ಮಹಿಳಾ ಸಮ್ಮಾನ್ vs ಸುಕನ್ಯಾ ಸಮೃದ್ಧಿ: ಯಾವ ಯೋಜನೆ ನಿಮಗೆ ಸೂಕ್ತ? ಇಲ್ಲಿದೆ ಹೋಲಿಕೆ

Mahila Samman Saving Certificate vs Sukanya Samriddhi Yojana: ಮಹಿಳೆಯರಿಗೆಂದು ಸರ್ಕಾರ ರೂಪಿಸಿರುವ ಯೋಜನೆಗಳ ಪೈಕಿ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಜನಪ್ರಿಯವೆನಿಸಿವೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ನಿಶ್ಚಿತ ಠೇವಣಿ ರೀತಿಯ ಹೂಡಿಕೆ ಸ್ಕೀಮ್ ಆಗಿದೆ. ಸುಕನ್ಯಾ ಸಮೃದ್ದಿ ಯೋಜನೆ 21 ವರ್ಷಕ್ಕೆ ಮೆಚ್ಯೂರ್ ಆಗುವ ದೀರ್ಘಾವಧಿ ಹೂಡಿಕೆ ಯೋಜನೆ ಆಗಿದೆ. ಎಸ್​ಎಸ್​ವೈ ಸ್ಕೀಮ್​ನಲ್ಲಿ ಸದ್ಯ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಸಿಗುತ್ತದೆ.

ಮಹಿಳಾ ಸಮ್ಮಾನ್ vs ಸುಕನ್ಯಾ ಸಮೃದ್ಧಿ: ಯಾವ ಯೋಜನೆ ನಿಮಗೆ ಸೂಕ್ತ? ಇಲ್ಲಿದೆ ಹೋಲಿಕೆ
ಹೆಣ್ಮಗು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 07, 2024 | 11:05 AM

ಮಹಿಳೆಯರಿಗೆ ವಿವಿಧ ರೀತಿಯ ಉಳಿತಾಯ ಕಮ್ ಹೂಡಿಕೆ ಸ್ಕೀಮ್​ಗಳಿವೆ. ಹಣ ಉಳಿತಾಯಕ್ಕೆ ಮಹಿಳೆಯರನ್ನು ಉತ್ತೇಜಿಸಲು ಈ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಈ ವಿವಿಧ ವಿಶೇಷ ಮಹಿಳಾ ಕೇಂದ್ರಿತ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಮತ್ತು ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ (Mahila Samman Saving Certificate) ಕೂಡ ಇವೆ. ಎರಡೂ ಕೂಡ ಬೇರೆ ಬೇರೆ ಉದ್ದೇಶಗಳಿಗೆ ಸೂಕ್ತ ಎನಿಸಿವೆ. ಎರಡನ್ನೂ ಕೂಡ ನೀವು ಪಡೆಯಬಹುದು. ಪೋಸ್ಟ್ ಆಫೀಸ್ ಅಥವಾ ಬ್ಯಾಂಕುಗಳಲ್ಲಿ ಈ ಎರಡು ಯೋಜನೆಗಳನ್ನು ಅರಂಭಿಸಲು ಅವಕಾಶ ಇದೆ.

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್

ಇದು ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರ ಆರಂಭಿಸಿದ ಸ್ಕೀಮ್. ಒಂದು ರೀತಿಯಲ್ಲಿ ನಿಶ್ಚಿತ ಠೇವಣಿ ರೀತಿಯದ್ದು. ಮಹಿಳೆ ಅಥವಾ ಬಾಲಕಿಯರ ಹೆಸರಿನಲ್ಲಿ ಠೇವಣಿ ತೆರೆಯಬಹುದು. ಒಂದು ಸಾವಿರ ರೂನಿಂದ ಹಿಡಿದು ಎರಡು ಲಕ್ಷ ರೂವರೆಗೆ ನಿರ್ದಿಷ್ಟ ಮೊತ್ತವನ್ನು ಎರಡು ವರ್ಷ ಕಾಲ ಡೆಪಾಸಿಟ್ ಇಡಬಹುದು. ಇದಕ್ಕೆ ವಾರ್ಷಿಕ ಶೇ 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಸದ್ಯ 2025ರ ಮಾರ್ಚ್ ತಿಂಗಳವರೆಗೂ ಈ ಸ್ಕೀಮ್ ಪಡೆಯಲು ಅವಕಾಶ ಇದೆ.

ಇದನ್ನೂ ಓದಿ: ರಾಜಕೀಯ ಚಾಣಕ್ಯ ಅಮಿತ್ ಶಾ ಹೂಡಿಕೆಯಲ್ಲೂ ಚಾಣಕ್ಯನೇ; 250ಕ್ಕೂ ಹೆಚ್ಚು ಷೇರುಗಳ ಆಯ್ಕೆಗಳಲ್ಲಿ ಬುದ್ಧಿವಂತಿಕೆ ನೋಡಿ

ಸುಕನ್ಯಾ ಸಮೃದ್ಧಿ ಯೋಜನೆ ವಿವರ

ಇದು ಆವರ್ತ ಠೇವಣಿ ರೀತಿಯಲ್ಲಿ ಕಟ್ಟಿಕೊಂಡು ಹೋಗಬಹುದಾದ ದೀರ್ಘಾವಧಿ ಹೂಡಿಕೆ ಸ್ಕೀಮ್ ಆಗಿದೆ. ಹೆಣ್ಮಗುವಿನ ಹೆಸರಿನಲ್ಲಿ ಮಾಡಿಸಬಹುದಾದ ಈ ಯೋಜನೆಯಿಂದ ತೆರಿಗೆ ಲಾಭ ಮತ್ತು ಉತ್ತಮ ಬಡ್ಡಿ ಸಿಗುತ್ತದೆ.

ಒಂದು ವರ್ಷದಲ್ಲಿ 250 ರೂನಿಂದ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ಯೋಜನೆ 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಆದರೆ, ಹೂಡಿಕೆ ಅವಧಿ ಕನಿಷ್ಠ 15 ವರ್ಷ ಇರಬೇಕು. ಬಾಲಕಿ ವಯಸ್ಸು 18 ವರ್ಷ ತುಂಬಿದಾಗ ಯೋಜನೆಯಲ್ಲಿನ ಶೇ. 50ರಷ್ಟು ಹಣವನ್ನು ಹಿಂಪಡೆಯುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಮತ್ತು ಪಿಪಿಎಫ್ ಸ್ಕೀಮ್​ನಲ್ಲಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬ ಗೊಂದಲವಾ? ಇಲ್ಲಿದೆ ಒಂದು ಹೋಲಿಕೆ

ಈ ಯೋಜನೆಯಲ್ಲಿ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಸಿಗುತ್ತದೆ. ಈ ಬಡ್ಡಿ ಹಣವನ್ನು ಸರ್ಕಾರ ಆಗಾಗ್ಗೆ ಪರಿಷ್ಕರಿಸಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಬೆನಿಫಿಟ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:04 am, Tue, 7 May 24

ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ