ಎಸ್ಐಪಿಯಲ್ಲಿ ತಿಂಗಳಿಗೆ ಕೇವಲ 5,000 ರೂ ಹೂಡಿಕೆ ಆರಂಭಿಸಿ, 5 ಕೋಟಿ ರಿಟರ್ನ್ ಪಡೆಯಿರಿ
SIP Step-up Investment: ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಪ್ರಕಾರ ನೀವು ದೀರ್ಘಾವಧಿ ಹೂಡಿಕೆ ಮಾಡಿದರೆ ಭರಪೂರ ಲಾಭ ಮಾಡಬಹುದು. ಹಣದ ಕಾಂಪೌಂಡಿಂಗ್ ಗುಣ ಬಹಳ ಸಹಾಯಕ್ಕೆ ಬರುತ್ತದೆ. ವರ್ಷಕ್ಕೆ ನಿಮ್ಮ ಹೂಡಿಕೆ ಶೇ. 15ರಷ್ಟು ಬೆಳೆದು ನೀವು ವರ್ಷಕ್ಕೆ ಹೂಡಿಕೆಯನ್ನೂ ಶೇ. 15ರಷ್ಟು ಹೆಚ್ಚಿಸುತ್ತಾ ಹೋದರೆ 25 ವರ್ಷದಲ್ಲಿ ನಿಮ್ಮ 5,000 ರೂ ನಿಯಮಿತ ಹೂಡಿಕೆ 5 ಕೋಟಿ ರೂ ದಾಟಬಲ್ಲುದು.
ಮ್ಯೂಚುವಲ್ ಫಂಡ್ನಲ್ಲಿ ಎಸ್ಐಪಿ ಹೂಡಿಕೆ ಪ್ಲಾನ್ಗಳು (Mutual Fund SIP plans) ಬಹಳ ಜನಪ್ರಿಯವಾಗುತ್ತಿವೆ. ಬ್ಯಾಂಕ್ನ ರೆಕರಿಂಗ್ ಡೆಪಾಸಿಟ್ನಂತೆ ಮಾಸಿಕವಾಗಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋಗಬಹುದು. ಸಂಬಳದಾರರಿಗೆ ಅಥವಾ ನಿಯಮಿತವಾಗಿ ಆದಾಯ ಪಡೆಯುತ್ತಿರುವವರಿಗೆ ಹಣ ಉಳಿಸಿ ಇದರಲ್ಲಿ ಹೂಡಿಕೆ ಮಾಡುವುದು ಸುಲಭ. ಎಸ್ಐಪಿಯಲ್ಲಿ ಕೆಲ ಪ್ರಮುಖ ಹಣಕಾಸು ಜಾಣತನದ ಅಂಶಗಳಿವೆ. ಮೊದಲನೆಯದಾಗಿ ಇದು ದೀರ್ಘಾವಧಿ ಹೂಡಿಕೆ. ಎರಡನೆಯದಾಗಿ, ಕಾಂಪೌಂಡಿಂಗ್ ಆಫ್ ಮನಿ ಎಂಬ ಹಣಕಾಸು ಮ್ಯಾಜಿಕ್ ಇದರಲ್ಲಿ ಇರುತ್ತದೆ. ಮೂರನೆಯದು, ಎಸ್ಐಪಿಯಲ್ಲಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸಬಹುದು. ಇದರ ಜೊತೆಗೆ ನೀವು ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ ಉತ್ತಮವಾಗಿ ಬೆಳೆಯಬೇಕು. ಹೀಗಾದಾಗ, ಎಸ್ಐಪಿ ಪ್ಲಾನ್ ನಿಮ್ಮ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯತಾಗುತ್ತದೆ.
ಕನಿಷ್ಠ 15 ವರ್ಷ ಹೂಡಿಕೆ ಮಾಡಿ
ನೀವು ಎಸ್ಐಪಿ ಪ್ಲಾನ್ ಅಥವಾ ಯಾವುದೇ ಹೂಡಿಕೆ ಪಡೆದರೂ ಕನಿಷ್ಠ 15 ವರ್ಷವಾದರೂ ಬದ್ಧವಾಗಿರಿ. ಉತ್ತಮ ಮ್ಯೂಚುವಲ್ ಫಂಡ್ನಲ್ಲಿ ನೀವು 15 ವರ್ಷಕ್ಕೂ ಹೆಚ್ಚು ಕಾಲ ಹೂಡಿಕೆ ತೊಡಗಿಸಿದ್ದೇ ಆದಲ್ಲಿ ವರ್ಷಕ್ಕೆ ಶೇ. 15ರ ಬೆಳವಣಿಗೆ ನೋಡಬಹುದು ಎನ್ನುತ್ತಾರೆ ಕಾರ್ತಿಕ್ ಜವೇರಿ ಹೇಳುತ್ತಾರೆ.
ಸ್ಟೆಪ್ ಅಪ್ ಇನ್ವೆಸ್ಟ್ಮೆಂಟ್
ನಿಮ್ಮ ವಾರ್ಷಿಕ ಆದಾಯ ಹೆಚ್ಚಳಕ್ಕೆ ತಕ್ಕಂತೆ ಹೂಡಿಕೆಯನ್ನೂ ಹೆಚ್ಚಿಸಬಹುದು. ಇದರಿಂದ ನಿಮ್ಮ ಒಟ್ಟಾರೆ ಹೂಡಿಕೆ ಬಹಳ ಹೆಚ್ಚಾಗುತ್ತದೆ. ಉದಾಹರಣೆಗೆ, ಎಸ್ಪಿಯಲ್ಲಿ ನೀವು ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತಿರಿ ಎಂದಿಟ್ಟುಕೊಳ್ಳಿ. ಒಂದು ವರ್ಷದ ಬಳಿಕ ಶೇ. 10ರಷ್ಟು, ಅಂದರೆ 1,000 ರೂನಷ್ಟು ಹೂಡಿಕೆ ಹೆಚ್ಚಿಸಬಹುದು. ಅಂದರೆ ಎರಡನೇ ವರ್ಷ ನೀವು ತಿಂಗಳಿಗೆ 11,000 ರೂ ಹೂಡಿಕೆ ಮಾಡುತ್ತಾ ಹೋಗುತ್ತೀರಿ.
ಇದನ್ನೂ ಓದಿ: ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
5 ಸಾವಿರದಿಂದ 5 ಕೋಟಿ ರೂ ಹೇಗೆ ಸಾಧ್ಯ?
ನೀವು ಐದು ಸಾವಿರ ರೂಗಳ ಅಲ್ಪ ಮೊತ್ತವನ್ನು ಎಸ್ಐಪಿಯಲ್ಲಿ ತಿಂಗಳಿಗೆ ಹೂಡಿಕೆ ಮಾಡಲು ಆರಂಭಿಸುತ್ತೀರಿ. ಪ್ರತೀ ವರ್ಷ ಶೇ. 15ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋಗುತ್ತೀರಿ. ಇದೇ ರೀತಿ ನೀವು 25 ವರ್ಷ ಹೂಡಿಕೆ ಮಾಡುತ್ತಾ ಹೋಗುತ್ತೀರಿ ಎಂದಿಟ್ಟುಕೊಳ್ಳಿ. ನಿಮ್ಮ ಮ್ಯೂಚುವಲ್ ಫಂಡ್ ವಾರ್ಷಿಕವಾಗಿ ಶೇ. 15ರ ದರದಲ್ಲಿ ಬೆಳೆದಿದ್ದೇ ಆದಲ್ಲಿ 25 ವರ್ಷದಲ್ಲಿ ನಿಮ್ಮ ಕೈಸೇರುವ ಹಣ ಬರೋಬ್ಬರಿ 5.22 ಕೋಟ ರೂ ಆಗಿರುತ್ತದೆ. ಇದು ಎಸ್ಐಪಿ ಮತ್ತು ಸ್ಟೆಪಪ್ ಮ್ಯಾಜಿಕ್.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ