯಲ್ಲಿ ವೈವಿಧ್ಯತೆ ಇರಬೇಕು. ಈಕ್ವಿಟಿ, ಫಿಕ್ಸೆಡ್ ಇನ್ಕಮ್, ಚಿನ್ನ, ಇನ್ಷೂರೆನ್ಸ್, ಇವುಗಳಲ್ಲಿ ನಮ್ಮ ಹೂಡಿಕೆ ಇರಬೇಕು ಎನ್ನುತ್ತಾರೆ ಪರಿಣಿತರು, ಚಿನ್ನ, ಈಕ್ವಿಟಿ ಅಲ್ಲದ ಹೂಡಿಕೆಗಳಲ್ಲಿ ಹಣ ತೊಡಗಿಸುವುದಾದರೆ, ಈಗ ಹೆಚ್ಚು ಜನಪ್ರಿಯವಾಗಿರುವ ಕೆಲ ಸ್ಕೀಮ್ಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಮತ್ತು ನ್ಯಾಷನಲ್ ಪೆನ್ಷನ್ ಫಂಡ್ (NPS) ಇವೆ. ಸರ್ಕಾರದಿಂದ ನಿರ್ವಹಿಸಲಾಗುವ ಈ ಎರಡೂ ಕೂಡ ದೀರ್ಘಾವಧಿ ಹೂಡಿಕೆಗೆ ಉತ್ತಮ ಆಯ್ಕೆಗಳಾಗಿವೆ. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ನಿಮ್ಮದಾಗಿರಬೇಕು. ಅದಕ್ಕೆ ಮುನ್ನ ಈ ಎರಡು ಸ್ಕೀಮ್ಗಳ ಸಾಧಕಗಳೇನು, ಬಾಧಕಗಳೇನು ಎಂಬುದನ್ನು ತಿಳಿಯುವುದು ಉತ್ತಮ.
ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್
ಪಬ್ಲಿಕ್ ಪ್ರಾವಿಡೆಂಡ್ ಫಂಡ್ 15 ವರ್ಷಕ್ಕೆ ಮೆಚ್ಯೂರ್ ಆಗುವ ಸ್ಕೀಮ್. ವರ್ಷಕ್ಕೆ 500 ರೂನಿಂದ ಹಿಡಿದು ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ವರ್ಷದಲ್ಲಿ ಎಷ್ಟು ಸಲ ಬೇಕಾದರೂ ಹಣ ಡೆಪಾಸಿಟ್ ಮಾಡಬಹುದು. ಆದರೆ, ವರ್ಷದ ಮಿತಿ 1.5 ಲಕ್ಷ ರೂ ದಾಟಬಾರದು.
ಪಿಪಿಎಫ್ 15 ವರ್ಷಕ್ಕೆ ಮೆಚ್ಯೂರ್ ಆಗುತ್ತದಾದರೂ ಅದನ್ನು ಪ್ರತೀ ಐದು ವರ್ಷಕ್ಕೊಮ್ಮೆ ಅವಧಿ ವಿಸ್ತರಿಸಬಹುದು. ಹೂಡಿಕೆಯನ್ನು 15 ವರ್ಷಕ್ಕೆ ನಿಲ್ಲಿಸಬಹುದು, ಅಥವಾ ವಿಸ್ತರಿಸಿದ ಅವಧಿಯಲ್ಲೂ ಠೇವಣಿ ಇಡುವುದನ್ನು ಮುಂದುವರಿಸಬಹುದು.
ಇದನ್ನೂ ಓದಿ: ಜನರು ಹೆಲ್ತ್ ಇನ್ಷೂರೆನ್ಸ್ ತಿರಸ್ಕರಿಸಲು ಏನು ಕಾರಣ? ಪಾಲಿಸಿ ಮಾಡಿಸಲು ಏನು ಕಾರಣ? ಇಲ್ಲಿದೆ ಇಂಟರೆಸ್ಟಿಂಗ್ ಸೈಕಾಲಜಿ
ಸರ್ಕಾರ ಆಗಾಗ್ಗೆ ಪಿಪಿಎಫ್ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಿಸುತ್ತಿರುತ್ತದೆ. ಸದ್ಯಕ್ಕೆ ಇದಕ್ಕೆ ವಾರ್ಷಿಕ ಶೇ. 7.1 ಬಡ್ಡಿದರ ನಿಗದಿ ಮಾಡಲಾಗಿದೆ.
ಪಿಪಿಎಫ್ನ ಮುಖ್ಯ ಉಪಯೋಗಗಳಲ್ಲಿ ತೆರಿಗೆ ಲಾಭ ಒಂದು. ಇದರ ಮೇಲೆ ಮಾಡುವ ಹೂಡಿಕೆಗೆ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಪಿಪಿಎಫ್ನಿಂದ ಇದು ಸಾಧ್ಯವಾಗುತ್ತದೆ.
ಎನ್ಪಿಎಸ್ ಅಥವಾ ನ್ಯಾಷನಲ್ ಪೆನ್ಷನ್ ಸಿಸ್ಟಂ
ನ್ಯಾಷನಲ್ ಪೆನ್ಷನ್ ಸಿಸ್ಟಂ ಸರ್ಕಾರದಿಂದ ನಡೆಸಲಾಗುವ ರಿಟೈರ್ಮೆಂಟ್ ಯೋಜನೆಯಾದರೂ ಇದು ನಿಶ್ಚಿತ ಆದಾಯ ತರುವ ವರ್ಗಕ್ಕೆ ಸೇರುವುದಿಲ್ಲ. ಇದರಲ್ಲಿನ ಹೂಡಿಕೆ ಮಾರುಕಟ್ಟೆಗೆ ಜೋಡಿತವಾಗಿರುತ್ತದೆ. ರಿಸ್ಕ್ ಹೆಚ್ಚಾದರೂ ಲಾಭ ಸಾಧ್ಯತೆಯೂ ಹೆಚ್ಚಿರುತ್ತದೆ.
ಇದನ್ನೂ ಓದಿ: ಎಸ್ಐಪಿಯಲ್ಲಿ ತಿಂಗಳಿಗೆ ಕೇವಲ 5,000 ರೂ ಹೂಡಿಕೆ ಆರಂಭಿಸಿ, 5 ಕೋಟಿ ರಿಟರ್ನ್ ಪಡೆಯಿರಿ
18ರಿಂದ 70 ವರ್ಷದವರೆಗಿನ ವಯಸ್ಸಿನವರು ಈ ಯೋಜನೆ ಆರಂಭಿಸಬಹುದು. ನಿವೃತ್ತಿ ಬಳಿಕ ನಿಮ್ಮ ಹೂಡಿಕೆಯ ಒಟ್ಟು ಮೊತ್ತದಶೇ. 60ರಷ್ಟನ್ನು ವಾಪಸ್ ಪಡೆಯಬಹುದು. ಇನ್ನುಳಿದ ಶೇ. 40ರಷ್ಟು ಮೊತ್ತಕ್ಕೆ ಒಂದು ಪ್ರತ್ಯೇಕ ಪೆನ್ಷನ್ ಪ್ಲಾನ್ ಪಡೆಯಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ