ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ ಪೂಣಚ್ಚ
‘ತಾವು ನಂಬರ್ ಒನ್ ನಟಿ ಎಂದರೆ ತಪ್ಪಾಗುತ್ತಿರಲಿಲ್ಲ. ಅದು ನಮಗೂ ಹೆಮ್ಮೆ. ಬಾಲಿವುಡ್ ನಟಿಯರನ್ನೂ ಮೀರಿ ನಿಂತುಕೊಂಡಿದ್ದಾರೆ. ಆ ಅರ್ಥದಲ್ಲಿ ಅವರು ಹೇಳಿರಬಹುದು’ ಎಂದು ಹರ್ಷಿಕಾ ಪೂಣ್ಣಚ್ಚ ಹೇಳಿದ್ದಾರೆ. ‘ನಾನು ಕೊಡಗಿನ ಮೊದಲ ನಟಿ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಕ್ಕೆ ಹರ್ಷಿಕಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ನೀಡುವ ಹೇಳಿಕೆಗಳು ಆಗಾಗ ವಿವಾದಕ್ಕೆ ಕಾರಣ ಆಗುತ್ತವೆ. ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಮಾತನಾಡುವಾಗ ‘ನಾನು ಕೊಡಗಿನ ಮೊದಲ ನಟಿ’ ಎಂದು ಹೇಳಿದ್ದರು. ಆ ಹೇಳಿಕೆಯನ್ನು ಅನೇಕರು ವಿರೋಧಿಸಿದ್ದಾರೆ. ಈ ಬಗ್ಗೆ ಕೊಡಗಿನ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರು ಮಾತನಾಡಿದ್ದಾರೆ. ‘ನಮ್ಮ ಚಿತ್ರರಂಗದಲ್ಲಿ ರಶ್ಮಿಕಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಅವರ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿವೆ. ಈ ರೀತಿ ಸಾಧನೆ ಮಾಡಿದಾಗ ಎಲ್ಲೋ ಒಂದು ಮಾತಿನಿಂದ ತಪ್ಪಾಗಿದೆ. ಅದನ್ನು ಕ್ಷಮಿಸಿ ಬಿಡೋಣ’ ಎಂದಿದ್ದಾರೆ ಹರ್ಷಿಕಾ ಪೂಣಣ್ಣ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
