ಪಿಪಿಎಫ್​ನಲ್ಲಿ ಹೂಡಿಕೆ ಮಾಡುತ್ತಿರುವಿರಾ? ಏಪ್ರಿಲ್ 5ರೊಳಗೆ ಹಣ ಕಟ್ಟದಿದ್ದರೆ ಕೈತಪ್ಪಲಿದೆ ಸಾವಿರಾರು ರೂ ಆದಾಯ

Public Provident Fund investment tricks: ಪಿಪಿಎಫ್​ನಲ್ಲಿ ಒಂದು ವರ್ಷದಲ್ಲಿ 500 ರೂನಿಂದ 1,50,000 ರೂವರೆಗೆ ಹೂಡಿಕೆ ಮಾಡಲು ಅವಕಾಶ ಇದೆ. ಈ ಯೋಜನೆಯಲ್ಲಿ ವಾರ್ಷಿಕ ಬಡ್ಡಿ ಶೇ. 7.1 ಇದೆಯಾದರೂ ಮಾಸಿಕವಾಗಿ ಬಡ್ಡಿಯನ್ನು ಗಣಿಸಲಾಗುತ್ತದೆ. ಒಂದು ತಿಂಗಳ 5ನೇ ತಾರೀಖಿನಿಂದ ಕೊನೆಯ ದಿನದವರೆಗೂ ಇರುವ ಮಿನಿಮಮ್ ಬ್ಯಾಲನ್ಸ್ ಹಣಕ್ಕೆ ಬಡ್ಡಿ ಕೊಡಲಾಗುತ್ತದೆ. ಆರನೇ ತಾರೀಖು ಹಣ ಡೆಪಾಸಿಟ್ ಮಾಡಿದರೆ ಆ ತಿಂಗಳಲ್ಲಿ ಆ ಹಣಕ್ಕೆ ಬಡ್ಡಿ ಸಿಗುವುದಿಲ್ಲ. ಈ ರೀತಿ ನೀವು 15 ವರ್ಷದಲ್ಲಿ 20,000 ರೂಗೂ ಹೆಚ್ಚು ಆದಾಯನಷ್ಟ ಕಾಣಬೇಕಾಗಬಹುದು.

ಪಿಪಿಎಫ್​ನಲ್ಲಿ ಹೂಡಿಕೆ ಮಾಡುತ್ತಿರುವಿರಾ? ಏಪ್ರಿಲ್ 5ರೊಳಗೆ ಹಣ ಕಟ್ಟದಿದ್ದರೆ ಕೈತಪ್ಪಲಿದೆ ಸಾವಿರಾರು ರೂ ಆದಾಯ
ಪಬ್ಲಿಕ್ ಪ್ರಾವಿಡೆಂಟ್ ಫಂಡ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2024 | 2:53 PM

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮಧ್ಯಮಾವಧಿ ಅಥವಾ ದೀರ್ಘಾವಧಿ ಹೂಡಿಕೆಗಳಲ್ಲಿ ಒಂದು. ಹೂಡಿಕೆ ಜೊತೆಗೆ ತೆರಿಗೆ ಲಾಭವನ್ನೂ ಕೊಡುವ ಸ್ಕೀಮ್ ಇದು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ನೀವು ಪಿಪಿಎಫ್​ನಲ್ಲಿ (PPF- Public Provident Fund) ಹೂಡಿಕೆ ಮಾಡಬಹುದು. ಆ ಮೊತ್ತದ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ಸಿಗುವಷ್ಟು ಬಡ್ಡಿ ಆದಾಯ ಪಿಪಿಎಫ್ ಮೇಲಿನ ಹೂಡಿಕೆಗೆ ಸಿಗುತ್ತದೆ. ಪಿಪಿಎಫ್ ಹೂಡಿಕೆದಾರರಿಗೆ ಇವೆಲ್ಲವೂ ಗೊತ್ತಿರುವ ಸಂಗತಿಯೇ. ಹೆಚ್ಚು ಮಂದಿಗೆ ತಿಳಿಯದ ಕೆಲ ವಿಚಾರಗಳೂ ಪಿಪಿಎಫ್​ನಲ್ಲಿವೆ. ಪಿಪಿಎಫ್​ನಲ್ಲಿ ಒಂದು ತಿಂಗಳ ಐದನೇ ತಾರೀಖಿನೊಳಗೆ ಹೂಡಿಕೆ ಮಾಡುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಆ ತಿಂಗಳ ನಿಮ್ಮ ಹೂಡಿಕೆಗೆ ಬಡ್ಡಿ ಸಿಕ್ಕೋದಿಲ್ಲ.

ಪಿಪಿಎಫ್​ನಲ್ಲಿ ಒಂದು ವರ್ಷದ ಹೂಡಿಕೆಯನ್ನು ನೀವು ಒಮ್ಮೆಗೇ ಮಾಡಬಹುದು, ಅಥವಾ ಕಂತು ಕಂತುಗಳಲ್ಲಿ ನಿಮಗೆ ಅನುಕೂಲ ಬಂದಂತೆ ಕಟ್ಟಲು ಅವಕಾಶ ಇದೆ. ಈ ಸ್ಕೀಮ್​ನಲ್ಲಿ ವಾರ್ಷಿಕ ಬಡ್ಡಿ ಶೇ. 7.1 ನಿಗದಿಯಾಗಿದೆಯಾದರೂ ಮಾಸಿಕವಾಗಿ ಬಡ್ಡಿದರವನ್ನು ಗಣಿಸಲಾಗುತ್ತದೆ. ಅಂದರೆ ಪ್ರತೀ ತಿಂಗಳು ಬಡ್ಡಿ ಹಣವು ಒಟ್ಟಾರೆ ಹೂಡಿಕೆಗೆ ಸೇರ್ಪಡೆಯಾಗುತ್ತದೆ.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ಒಂದು ತಿಂಗಳಲ್ಲಿ ಕನಿಷ್ಠ ಬ್ಯಾಲನ್ಸ್ ಮೊತ್ತಕ್ಕೆ ಬಡ್ಡಿ ಹಣ ಸಂದಾಯವಾಗುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಯಾವುದೇ ತಿಂಗಳಲ್ಲಿ ಐದನೇ ತಾರೀಖಿನಿಂದ ಹಿಡಿದು ಕೊನೆಯ ದಿನದವರೆಗೆ ಇರುವ ಕನಿಷ್ಠ ಬ್ಯಾಲನ್ಸ್ ಹಣಕ್ಕೆ ಬಡ್ಡಿ ಕೊಡಲಾಗುತ್ತದೆ. ಅಂದರೆ ಒಂದರಿಂದ ಐದನೇ ತಾರೀಖಿನೊಳಗೆ ನೀವು ಡೆಪಾಸಿಟ್ ಮಾಡಿದರೆ ಆ ತಿಂಗಳ ಬಡ್ಡಿಹಣ ನಿಮ್ಮ ಹೂಡಿಕೆಗೆ ಸೇರ್ಪಡೆಯಾಗುತ್ತದೆ.

ಉದಾಹರಣೆಗೆ, ನೀವು ಈ ತಿಂಗಳು ಏಪ್ರಿಲ್ 6ರಂದು ಪಿಪಿಎಫ್​ ಖಾತೆಗೆ ಹಣ ಡೆಪಾಸಿಟ್ ಮಾಡಿದರೆ, ಆ ಹಣಕ್ಕೆ ಏಪ್ರಿಲ್ ತಿಂಗಳ ಬಡ್ಡಿಹಣ ಸಿಗುವುದಿಲ್ಲ. ಐದನೇ ತಾರೀಖಿನ ಒಳಗೆ ನೀವು ತುಂಬಿಸಬೇಕು. ಒಂದೇ ಬಾರಿಗೆ ಇಡೀ ವರ್ಷದ ಡೆಪಾಸಿಟ್ ಹಣವನ್ನು ಹಾಕುತ್ತಿರುವವರಿಗಂತೂ ಈ ಅಂಶ ಮುಖ್ಯ ಎನಿಸುತ್ತದೆ. ಸಾವಿರಾರು ರೂನಷ್ಟು ಬಡ್ಡಿ ಆದಾಯ ಕೈತಪ್ಪಬಹುದು.

ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್​ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನ ಖಾತೆಯನ್ನು ಕೆಲ ಆಯ್ದ ಬ್ಯಾಂಕುಗಳು ಮತ್ತು ಪೋಸ್ಟ್ ಆಫೀಸ್ ಕಚೇರಿಗಳಲ್ಲಿ ತೆರೆಯಬಹುದು. 15 ವರ್ಷಗಳಿಗೆ ಮೆಚ್ಯೂರಿಟಿ ಅವಧಿ ಇರುತ್ತದೆ. ಅದಾದ ಬಳಿಕವೂ ಇಚ್ಛಿಸಿದರೆ ಹೂಡಿಕೆ ಮುಂದುವರಿಸಬಹುದು.

ಒಂದು ವರ್ಷದಲ್ಲಿ 500 ರೂನಿಂದ ಆರಂಭವಾಗಿ ಒಂದೂವರೆ ಲಕ್ಷ ರೂವರೆಗೆ ಪಿಪಿಎಫ್ ಅಕೌಂಟ್​ಗೆ ಹಣ ಹಾಕಬಹುದು. ಒಂದು ವರ್ಷ ಒಂದು ಲಕ್ಷ, ಮತ್ತೊಂದು ವರ್ಷ ಒಂದೂವರೆ ಲಕ್ಷ, ಮಗದೊಂದು ವರ್ಷ ಒಂದು ಲಕ್ಷ ಹೀಗೆ ಗರಿಷ್ಠ ಒಂದೂವರೆ ಲಕ್ಷ ರೂವರೆಗೆ ಎಷ್ಟು ಬೇಕಾದರೂ ಹಣವನ್ನು ಒಂದು ವರ್ಷದಲ್ಲಿ ಹಾಕಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ