ಎನ್ಆರ್ಐಗಳು ತಮ್ಮ ದೇಶದ ಮೊಬೈಲ್ ನಂಬರ್ನಿಂದಲೇ ಯುಪಿಐ ಬಳಕೆ ಸಾಧ್ಯ; ಐಡಿಎಫ್ಸಿ ಫಸ್ಟ್ ಬ್ಯಾಂಕ್ನಿಂದ ಸೌಲಭ್ಯ
IDFC First Bank offers UPI transaction facility for its NRE accounts: ಅನಿವಾಸಿ ಭಾರತೀಯರು ಭಾರತದಲ್ಲಿ ಹಣ ರವಾನೆ ಮಾಡುವುದು ಬಹಳ ಸುಲಭ. ತಮ್ಮ ದೇಶದ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಇಟ್ಟುಕೊಂಡೇ ಯುಪಿಐ ಮೂಲಕ ಭಾರತಕ್ಕೆ ಹಣ ಕಳುಹಿಸಬಹುದು. ಐಡಿಎಫ್ಸಿ ಫಸ್ಟ್ ಬ್ಯಾಂಕು ತನ್ನ ಎನ್ಆರ್ಇ ಮತ್ತು ಎನ್ಆರ್ಒ ಖಾತೆದಾರರಿಗೆ ಈ ಸೌಲಭ್ಯ ನೀಡಿದೆ.

ನವದೆಹಲಿ, ಜುಲೈ 4: ಐಡಿಎಫ್ಸಿ ಫಸ್ಟ್ ಬ್ಯಾಂಕು (IDFC First Bank) ತನ್ನ ಎನ್ಆರ್ಐ ಗ್ರಾಹಕರಿಗೆ ಹೊಸ ಸರ್ವಿಸ್ ಆಫರ್ ಮಾಡಿದೆ. ಅನಿವಾಸಿ ಭಾರತೀಯರ ಯುಪಿಐ ಮೂಲಕ ಭಾರತದಲ್ಲಿ ಹಣ ವರ್ಗಾವಣೆ ಮಾಡಲು ಈ ಬ್ಯಾಂಕ್ ಅನುವು ಮಾಡಿಕೊಟ್ಟಿದೆ. ಅದೂ ಭಾರತೀಯ ಮೊಬೈಲ್ ನಂಬರ್ ಬಳಸದೇ ಯುಪಿಐ ಮೂಲಕ ಟ್ರಾನ್ಸಾಕ್ಷನ್ ನಡೆಸಲು ಅವಕಾಶ ಕೊಟ್ಟಿದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಎನ್ಆರ್ಇ ಮತ್ತು ಎನ್ಆರ್ಒ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಹಾಂಕಾಂಗ್, ಮಲೇಷ್ಯಾ, ಓಮನ್, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ್, ಯುಎಇ, ಯುಕೆ, ಅಮೆರಿಕ ಇತ್ಯಾದಿ 12 ದೇಶಗಳಲ್ಲಿರುವ ಎನ್ಆರ್ಐಗಳಿಗೆ ಇಂಥದ್ದೊಂದು ಆಫರ್ ಇದೆ. ಇವರು ಉಚಿತವಾಗಿ ಈ ಯುಪಿಐ ಸರ್ವಿಸ್ ಬಳಸಬಹುದು.
ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್ಬಿಐ ಹೊಸ ನಿಯಮ
ಫಾರೆಕ್ಸ್ ಸರ್ವಿಸ್ ಚಾರ್ಜ್ ಇರೋದಿಲ್ಲ…
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಈ ಆಫರ್ನ ವಿಶೇಷತೆ ಎಂದರೆ ಇದರಲ್ಲಿ ಫಾರೀನ್ ಎಕ್ಸ್ಚೇಂಜ್ ಚಾರ್ಜಸ್ ಇರೋದಿಲ್ಲ. ಭಾರತಕ್ಕೆ ಬಂದಾಗ ಯುಪಿಐ ಬಳಸಬಹುದು. ತಮ್ಮ ದೇಶದಲ್ಲಿ ಇದ್ದುಕೊಂಡೇ ಭಾರತದಲ್ಲಿರುವವರಿಗೆ ಶುಲ್ಕರಹಿತವಾಗಿ ಹಣ ರವಾನೆ ಮಾಡಬಹುದು.
ಅನಿವಾಸಿ ಭಾರತೀಯರು ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಎನ್ಆರ್ಇ ಅಥವಾ ಎನ್ಆರ್ಒ ಅಕೌಂಟ್ ತೆರೆದಿರಬೇಕು. ಫೋನ್ಪೇ, ಗೂಗಲ್ ಪೇ, ಪೇಟಿಎಂ ಇತ್ಯಾದಿ ಯುಪಿಐ ಪ್ಲಾಟ್ಫಾರ್ಮ್ಗಳಲ್ಲಿ ಈ ಅಕೌಂಟ್ ಅನ್ನು ಜೋಡಿಸಬೇಕು. ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಇದ್ದರೆ ಸಾಕು. ಭಾರತೀಯ ಸಿಮ್ ಬಳಸಬೇಕು ಎಂದೇನಿಲ್ಲ. ಭಾರತೀಯರು ಬಳಸುವ ರೀತಿಯಲ್ಲೇ ಎನ್ಆರ್ಐಗಳು ಯುಪಿಐ ವಹಿವಾಟುಗಳನ್ನು ಮಾಡಬಹುದು. ವಿದೇಶೀ ವಿನಿಮಯ ಶುಲ್ಕ ಪಾವತಿಸಬೇಕಾಗುವುದಿಲ್ಲ.
ಇದನ್ನೂ ಓದಿ: ಷೇರು ಮಾರುಕಟ್ಟೆಗೆ ಚಳ್ಳೆಹಣ್ಣು ತಿನ್ನಿಸಿ 36,500 ಕೋಟಿ ರೂ ಪಂಗನಾಮ ಹಾಕಿತಾ ಜೇನ್ ಸ್ಟ್ರೀಟ್; ಅದರ ಕುತಂತ್ರದ ಕಥೆ ಕೇಳಿ…
ಉದಾಹರಣೆಗೆ, ದುಬೈನಲ್ಲಿರುವ ಭಾರತೀಯರೊಬ್ಬರು, ಅಲ್ಲಿಯ ಎಟಿಸಲ್ಯಾಟ್ ಅಥವಾ ಡು ಮೊಬೈಲ್ ಸಿಮ್ನ ನಂಬರ್ ಅನ್ನು ಬಳಸುತ್ತಿದ್ದರೂ ಕೂಡ ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಎನ್ಆರ್ಇ ಅಥವಾ ಎನ್ಆರ್ಒ ಅಕೌಂಟ್ ಹೊಂದಿದ್ದರೆ ಯುಪಿಐ ಪೇಮೆಂಟ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




