ಉಗ್ರ ಹಫೀಜ್ ಸಯೀದ್, ಮಸೂದ್ ಅಜರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಅಭ್ಯಂತರವಿಲ್ಲ: ಬಿಲಾವಲ್
ಭಾರತವು ಆಸಕ್ತಿ ತೋರಿದರೆ ಉಗ್ರ ಹಫೀಜ್ ಸಯೀದ್(Hafiz Saeed )ಹಾಗೂ ಮಸೂದ್ ಅಜರ್(Masood Azhar)ನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥರೂ ಆಗಿರುವ ಬಿಲಾವಲ್, ಅಲ್ ಜಜೀರಾ ಜತೆ ಮಾತನಾಡಿ, ಭಾರತವು ಸಹಕರಿಸಿದರೆ ಈ ಉಗ್ರರನ್ನು ಗಡಿಪಾರು ಮಾಡುವುದರಲ್ಲಿ ಯಾವುದೇ ಅಡಚಣೆ ಇರುವುದಿಲ್ಲ ಎಂದಿದ್ದಾರೆ.

ಇಸ್ಲಾಮಾಬಾದ್, ಜುಲೈ 06: ಭಾರತವು ಆಸಕ್ತಿ ತೋರಿದರೆ ಉಗ್ರ ಹಫೀಜ್ ಸಯೀದ್(Hafiz Saeed )ಹಾಗೂ ಮಸೂದ್ ಅಜರ್(Masood Azhar)ನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥರೂ ಆಗಿರುವ ಬಿಲಾವಲ್, ಅಲ್ ಜಜೀರಾ ಜತೆ ಮಾತನಾಡಿ, ಭಾರತವು ಸಹಕರಿಸಿದರೆ ಈ ಉಗ್ರರನ್ನು ಗಡಿಪಾರು ಮಾಡುವುದರಲ್ಲಿ ಯಾವುದೇ ಅಡಚಣೆ ಇರುವುದಿಲ್ಲ ಎಂದಿದ್ದಾರೆ.
ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದಾನೆ. ಸಯೀದ್ ಬಂಧಿಯಾಗಿದ್ದಾನೆ. ಇಬ್ಬರ ಮೇಲೂ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಗಳಿವೆ. ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಶಿಕ್ಷೆಗೆ ಗುರಿಪಡಿಸಲು ಭಾರತದಿಂದ ಅಗತ್ಯ ಸಾಕ್ಷ್ಯ ಬೇಕಿದೆ. ಈ ಸಾಕ್ಷ್ಯಗಳನ್ನು ಭಾರತ ಇಲ್ಲಿನ ನ್ಯಾಯಾಲಯಕ್ಕೆ ಒದಗಿಸಿದರೆ ಶಿಕ್ಷೆಗೆ ಗುರಿಪಡಿಸಲು ಮತ್ತು ಹಸ್ತಾಂತರಕ್ಕೆ ಅಡ್ಡಿ ಎದುರಾಗದು’ ಎಂದು ಬಿಲಾವಲ್ ಹೇಳಿದ್ದಾರೆ.
ಸಯೀದ್ ಪಾಕಿಸ್ತಾನದಲ್ಲಿ ಬಂಧಿತನಾಗಿದ್ದಾನೆ. ಮಸೂದ್ ಅಜರ್ ಅಫ್ಗಾನಿಸ್ತಾನದಲ್ಲಿ ಇರಬಹುದು. ಪಾಕ್ ನೆಲದಲ್ಲಿರುವ ಬಗ್ಗೆ ಭಾರತ ಮಾಹಿತಿ ಕೊಟ್ಟ ದಿನವೇ ಬಂಧಿಸಲು ಸಿದ್ಧ ಎಂದು ಬಿಲಾವಲ್ ತಿಳಿಸಿದ್ದಾರೆ. ನೀಡಿದ ಸಂದರ್ಶನದಲ್ಲಿ ಹಫೀಜ್ ಸಯೀದ್, ಮಸೂದ್ ಅಜರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ಸಿದ್ಧವಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಇಂಥ ಬೇಡಿಕೆಗೆ ಪಾಕಿಸ್ತಾನದಲ್ಲಿ ವಿರೋಧವಿದ್ದಂತಿಲ್ಲ ಎಂಬುದು ನಮ್ಮ ನಂಬಿಕೆ.
ಮತ್ತಷ್ಟು ಓದಿ: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಪಾಕ್‌ನಲ್ಲಿ ಇಲ್ಲ, ಅಫ್ಘಾನಿಸ್ತಾನದಲ್ಲಿರಬಹುದು: ಬಿಲಾವಲ್ ಭುಟ್ಟೋ
ಹಫೀಜ್ ಸಯೀದ್, ಮಸೂದ್ ಅಜರ್ ವಿರುದ್ಧ ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಇವೆಲ್ಲ ಪಾಕ್‌ನಲ್ಲಿ ನಡೆದ ಪ್ರಕರಣಗಳು. ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಪಡಿಸುವುದು ಕಷ್ಟ. ಇದಕ್ಕೆ ಭಾರತದಿಂದ ಅಗತ್ಯ ಸಹಕಾರ ಸಿಗದಿರುವುದೇ ಕಾರಣ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರ (ನ್ಯಾಕ್ಟಾ) ಪ್ರಕಾರ, ಎಲ್‌ಇಟಿ ಮತ್ತು ಜೆಇಎಂ ಎರಡೂ ನಿಷೇಧಿತ ಸಂಘಟನೆಗಳಾಗಿವೆ. 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪ್ರಸ್ತುತ ಭಯೋತ್ಪಾದನೆಗೆ ಹಣಕಾಸು ಒದಗಿಸಿದ್ದಕ್ಕಾಗಿ ಪಾಕಿಸ್ತಾನದಲ್ಲಿ 33 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮಸೂದ್ ಅಜರ್‌ನನ್ನು ಸಹ ನಕ್ಟಾ ನಿಷೇಧಿಸಿದೆ.
ಅಜರ್ ಎಲ್ಲಿದ್ದಾನೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಿಲಾವಲ್, ಆತ ಅಫ್ಘಾನಿಸ್ತಾನದಲ್ಲಿದ್ದಾನೆ ಎಂದು ಹಳಲಾಗುತ್ತಿದೆ. ಪಾಕಿಸ್ತಾನ ಇಲ್ಲಿಯವರೆಗೆ ಅವನನ್ನು ಪತ್ತೆಹಚ್ಚಲು ಅಥವಾ ಬಂಧಿಸಲು ವಿಫಲವಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:36 am, Sun, 6 July 25