ಚಿನ್ನ, ನೀನೆಷ್ಟು ಚೆನ್ನ..! ಷೇರು ಮಾರುಕಟ್ಟೆಗಿಂತಲೂ ಭರ್ಜರಿ ರಿಟರ್ನ್ ಕೊಡುತ್ತಿದೆ ಸ್ವರ್ಣ

Gold investment: ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಭರ್ಜರಿಯಾಗಿ ಹೆಚ್ಚುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಶೇ. 22ರಷ್ಟು ಹೆಚ್ಚಾಗಿದೆ. ಅದರಲ್ಲೂ ಜನವರಿಯಿಂದ ಈಚೆ, ನಾಲ್ಕೂವರೆ ತಿಂಗಳಲ್ಲಿ ಬೆಲೆ ಶೇ. 15ರಷ್ಟು ಹೆಚ್ಚಾಗಿದೆ. ಈ ಏಪ್ರಿಲ್​ನ ಮೂರು ವಾರದಲ್ಲೇ ಚಿನ್ನದ ಬೆಲೆ ಶೇ. 7.60ರಷ್ಟು ಏರಿದೆ. ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಒಳ್ಳೆಯ ಆದಾಯ ಸಿಗಬಹುದು. ಚಿನ್ನದಿಂದ ಬರುವ ಆದಾಯಕ್ಕೆ ತೆರಿಗೆ ಅನ್ವಯ ಆಗುತ್ತದೆ.

ಚಿನ್ನ, ನೀನೆಷ್ಟು ಚೆನ್ನ..! ಷೇರು ಮಾರುಕಟ್ಟೆಗಿಂತಲೂ ಭರ್ಜರಿ ರಿಟರ್ನ್ ಕೊಡುತ್ತಿದೆ ಸ್ವರ್ಣ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 22, 2024 | 2:53 PM

ಚಿನ್ನವನ್ನು ಆಪತ್ಕಾಲದ ಸಂಪತ್ತು ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಚಿನ್ನ ಹೂಡಿಕೆಗೂ ಚೆನ್ನ, ಆಭರಣಕ್ಕೂ ಚೆನ್ನ, ಪ್ರತಿಷ್ಠೆಗೂ ಚೆನ್ನ. ಚಿನ್ನದ ಬೆಲೆ ಇತ್ತೀಚಿನ ಕೆಲ ತಿಂಗಳಿಂದ ಸತತವಾಗಿ ಏರುತ್ತಿದೆ. ಚಿನ್ನದ ಬೆಲೆ ಹೂಡಿಕೆ (gold investment) ಮಾಡಿದವರು ಯಾರಾದರೂ ಇದ್ದರೆ ಒಳ್ಳೆಯ ರಿಟರ್ನ್ ಪಡೆಯಬಹುದು. ಕಳೆದ ಒಂದು ತಿಂಗಳಲ್ಲಿ ಚಿನ್ನದ ಬೆಲೆ ಶೇ. 7.60ರಷ್ಟು ಏರಿದೆ. ಈ ವರ್ಷ ಜನವರಿಯಿಂದ ಈಚೆ ಬೆಲೆ ಬರೋಬ್ಬರಿ ಶೇ. 15ರಷ್ಟು ಹೆಚ್ಚಾಗಿದೆ. ಇತ್ತೀಚಿನವರೆಗೆ ಷೇರು ಮಾರುಕಟ್ಟೆಯೂ ಕೂಡ ಈ ಪರಿ ಬೆಳವಣಿಗೆ ಕಂಡಿತ್ತು. ಚಿನ್ನದ ಓಟವಂತೂ ಅಮೋಘ ಎನಿಸಿದೆ.

2023ರ ಡಿಸೆಂಬರ್ 31ರಂದು 24 ಕ್ಯಾರಟ್​ನ 10 ಗ್ರಾಮ್ ಅಪರಂಜಿ ಚಿನ್ನದ ಬೆಲೆ 63,200 ರೂ ಇತ್ತು. ನಾಲ್ಕೂವರೆ ತಿಂಗಳಲ್ಲಿ 9,500 ರೂನಷ್ಟು ಏರಿಕೆ ಕಂಡಿದೆ. ಅಂದರೆ, ಈ ವರ್ಷದ ಮೊದಲ ಕೆಲ ತಿಂಗಳಲ್ಲೇ ಶೇ. 15ರಷ್ಟು ಬೆಲೆ ಹೆಚ್ಚಳವಾಗಿದೆ. ಈ ಏಪ್ರಿಲ್ ತಿಂಗಳಲ್ಲೇ ಶೇ. 7.60ರಷ್ಟು ಹೆಚ್ಚಾಗಿದೆ. ಇನ್ನು, ಕಳೆದ ಒಂದು ವರ್ಷದ ದರ ವ್ಯತ್ಯಯ ಗಮನಿಸಿದರೆ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ 13,000 ರೂನಷ್ಟು ಹೆಚ್ಚಳವಾಗಿದದೆ. ಅಂದರೆ, ಒಂದು ವರ್ಷದ ಹೆಚ್ಚಳ ಬರೋಬ್ಬರಿ ಶೇ. 22ರಷ್ಟಿದೆ.

ಬೆಳ್ಳಿ ಬೆಲೆ ಕೂಡ ಇದೇ ಅವಧಿಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಅನಿಶ್ಚಿತ ಸಂದರ್ಭದಲ್ಲಿ ಅಮೂಲ್ಯ ಲೋಹಗಳು ಜನರಿಗೆ ಆರ್ಥಿಕ ಆಪತ್ಕಾಲ ಎದುರಿಸಲು ಇರುವ ಮೀಸಲು ನಿಧಿ ಎನಿಸಿದೆ. ಜೊತೆಗೆ ವಿಶ್ವದ ಬಹಳಷ್ಟು ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಖರೀದಿಸುತ್ತಿವೆ. ಇದು ಚಿನ್ನದ ಬೆಲೆ ತೀರಾ ಹೆಚ್ಚಾಗಲು ಕಾರಣವಾಗಿರಬಹುದು.

ಇದನ್ನೂ ಓದಿ: ಈ ವಾರ ಚಿನ್ನದ ಬೆಲೆ ಇನ್ನಷ್ಟು ಮೇಲೇರುತ್ತದಾ? ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

ಚಿನ್ನದಿಂದ ಬಂದ ಆದಾಯಕ್ಕೆ ಎಷ್ಟು ತೆರಿಗೆ?

ಚಿನ್ನದ ಮೇಲಿನ ಹೂಡಿಕೆಯಿಂದ ಬರುವ ಆದಾಯದ ಮೇಲೆ ಎರಡು ರೀತಿಯ ತೆರಿಗೆಗಳುಂಟು. ಹೂಡಿಕೆ ಮಾಡಿ ಮೂರು ವರ್ಷದೊಳಗೆ ಅದನ್ನು ಮಾರಿ ಲಾಭ ಮಾಡಿದರೆ ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆ ಅನ್ವಯ ಆಗುತ್ತದೆ. ಮೂರು ವರ್ಷಕ್ಕಿಂತ ಹೆಚ್ಚು ಅವಧಿ ಹೂಡಿಕೆ ಮಾಡಿ ಲಾಭ ಮಾಡಿದರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆ ಅನ್ವಯ ಆಗುತ್ತದೆ.

ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ವಿಚಾರದಲ್ಲಿ, ಈ ಲಾಭವು ಹೂಡಿಕೆದಾರರ ನಿವ್ವಳ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ಹೂಡಿಕೆದಾರರ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ಕಡಿತ ಮಾಡಲಾಗುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ದೊಡ್ಡಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗೋಪಾಯ

ಇನ್ನು, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ವಿಚಾರದಲ್ಲಿ ಚಿನ್ನದಿಂದ ಬರುವ ಆದಾಯಕ್ಕೆ ಶೇ. 20ರಷ್ಟು ತೆರಿಗೆ ಮತ್ತು ಶೇ. 4ರಷ್ಟು ಸೆಸ್ ವಿಧಿಸಲಾಗುತ್ತದೆ. ಈ ಮೇಲಿನದ್ದು ಭೌತಿಕ ಚಿನ್ನದ ಮೇಲಿನ ಹೂಡಿಕೆಗೆ ಅನ್ವಯ ಆಗುವಂಥದ್ದು.

ಸಾವರೀನ್ ಗೋಲ್ಡ್ ಬಾಂಡ್, ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್ ಇತ್ಯಾದಿ ಹೂಡಿಕೆ ಆಯ್ಕೆಗಳೂ ಇವೆ. ಎಸ್​ಜಿಬಿಗಳಲ್ಲಿನ ಹೂಡಿಕೆಗೆ ತೆರಿಗೆ ಅನ್ವಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ