ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

Investment Tips: ಹಣ ಉಳಿಸುವುದು ಎಷ್ಟು ಮುಖ್ಯವೋ ಹಣ ಬೆಳೆಸಲು ಹೂಡಿಕೆ ಮಾಡುವುದೂ ಅಷ್ಟೇ ಮುಖ್ಯ. ಹಾಗೆಯೇ, ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಸರಿಯಾಗಿ ನಿರ್ಧರಿಸುವುದೂ ಬಹಳ ಮುಖ್ಯ. ಇವತ್ತು ಈಕ್ವಿಟಿ ಅಥವಾ ಷೇರು, ಫಿಕ್ಸೆಡ್ ಇನ್ಕಮ್, ಡೆಟ್, ಎಫ್​ಡಿ, ಚಿನ್ನ ಇತ್ಯಾದಿ ನಾನಾ ಹೂಡಿಕೆ ಆಯ್ಕೆಗಳಿವೆ. ರಿಯಲ್ ಎಸ್ಟೇಟ್​ನಲ್ಲಿ ಬಾಡಿಗೆ ಆದಾಯ ತರುವಂತಹ ಹೂಡಿಕೆ ಆಯ್ಕೆಯೂ ಇದೆ.

ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ಹಣ
Follow us
|

Updated on: Apr 07, 2024 | 1:27 PM

ಹೊಸ ಹಣಕಾಸು ವರ್ಷ ಏಪ್ರಿಲ್ 1ರಿಂದ ಆರಂಭವಾಗಿದೆ. ನೀವೀಗಾಗಲೇ ಹೂಡಿಕೆಗಳನ್ನು (investment) ಮಾಡಿದ್ದರೆ ಅದನ್ನು ಮರು ಅವಲೋಕಿಸಬಹುದು. ಒಂದು ವೇಳೆ ನಿಮ್ಮ ಹೊಸದಾಗಿ ಹೂಡಿಕೆಗಳನ್ನು ಮಾಡುವುದಿದ್ದರೆ ಕೆಲ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈಕ್ವಿಟಿ, ಡೆಟ್, ಎಫ್​ಡಿ, ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂಬುದು ತಜ್ಞರ ಅನಿಸಿಕೆ. ಈಕ್ವಿಟಿ, ಡೆಟ್​ಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಗದೇ ಇದ್ದಲ್ಲಿ ಮ್ಯುಚುವಲ್ ಫಂಡ್​ಗಳನ್ನು ಬಳಸಬಹುದು.

ಈಕ್ವಿಟಿಯಲ್ಲಿ ನಿಮ್ಮ ಹೂಡಿಕೆ ಎಲ್ಲೆಡೆ ಹರಡಿರಲಿ. ಮ್ಯೂಚುವಲ್ ಫಂಡ್​ಗಳಲ್ಲೇ ಸಾಕಷ್ಟು ವೈವಿಧ್ಯತೆ ಇದೆ. ಲಾರ್ಜ್ ಕ್ಯಾಪ್​ನಿಂದ ಹಿಡಿದು ನಾನಾ ರೀತಿಯ ಫಂಡ್​ಗಳಿವೆ. ಮಲ್ಟಿ ಅಸೆಟ್ ಫಂಡ್​ಗಳಿವೆ. ಮಲ್ಟಿ ಅಸೆಟ್ ಫಂಡ್ ಅನ್ನು ಆಯ್ಕೆ ಮಾಡಿದರೆ ಮೂರರಿಂದ ನಾಲ್ಕು ಬಗೆಯ ಹೂಡಿಕೆಗಳಲ್ಲಿ ಒಂದೇ ಹೂಡಿಕೆಯಲ್ಲಿ ಮಾಡಬಹುದು. ಈ ಮಲ್ಟಿ ಅಸೆಟ್ ಫಂಡ್​ಗಳು ಈಕ್ವಿಟಿ, ಫಿಕ್ಸೆಡ್ ಇನ್ಕಮ್, ಜಾಗತಿಕ ಷೇರು, ಚಿನ್ನ ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತವೆ. ಹೀಗಾಗಿ, ನಿಮ್ಮ ಹೂಡಿಕೆ ಸಾಕಷ್ಟು ವೈವಿಧ್ಯತೆ ಹೊಂದಿರುತ್ತದೆ.

ಇದನ್ನೂ ಓದಿ: ಕಡಿಮೆ ಸಂಬಳ ಇದ್ದರೆ, ಉದ್ಯೋಗ ಕಳೆದುಕೊಂಡರೆ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ವಾಸ್ತವಿಕ ಅಂಶಗಳು

ನಿಶ್ಚಿತ ಆದಾಯ ತರುವ ಸಾಧನಗಳಲ್ಲೂ ಹೂಡಿಕೆ ಹೆಚ್ಚಿರಬೇಕು. ನಿಮ್ಮ ಹೂಡಿಕೆಯಲ್ಲಿ ಶೇ. 40ರಷ್ಟು ಮೊತ್ತವು ಫಿಕ್ಸೆಡ್ ಇನ್ಕಮ್​ಗೆ ಹೋಗಬೇಕು. ಈಕ್ವಿಟಿಗಳಲ್ಲಿ ಶೇ. 40ರಷ್ಟು ಇರಬೇಕು. ಇನ್ನುಳಿದ ಶೇ. 20ರಷ್ಟು ಹೂಡಿಕೆಯು ಮಲ್ಟಿ ಅಸೆಟ್ ಫಂಡ್​ಗಳಲ್ಲಿ ಇರಬಹುದು.

ಐದು ಲಕ್ಷ ಇದ್ದರೆ ಈ 10 ಹೂಡಿಕೆಗಳನ್ನು ಪರಿಗಣಿಸಿ…

ನಿಮ್ಮಲ್ಲಿ ಐದು ಲಕ್ಷ ರೂ ಇದ್ದು ಅದನ್ನು ಹೂಡಿಕೆ ಮಾಡಲು ಬಯಸಿದರೆ ಹೇಗೆ ಮಾಡಬಹುದು? ಸೆಬಿ ನೊಂದಾಯಿತ ಇನ್ವೆಸ್ಟ್​ಮೆಂಟ್ ಅಡ್ವೈಸರ್ ಗೌರವ್ ಗೋಯಲ್ ಅವರು ಈ ಕೆಳಗಿನ ಒಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್​ಮೆಂಟ್ ಇದೆ ನೋಡಿ

ಏಳು ಷೇರುಗಳು ಹಾಗೂ ಮೂರು ಮ್ಯೂಚುವಲ್ ಫಂಡ್​ಗಳಲ್ಲಿ ಸಮವಾಗಿ ನಿಮ್ಮ ಹೂಡಿಕೆಗಳನ್ನು ಹಾಕಿರಿ. ಏಳು ಷೇರುಗಳಲ್ಲಿ ನಾಲ್ಕು ಲಾರ್ಜ್ ಕ್ಯಾಪ್, ಎರಡು ಮಿಡ್ ಕ್ಯಾಪ್ ಮತ್ತು ಒಂದು ಸ್ಮಾಲ್ ಕ್ಯಾಪ್ ಕಂಪನಿಯ ಷೇರುಗಳಲ್ಲಿ ತಲಾ 50,000 ರೂ ತೊಡಗಿಸಿಕೊಳ್ಳಿ. ಉತ್ತಮ ಆಡಳಿತ ಇರುವ ಕಂಪನಿಯನ್ನು ನೋಡಿ ಷೇರು ಆಯ್ಕೆ ಮಾಡಿಕೊಳ್ಳಿ.

ಇನ್ನು, ಮೂರು ಮ್ಯೂಚುವಲ್ ಫಂಡ್​ಗಳ ಪೈಕಿ ಒಂದು ಲಾರ್ಜ್ ಕ್ಯಾಪ್ ಮತ್ತು ಮಿಡ್​ಕ್ಯಾಪ್ ಫಂಡ್ ಇರಲಿ. ಇನ್ನೊಂದು ಫ್ಲೆಕ್ಸಿ ಕ್ಯಾಪ್ ಫಂಡ್ ಇರಲಿ. ಮತ್ತೊಂದು ಜಾಗತಿಕ ಮಾರುಕಟ್ಟೆಯಲ್ಲಿ ತೊಡಗಿಸುವ ಫಂಡ್ ಆಗಿರಲಿ. ಈ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಎಸ್​ಐಪಿ ಮಾರ್ಗ ಅನುಸರಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ