AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್​ಬಿಐ ಹೊಸ ನಿಯಮ

RBI new rule on floating rate loans: ಫ್ಲೋಟಿಂಗ್ ಇಂಟರೆಸ್ಟ್ ರೇಟ್​​ನಲ್ಲಿ ಪಡೆದ ಸಾಲವನ್ನು ಮುಂಚಿತವಾಗಿ ತೀರಿಸಲು ಪ್ರೀಪೇಮೆಂಟ್ ಶುಲ್ಕ ತೆರಬೇಕಿಲ್ಲ. ಹೀಗೊಂದು ನಿಯಮವನ್ನು ಆರ್​ಬಿಐ ಮಾಡಿದೆ. 2026ರ ಜನವರಿ 1ರಿಂದ ಈ ನಿಯಮ ಜಾರಿಗೆ ಬರುತ್ತದೆ. ಫಿಕ್ಸೆಡ್ ಇಂಟರೆಸ್ಟ್ ರೇಟ್​​ನಲ್ಲಿ ಪಡೆದ ಸಾಲಗಳಿಗೆ ಈ ನಿಯಮ ಅನ್ವಯ ಆಗಲ್ಲ. ಪ್ರೀಪೇಮೆಂಟ್ ಚಾರ್ಜ್ ಹಾಕಲಾಗುತ್ತದೆ.

ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್​ಬಿಐ ಹೊಸ ನಿಯಮ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 04, 2025 | 5:36 PM

Share

ನವದೆಹಲಿ, ಜುಲೈ 4: ಗೃಹಸಾಲ ಪಡೆಯಬೇಕೆನ್ನುವವರು ಗಮನಿಸಬೇಕಾದ ಸುದ್ದಿ. ಸಾಲವನ್ನು ಅವಧಿಗಿಂತ ಮುನ್ನ ತೀರಿಸಲು ನೀವು ಹೆಚ್ಚುವರಿ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ. ಮುಂದಿನ ವರ್ಷದಿಂದ ಫ್ಲೋಟಿಂಗ್ ರೇಟ್​ನಲ್ಲಿ (floating rate) ಪಡೆದ ಸಾಲಗಳಿಗೆ ಪ್ರೀಪೇಮೆಂಟ್ ಶುಲ್ಕ (Prepayment charge) ವಿಧಿಸುವಂತಿಲ್ಲ. ಹೀಗೆಂದು ಆರ್​ಬಿಐ ನಿಯಮ ಮಾಡಿದೆ. 2026ರ ಜನವರಿ 1ರಿಂದ ಈ ನಿಯಮ ಜಾರಿಗೆ ಬರುತ್ತದೆ. 2026ರ ಜನವರಿ 1 ಹಾಗೂ ನಂತರ ಪಡೆಯುವ ಸಾಲ ಹಾಗೂ ರಿನಿವಲ್​ಗೆ ಈ ಪ್ರೀಪೇಮೆಂಟ್ ಶುಲ್ಕ ವಿನಾಯಿತಿ ಇರಲಿದೆ.

ಫ್ಲೋಟಿಂಗ್ ಇಂಟರೆಸ್ಟ್ ರೇಟ್​​ನಲ್ಲಿ ಪಡೆದ ಗೃಹಸಾಲ ಹಾಗೂ ಇತರ ಸಾಲಗಳಿಗೆ ಇದು ಅನ್ವಯ ಆಗುತ್ತದೆ. ಎಲ್ಲಾ ಬ್ಯಾಂಕು, ಎನ್​ಬಿಐಎಫ್​​ಸಿ ಇತ್ಯಾದಿ ಹಣಕಾಸು ಸಂಸ್ಥೆಗಳಿಗೆ ಆರ್​​ಬಿಐ ಹೊಸ ನಿಯಮದ ಬಗ್ಗೆ ಸೂಚನೆ ನೀಡಿದೆ. ಬ್ಯುಸಿನೆಸ್ ಲೋನ್​​ಗಳಿಗೆ ಇದು ಅನ್ವಯ ಆಗುವುದಿಲ್ಲ.

ಇದನ್ನೂ ಓದಿ: ಷೇರುಮಾರುಕಟ್ಟೆಗೆ ಚಳ್ಳೆಹಣ್ಣು ತಿನ್ನಿಸಿ 36,500 ಕೋಟಿ ರೂ ಪಂಗನಾಮ ಹಾಕಿತಾ ಜೇನ್ ಸ್ಟ್ರೀಟ್; ಅದರ ಕುತಂತ್ರದ ಕಥೆ ಕೇಳಿ…

ಏನಿದು ಫ್ಲೋಟಿಂಗ್ ರೇಟ್ ಲೋನ್?

ಫ್ಲೋಟಿಂಗ್ ರೇಟ್ ಲೋನ್ ಎಂದರೆ, ಬ್ಯಾಂಕ್ ನೀಡುವ ಸಾಲಕ್ಕೆ ಬಡ್ಡಿದರವು ಬಾಹ್ಯ ಪ್ರಭಾವದಿಂದ ಬದಲಾಗುವ ಅವಕಾಶ ಇರುತ್ತದೆ. ಆರ್​ಬೀಐನ ರೆಪೋ ಇತ್ಯಾದಿ ಬೆಂಚ್ ಮಾರ್ಕ್ ರೇಟ್ ಬದಲಾದಾಗ ಬ್ಯಾಂಕುಗಳು ಸಾಲದ ದರಗಳನ್ನು ಬದಲಿಸುತ್ತವೆ. ಫಿಕ್ಸೆಡ್ ರೇಟ್ ಲೋನ್​​ನಲ್ಲಿ ಇದು ಇರುವುದಿಲ್ಲ. ಒಮ್ಮೆ ಬಡ್ಡಿ ಫಿಕ್ಸ್ ಆದರೆ ಸಾಲ ತೀರುವವರೆಗೂ ಅದೇ ಬಡ್ಡಿದರ ಇರುತ್ತದೆ.

ಏನಿದು ಪ್ರೀಪೇಮೆಂಟ್ ಚಾರ್ಜ್?

ಬ್ಯಾಂಕುಗಳಿಗೆ ನಿಮ್ಮ ಸಾಲವೇ ಪ್ರಮುಖ ಆದಾಯ ಮೂಲ. ಹೀಗಾಗಿ, ನೀವು ಸಾಲ ಪಡೆದಾಗ ಸಾಧ್ಯವಾದಷ್ಟೂ ಹೆಚ್ಚು ಕಾಲ ಬಡ್ಡಿಯನ್ನು ಅನುಭವಿಸಲು ಯತ್ನಿಸುತ್ತವೆ. ನೀವು ಬೇಗನೇ ಸಾಲ ತೀರಿಸಲು ಹೋದಾಗ ಪ್ರೀಪೇಮೆಂಟ್ ಚಾರ್ಜ್ ಹಾಕುತ್ತದೆ. ಸಂಭಾವ್ಯ ಬಡ್ಡಿ ಆದಾಯದ ನಷ್ಟವನ್ನು ಭರಿಸಲು ಬ್ಯಾಂಕು ಹಾಕುವ ಶುಲ್ಕ ಇದು. ಸಾಮಾನ್ಯವಾಗಿ, ನೀವು ಎಷ್ಟು ಹಣವನ್ನು ಮುಂಗಡವಾಗಿ ಪಾವತಿಸುತ್ತೀರೋ ಆ ಮೊತ್ತಕ್ಕೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ.

ಇದನ್ನೂ ಓದಿ: ಭಾರತದ ಮೊದಲ ಸಂಪೂರ್ಣ ಯುಪಿಐ ಆಧಾರಿತ ಬ್ಯಾಂಕ್ ಬ್ರ್ಯಾಂಚ್ ಬೆಂಗಳೂರಿನಲ್ಲಿ ಶುರು: ಹೇಗಿದೆ ನೋಡಿ

ಈಗ ಫ್ಲೋಟಿಂಗ್ ಇಂಟರೆಸ್ಟ್ ರೇಟ್​​ನಲ್ಲಿ ಪಡೆದುಕೊಂಡ ಸಾಲಕ್ಕೆ ಪ್ರೀಪೇಮೆಂಟ್ ಚಾರ್ಜ್​​ನಿಂದ ವಿನಾಯಿತಿ ಕೊಡಲು ಆರ್​ಬಿಐ ನಿರ್ಧರಿಸಿದೆ. ಉಳಿದ ಸಾಲಗಳಿಗೆ ಯಥಾಪ್ರಕಾರ ಪ್ರೀಪೇಮೆಂಟ್ ಚಾರ್ಜ್ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್