Video: ಒಂದು ಹೆಜ್ಜೆ ಮುಂದಿಟ್ರೂ ಕೆಳಗೆ ಹಾರ್ತೀನಿ, 5ನೇ ಮಹಡಿಯಲ್ಲಿ ನಿಂತು ಆರೋಪಿಯ ಧಮ್ಕಿ
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಹಿಡಿಯಲು ಹೋಗಿದ್ದ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಐದನೇ ಮಹಡಿಯ ಮೇಲೆ ನಿಂತು ಪೊಲೀಸರು ಒಂದು ಹೆಜ್ಜೆ ಮುಂದಿಟ್ಟರೂ ತಾನು ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಲ್ಲೆ, ಗಲಭೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಅಭಿಷೇಕ್, ಅಲಿಯಾಸ್ ಸಂಜಯ್‌ಸಿನ್ಹ್ ತೋಮರ್ ಹಿಡಿಯಲು ಪೊಲೀಸರ ತಂಡ ತೆರಳಿತ್ತು.
ಅಹಮದಾಬಾದ್, ಜುಲೈ 06: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಹಿಡಿಯಲು ಹೋಗಿದ್ದ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಐದನೇ ಮಹಡಿಯ ಮೇಲೆ ನಿಂತು ಪೊಲೀಸರು ಒಂದು ಹೆಜ್ಜೆ ಮುಂದಿಟ್ಟರೂ ತಾನು ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು.
ಹಲ್ಲೆ, ಗಲಭೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಅಭಿಷೇಕ್, ಅಲಿಯಾಸ್ ಸಂಜಯ್‌ಸಿನ್ಹ್ ತೋಮರ್ ಹಿಡಿಯಲು ಪೊಲೀಸರ ತಂಡ ತೆರಳಿತ್ತು. ಐದನೇ ಮಹಡಿಯ ಫ್ಲಾಟ್‌ನ ಅಂಚಿನಲ್ಲಿ ನಿಂತು ಬೆದರಿಕೆ ಹಾಕಿದ್ದಾನೆ. ಜೂನ್ 7 ರಂದು ಖಚಿತ ಮಾಹಿತಿಯ ಮೇರೆಗೆ ತಂಡವು ಅವನ ಫ್ಲಾಟ್ ಮೇಲೆ ದಾಳಿ ನಡೆಸಿತ್ತು.
ಆದರೆ ಅವನು ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿ ತನ್ನ ಅಡುಗೆಮನೆಯ ಬಾಲ್ಕನಿಯ ಮೇಲೆ ಹತ್ತಿದ್ದಾನೆ. ಅಲ್ಲಿಂದ ಕೆಳಗೆ ಹಾರುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು ಹರಸಾಹಸ ಮಾಡಿ ಮೂರು ಗಂಟೆಗಳ ಬಳಿಕ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ