ಏಟಿಗೆ ಏಟು; ಭಾರತದ ಉತ್ಪನ್ನಗಳ ಮೇಲೆ ಸುಂಕ ಹಾಕುತ್ತಿರುವ ಅಮೆರಿಕಕ್ಕೆ ಪ್ರತಿಸುಂಕ ವಿಧಿಸಲು ಭಾರತ ನಿರ್ಧಾರ
India to levy retaliatory duties on US exports: ಭಾರತದ ಆಟೊಮೊಬೈಲ್ ಉತ್ಪನ್ನಗಳ ಮೇಲೆ ಟ್ಯಾರಿಫ್ ವಿಧಿಸುವ ಕ್ರಮವನ್ನು ಅಮೆರಿಕ ಮುಂದುವರಿಸಿದೆ. ತಾನೂ ಕೂಡ ಅಮೆರಿಕದ ಉತ್ಪನ್ನಗಳ ಮೇಲೆ ಪ್ರತಿಸುಂಕ ವಿಧಿಸಲು ಭಾರತ ನಿರ್ಧರಿಸಿದೆ. ಈ ಸಂಬಂಧ ಡಬ್ಲ್ಯುಟಿಒಗೆ ಭಾರತವು ನೋಟಿಫೈ ಮಾಡಿದೆ.

ನವದೆಹಲಿ, ಜುಲೈ 4: ಆಟೊಮೊಬೈಲ್ ಸೆಕ್ಟರ್ನಲ್ಲಿ ಭಾರತದ ಕೆಲ ಉತ್ಪನ್ನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಸುಂಕ ವಿಧಿಸುತ್ತಿರುವ ಅಮೆರಿಕದ ಮೇಲೆ ಭಾರತವೂ ಪ್ರತಿಸುಂಕ (retaliatory tariffs) ಹಾಕಲು ಯೋಜಿಸುತ್ತಿದೆ. ವಿಶ್ವ ವ್ಯಾಪಾರ ಸಂಸ್ಥೆಯಾದ ಡಬ್ಲ್ಯುಟಿಒದಲ್ಲಿ (WTO) ಇಂಥದ್ದೊಂದು ಪ್ರಸ್ತಾಪವನ್ನು ಭಾರತ ಮುಂದಿಟ್ಟಿದೆ. ‘ಅಮೆರಿಕದಲ್ಲಿ ತಯಾರಾದ ಆಯ್ದ ಉತ್ಪನ್ನಗಳಿಗೆ ನೀಡಲಾದ ವಿನಾಯಿತಿಯನ್ನು ನಿಲ್ಲಿಸಲು, ಮತ್ತು ಆಮದು ಸುಂಕವನ್ನು ಹೆಚ್ಚಿಸಲು ಪ್ರಸ್ತಾಪಿಸಿದ್ದೇವೆ’ ಎಂದು ಡಬ್ಲ್ಯುಟಿಒ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಭಾರತದ ಪ್ಯಾಸೆಂಜರ್ ವಾಹನ ಮತ್ತು ಹಗುರ ಟ್ರಕ್ಗಳು ಹಾಗೂ ಕೆಲ ವಾಹನ ಬಿಡಿಭಾಗಗಳ ಮೇಲೆ ಅಮೆರಿಕ ಮಾರ್ಚ್ 26ರಂದು ಶೇ. 25ರಷ್ಟು ಟ್ಯಾರಿಫ್ ಹಾಕಿದೆ. ತನ್ನ ಉದ್ಯಮವನ್ನು ರಕ್ಷಿಸಲು ಸರ್ಕಾರ ತೆಗೆದುಕೊಂಡ ಕ್ರಮವಾಗಿದೆ. ಡಬ್ಲ್ಯುಟಿಒದಲ್ಲಿ ಇದನ್ನು ನೋಟಿಫೈ ಮಾಡಲಾಗಿಲ್ಲ. ಅಮೆರಿಕದ ಈ ಕ್ರಮವು 1994ರ ಗ್ಯಾಟ್ ಒಪ್ಪಂದದ (GATT agreement) ನಿಯಮಗಳಿಗೆ ವಿರುದ್ಧವಾಗಿದೆ ಎಂದು ಭಾರತವು ಆರೋಪಿಸಿದೆ.
ಇದನ್ನೂ ಓದಿ: ಸೊನ್ನೆ ಸಾಲ, ಸಖತ್ ಲಾಭ; ಷೇರುಮಾರುಕಟ್ಟೆಯಲ್ಲಿ ಸಿಕ್ಕಿದ್ದು ಎರಡೇ ಷೇರು; ಒಂದು ಸೂಪರ್ ಹಿಟ್, ಇನ್ನೊಂದು ನಾರ್ಮಲ್ ಹಿಟ್
ಈ ಆಮದು ಸುಂಕ ವಿಚಾರದ ಬಗ್ಗೆ ಸಮಾಲೋಚನೆ ನಡೆಸಲು ಭಾರತ ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಅಮೆರಿಕದ ಉತ್ಪನ್ನಗಳ ಮೇಲೆ ನೀಡುತ್ತಿರುವ ವಿನಾಯಿತಿ ಮತ್ತಿತರ ಸೌಲಭ್ಯಗಳನ್ನು ನಿಲ್ಲಿಸುವ ಹಕ್ಕು ತನಗೆ ಇದೆ ಎಂದು ಭಾರತ ಹೇಳುತ್ತಿದೆ.
ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಟ್ಯಾರಿಫ್ ವಿಧಿಸುವುದನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಈಗ ಪ್ರತಿಸುಂಕ ಹಾಕಲು ಮುಂದಾಗಿದೆ.
ಇದನ್ನೂ ಓದಿ: ಷೇರು ಮಾರುಕಟ್ಟೆಗೆ ಚಳ್ಳೆಹಣ್ಣು ತಿನ್ನಿಸಿ 36,500 ಕೋಟಿ ರೂ ಪಂಗನಾಮ ಹಾಕಿತಾ ಜೇನ್ ಸ್ಟ್ರೀಟ್; ಅದರ ಕುತಂತ್ರದ ಕಥೆ ಕೇಳಿ…
ಭಾರತದಿಂದ ಅಮೆರಿಕಕ್ಕೆ ಒಂದು ವರ್ಷದಲ್ಲಿ 2,995 ಮಿಲಿಯನ್ ಡಾಲರ್ ಮೌಲ್ಯದಷ್ಟು ರಫ್ತಾಗುತ್ತದೆ. ಇದಕ್ಕೆ ಆಮದು ಸುಂಕವಾಗಿ 723.75 ಮಿಲಿಯನ್ ಡಾಲರ್ ವಸೂಲಿ ಮಾಡಿದೆ. ಭಾರತವು ಪ್ರತಿಸುಂಕ ಹಾಕಲು ನಿರ್ಧರಿಸಿದಲ್ಲಿ ಅಮೆರಿಕದ ಉತ್ಪನ್ನಗಳಿಗೆ ಇಷ್ಟೇ ಮೊತ್ತದ ಸುಂಕವನ್ನು ವಿಧಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




