AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊನ್ನೆ ಸಾಲ, ಸಖತ್ ಲಾಭ; ಷೇರುಮಾರುಕಟ್ಟೆಯಲ್ಲಿ ಸಿಕ್ಕಿದ್ದು ಎರಡೇ ಷೇರು; ಒಂದು ಸೂಪರ್ ಹಿಟ್, ಇನ್ನೊಂದು ನಾರ್ಮಲ್ ಹಿಟ್

In search for multibaggers: ಸಾಲವೇ ಇರಬಾರದು, ಹಾಕಿದ ಬಂಡವಾಳಕ್ಕೆ ಶೇ. 40ಕ್ಕಿಂತಲೂ ಹೆಚ್ಚು ಲಾಭ ಹೊಂದಿರಬೇಕು. ಈ ಎರಡು ಮಾನದಂಡಗಳಲ್ಲಿ ಪಾಸಾಗಿದ್ದು ಎರಡೇ ಷೇರು ಎಂದು ಹೇಳಲಾಗಿದೆ. ಶಿಲ್ಚಾರ್ ಟೆಕ್ನಾಲಜೀಸ್ ಮತ್ತು ಅಮಿಕ್ ಫೋರ್ಜಿಂಗ್ ಸಂಸ್ಥೆಗಳು ಮಾತ್ರ ಈ ಎರಡು ಮಾನದಂಡಗಳನ್ನು ಹೊಂದಿವೆ.

ಸೊನ್ನೆ ಸಾಲ, ಸಖತ್ ಲಾಭ; ಷೇರುಮಾರುಕಟ್ಟೆಯಲ್ಲಿ ಸಿಕ್ಕಿದ್ದು ಎರಡೇ ಷೇರು; ಒಂದು ಸೂಪರ್ ಹಿಟ್, ಇನ್ನೊಂದು ನಾರ್ಮಲ್ ಹಿಟ್
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 04, 2025 | 3:16 PM

Share

ನವದೆಹಲಿ, ಜುಲೈ 4: ದೀರ್ಘಾವಧಿಯಲ್ಲಿ ಉತ್ತಮ ಲಾಭ ತರಬಲ್ಲ ಮಲ್ಟಿಬ್ಯಾಗರ್ ಷೇರುಗಳನ್ನು (Multibagger stocks) ಆರಂಭಿಕ ಹಂತದಲ್ಲೇ ಗುರುತಿಸುವುದು ಬಹಳ ಕ್ಲಿಷ್ಟಕರ. ಒಳ್ಳೆಯ ಷೇರು ಎಂದರೆ, ಆ ಕಂಪನಿ ಲಾಭದಾಯಕವಾಗಿರಬೇಕು. ಅದರ ಆದಾಯ ಮತ್ತು ಲಾಭವು ಪ್ರತೀ ಷೇರಿಗೆ ಉತ್ತಮ ಮಟ್ಟದಲ್ಲಿರಬೇಕು. ಅದರ ಬ್ಯುಸಿನೆಸ್ ಭವಿಷ್ಯದಲ್ಲೂ ನಿರಾತಂಕವಾಗಿ ಬೆಳೆಯುವಂತಿರಬೇಕು. ತನ್ನ ಸೆಕ್ಟರ್​​ನಲ್ಲಿ ಮುಂಚೂಣಿಯಲ್ಲಿರಬೇಕು. ಕಂಪನಿಯ ಮ್ಯಾನೇಜ್ಮೆಂಟ್ ಸಮರ್ಪಕವಾಗಿರಬೇಕು. ಹೀಗೆ ನಾನಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಷೇರು ಹುಡುಕಲಾಗುತ್ತಿದೆ.

ಬಹಳಷ್ಟು ವಿಶ್ಲೇಷಕರು ಮತ್ತು ಹೂಡಿಕೆದಾರರು ಕಾರ್ಪೊರೇಟ್ ಕ್ಷೇತ್ರದ ತ್ರೈಮಾಸಿಕ ಹಣಕಾಸು ವರದಿಗಳನ್ನು ಜಾಲಾಡುವುದಿದೆ. ಕಂಪನಿಯ ಹಣಕಾಸು ಸ್ಥಿತಿ ಹಿಂದೆ ಹೇಗಿತ್ತು, ಈಗ ಹೇಗಿದೆ, ಭವಿಷ್ಯದಲ್ಲಿ ಹೇಗಿರಬಹುದು ಎಂಬುದು ಈ ಫೈನಾನ್ಷಿಯಲ್ ಸ್ಟೇಟ್ಮೆಂಟ್​​ಗಳಿಂದ ತಿಳಿಯಬಹುದು. ಶೂನ್ಯ ಸಾಲ ಹೊಂದಿರುವ ಮತ್ತು ಅಧಿಕ ಲಾಭ ಇರುವ ಕಂಪನಿಗಳಾದರೆ ಹೇಗೆ? ಫೈನಾನ್ಷಿಯಲ್ ಎಕ್ಸ್​ಪ್ರೆಸ್ ಪತ್ರಿಕೆಯು ಎರಡು ಅಂಶಗಳನ್ನು ಇಟ್ಟು ಮಾರುಕಟ್ಟೆಯಲ್ಲಿ ಶೋಧಿಸಿದಾಗ ಎರಡೇ ಕಂಪನಿಗಳು ಸಿಕ್ಕವಂತೆ.

ಶಿಲ್ಚಾರ್ ಟೆಕ್ನಾಲಜೀಸ್ (Shilchar Technologies) ಮತ್ತು ಅಮಿಕ್ ಫೋರ್ಜಿಂಗ್ (AMIC forging), ಆ ಎರಡು ಕಂಪನಿಗಳು. ಇವು ಸಾಲ ಹೊಂದಿಲ್ಲ. ಒಳ್ಳೆಯ ಲಾಭ ತೋರಿಸಿವೆ. ಆರ್​​ಒಸಿಇ (ROCE) ಶೇ. 40ಕ್ಕಿಂತಲೂ ಹೆಚ್ಚಿದೆ. ಕಳೆದ ಐದು ವರ್ಷದಲ್ಲಿ ಈ ಕಂಪನಿಗಳ ಲಾಭವು ಶೇ. 100ರ ಸಿಎಜಿಆರ್​​ನಲ್ಲಿ ಬೆಳೆದಿದೆ. ಇಂಥ ಸಾಧನೆ ತೋರಿರುವುದು ಇವೆರಡು ಕಂಪನಿಗಳು ಮಾತ್ರ.

ಇದನ್ನೂ ಓದಿ: 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡಲು ಯಾವ ಪ್ಲಾನ್​​ಗಳು ಬೆಸ್ಟ್?

ಷೇರು ಮಾರುಕಟ್ಟೆಯಲ್ಲಿ 2-3 ವರ್ಷಗಳಿಂದ ಧೂಳೆಬ್ಬಿಸುತ್ತಿರುವ ಶಿಲ್ಚಾರ್

ಎಲೆಕ್ಟ್ರಾನಿಕ್ಸ್, ಟೆಲಿಕಾಂ, ವಿದ್ಯುತ್ ವಿತರಣೆ ಟ್ರಾನ್ಸ್​ಫಾರ್ಮರ್ಸ್​ಗಳನ್ನು ತಯಾರಿಸುವ ಕಂಪನಿಯಾದ ಶಿಲಚಾರ್ ಟೆಕ್ನಾಲಜೀಸ್ ಇತ್ತೀಚೆಗೆ ಫೆರೈಟ್ ಟ್ರಾನ್ಸ್​ಫಾರ್ಮರ್ಸ್ ತಯಾರಿಕೆಗೂ ತನ್ನ ಬ್ಯುಸಿನೆಸ್ ವಿಸ್ತರಿಸಿದೆ.

ಕಳೆದ 20 ವರ್ಷದಿಂದ ಷೇರು ಮಾರುಕಟ್ಟೆಯಲ್ಲಿ ಇದು 2020ರವರೆಗೂ ಆರಕ್ಕೇರದೆ ಮೂರಕ್ಕಿಳಿಯದೇ ಉಳಿದುಹೋಗಿತ್ತು. ಕಳೆದ ಮೂರ್ನಾಲ್ಕು ವರ್ಷದಿಂದ ಸಿಕ್ಕಾಪಟ್ಟೆ ಜಿಗಿಜಿಗಿದು ಏರುತ್ತಿದೆ. 2020ರಲ್ಲಿ 80 ರೂ ಇದ್ದ ಶಿಲಚಾರ್ ಟೆಕ್ನಾಲಜೀಸ್​ನ ಷೇರು ಬೆಲೆ ಈಗ 5,643 ರೂಗೆ ಏರಿದೆ. ಕೆಲ ದಿನಗಳ ಹಿಂದಷ್ಟೇ ಅದು 6,125 ರೂ ಗರಿಷ್ಠ ಮುಟ್ಟಿತ್ತು. ಮೂರು ವರ್ಷದಲ್ಲಿ ಬೆಲೆ 70 ಪಟ್ಟು ಏರಿರುವುದು ಕೌತುಕ ಮೂಡಿಸಿದೆ.

ಅಮಿಕ್ ಫೋರ್ಜಿಂಗ್ ಷೇರು ಹೇಗೆ?

ಈಗ ಬಹಳ ಬೇಡಿಕೆಯಲ್ಲಿರುವ ಪ್ರಿಸಿಶನ್ ಮತ್ತು ಫೋರ್ಜಿಂಗ್ ತಯಾರಿಕಾ ಕ್ಷೇತ್ರದಲ್ಲಿರುವುದು ಅಮಿಕ್ ಫೋರ್ಜಿಂಗ್. ಇದರ ಆರ್​​ಒಸಿಇ ಅಥವಾ ಲಾಭದ ಮಾರ್ಜಿನ್ 48 ಇದೆ. ಅಂದರೆ, ಪ್ರತೀ 100 ರೂ ಬಂಡವಾಳ ವೆಚ್ಚಕ್ಕೆ ಇದು ಪಡೆಯುವ ಲಾಭ 48 ರೂ.

ಇದನ್ನೂ ಓದಿ: ಫಾಕ್ಸ್​ಕಾನ್ ಘಟಕದಿಂದ 300ಕ್ಕೂ ಹೆಚ್ಚು ಚೀನೀ ಉದ್ಯೋಗಿಗಳು ವಾಪಸ್; ಭಾರತಕ್ಕೆ ಹಿನ್ನಡೆ ತರಲು ಚೀನಾದ ಸಂಚು?

2023ರ ಡಿಸೆಂಬರ್​​ನಲ್ಲಿ ಷೇರು ಮಾರುಕಟ್ಟೆಗೆ ಅಡಿ ಇಟ್ಟ ಇದರ ಷೇರು ಬೆಲೆ ಒಂದೂವರೆ ವರ್ಷದಲ್ಲಿ ಐದು ಪಟ್ಟು ಹೆಚ್ಚಾಗಿದೆ. ಮಲ್ಟಿಬ್ಯಾಗರ್ ಎನಿಸುವ ಎಲ್ಲಾ ಲಕ್ಷಣಗಳನ್ನು ಇದು ಹೊಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!