ಇನ್ಷೂರೆನ್ಸ್ ಪಾಲಿಸಿ ದಾಖಲೆ, ವಿವರ ಬರೆದಿಡುವುದು ಯಾಕೆ ಮುಖ್ಯ? ಅವನ್ನು ಸಂಗ್ರಹಿಸಿಟ್ಟುಕೊಳ್ಳುವ ಕ್ರಮ ಹೇಗೆ? ಇಲ್ಲಿದೆ ಟಿಪ್ಸ್

Maintaining dairy for insurance policies: ಆಪತ್ಕಾಲದಲ್ಲಿ ಹಣಕಾಸಿನ ಭದ್ರತೆ ಇರಲೆಂದು ನಾವೆಲ್ಲಾ ಒಂದಲ್ಲಾ ಒಂದು ವಿಮಾ ಪಾಲಿಸಿಗಳನ್ನು ಖರೀದಿಸಿರುತ್ತೇವೆ. ಪಾಲಿಸಿ ಖರೀದಿ ಮಾಡೋದು ಎಷ್ಟು ಮುಖ್ಯವೋ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ದಾಖಲಿಸಿಡುವುದೂ ಅಷ್ಟೇ ಮುಖ್ಯವಾಗಿರುತ್ತದೆ. ಪಾಲಿಸಿದಾರ ಯಾವುದೋ ಅವಘಡಕ್ಕೆ ಬಲಿಯಾಗಿ ಹೋದರೆ ಅವರನ್ನು ನಂಬಿದ ಕುಟುಂಬ ಸದಸ್ಯರ ಕಥೆ ಏನು? ಹೀಗಾಗಿ, ಪಾಲಿಸಿಯ ಮಾಹಿತಿಯನ್ನು ಸಂಬಂಧಪಟ್ಟವರಿಗೆ ಮೊದಲೇ ಕೊಟ್ಟಿರಬೇಕಾಗುತ್ತದೆ.

ಇನ್ಷೂರೆನ್ಸ್ ಪಾಲಿಸಿ ದಾಖಲೆ, ವಿವರ ಬರೆದಿಡುವುದು ಯಾಕೆ ಮುಖ್ಯ? ಅವನ್ನು ಸಂಗ್ರಹಿಸಿಟ್ಟುಕೊಳ್ಳುವ ಕ್ರಮ ಹೇಗೆ? ಇಲ್ಲಿದೆ ಟಿಪ್ಸ್
ಇನ್ಶ್ಯೂರೆನ್ಸ್‌
Follow us
|

Updated on: May 21, 2024 | 12:22 PM

ನಿಮ್ಮ ಬ್ಯಾಂಕ್ ಹಾಗೂ ಇತರ ಯಾವುದೇ ಹಣಕಾಸು ಯೋಜನೆಗಳ ಪ್ರತಿಯೊಂದು ಮಾಹಿತಿಯನ್ನೂ ಸಂಬಂಧಿಸಿದ ಕುಟುಂಬ ಸದಸ್ಯರಿಗೆ ನೀಡುವುದು ಬಹಳ ಮುಖ್ಯ. ವಿಮಾ ಪಾಲಿಸಿಗೂ (Insurance policy) ಇದು ಅನ್ವಯ ಆಗುತ್ತದೆ. ಪಾಲಿಸಿದಾರ ವಿಮೆ ಕುರಿತ ಮಾಹಿತಿಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳದಿದ್ದರೆ ಅದರಿಂದ ಕುಟುಂಬಕ್ಕೇ ದೊಡ್ಡ ನಷ್ಟ. ಇವತ್ತಿನ ದಿನಗಳಲ್ಲಿ ಯಾರಿಗೆ ಯಾವಾಗ ಯಾವ ಅನಾಹುತ ಆಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಕುಟುಂಬದ ಎಲ್ಲಾ ಸದಸ್ಯರಿಗೂ ಇನ್ಷೂರೆನ್ಸ್, ಬ್ಯಾಂಕ್ ಡೆಪಾಸಿಟ್ ಎಲ್ಲವನ್ನೂ ಮಾಡಿಸಿದ ವ್ಯಕ್ತಿ ಅದರ ಮಾಹಿತಿಯನ್ನು ಅವರ್ಯಾರಿಗೂ ಕೊಟ್ಟಿರುವುದಿಲ್ಲ ಎಂದಿಟ್ಟುಕೊಳ್ಳಿ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಆ ವ್ಯಕ್ತಿ ಇದ್ದಕ್ಕಿದ್ದಂತೆ ಮೃತಪಟ್ಟರೆ ಆ ಕುಟುಂಬ ಏನು ಮಾಡಬೇಕು? ಕುಟುಂಬ ಸದಸ್ಯರ ಸುರಕ್ಷತೆಗೆ ಮಾಡಿಸಿದ ವಿಮೆ ಮತ್ತಿತರ ಹಣಕಾಸು ಯೋಜನೆಗಳು ನೀರಲ್ಲಿ ಹೋಮ ಮಾಡಿದಂತಾಗುತ್ತದೆ.

ಈಗಂತೂ ಬಹಳಷ್ಟು ದಾಖಲೆಗಳು ಎಲೆಕ್ಟ್ರಾನಿಕ್ ರೂಪದಲ್ಲೇ ಉಳಿದುಕೊಂಡುಬಿಡುತ್ತವೆ. ಹೀಗಾಗಿ, ಸ್ಕೀಮ್​ಗಳ ಬಗ್ಗೆ ಕುಟುಂಬ ಸದಸ್ಯರಿಗೆ ಗೊತ್ತಾಗುವುದಿಲ್ಲ. ಇಂತಹ ಯಡವಟ್ಟುಗಳಿಂದಾಗಿಯೇ ಪಾಲಿಸಿದಾರ ಮೃತಪಟ್ಟರೂ ವಿಮಾ ಕಂಪನಿಗಳಿಂದ ಕ್ಲೇಮ್‌ ಮಾಡದ ಪ್ರಕರಣಗಳು ಬೇಕಾದಷ್ಟಿವೆ. ವಿಮಾ ನಿಯಂತ್ರಕ ಸಂಸ್ಥೆ ಐಆರ್‌ಡಿಎ ಮಾಹಿತಿಯಂತೆ ದೇಶದಲ್ಲಿ ವಿಮಾ ಕಂಪನಿಗಳಿಂದ ಕ್ಲೇಮ್ ಪಡೆಯದ ಸಾವಿರಾರು ಪ್ರಕರಣಗಳಿವೆ.

ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್​ಐಸಿಯಲ್ಲಿ ಕ್ಲೇಮ್ ಆಗದೇ ಇರುವ ಇನ್ಷೂರೆನ್ಸ್ ಪಾಲಿಸಿಗಳ ಸಂಖ್ಯೆ 11,000ಕ್ಕೂ ಹೆಚ್ಚಿವೆ. ಖಾಸಗಿ ವಲಯ ಇನ್ಷೂರೆನ್ಸ್ ಕಂಪನಿಗಳೂ ಕೂಡ ಕ್ಲೇಮ್ ಆಗದಿರುವ 5,000ಕ್ಕೂ ಹೆಚ್ಚು ಇನ್ಷೂರೆನ್ಸ್ ಪಾಲಿಸಿಗಳನ್ನು ಹೊಂದಿವೆ. ಹೀಗಾಗಿ, ನೀವು ಹೆಲ್ತ್ ಇನ್ಷೂರೆನ್ಸ್ ಆಗಲೀ ಅಥವಾ ಯಾವುದೇ ಇನ್ಷೂರೆನ್ಸ್ ಆಗಲೀ ಪಾಲಿಸಿ ಮಾಡಿಸಿದ್ದರೆ ಅದರ ಮಾಹಿತಿಯನ್ನು ಸಂಬಂಧ ಪಟ್ಟವರಿಗೆ ತಪ್ಪದೇ ನೀಡಿ.

ಇದನ್ನೂ ಓದಿ: ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸಿಕ್ಕಿತು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ

ಉದಾಹರಣೆಗೆ, ನಿಮ್ಮ ವೈಯಕ್ತಿಕ ಆಕ್ಸಿಡೆಂಟ್ ಪಾಲಿಸಿ ಮಾಡಿಸಿದ್ದರೆ ಅದು ಕುಟುಂಬದವರ ಗಮನಕ್ಕೆ ತಂದಿರಲೇಬೇಕು. ಯಾರ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿದ್ದೀರೋ ಆ ಎಲ್ಲಾ ಪಾಲಿಸಿಗಳ ವಿವರಗಳನ್ನು ಕುಟುಂಬದ ಜತೆ ಹಂಚಿಕೊಳ್ಳಿ. ಆಗ ನಿಮ್ಮ ಕುಟುಂಬವು ಈ ರೀತಿಯ ಯಾತನೆ ಅನುಭವಿಸುವುದು ತಪ್ಪುತ್ತದೆ.

ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ಎಲೆಕ್ಟ್ರಾನಿಕ್‌ ಸ್ವರೂಪದಲ್ಲಿ ಸುರಕ್ಷಿತವಾಗಿರಿಸಲು ಈಗ ನಾನಾ ಬಗೆಯ ಆಯ್ಕೆಗಳಿವೆ. ಅವೆಲ್ಲವೂ ಫ್ರೀಯಾಗಿ ಸಿಗುತ್ತವೆ.

ವಿಮಾ ಪಾಲಿಸಿಗಳ ಹಾರ್ಡ್‌ ಕಾಪಿಗಳನ್ನು ನೀಡೋ ಜತೆಗೆ ಅವುಗಳನ್ನು ಎಲೆಕ್ಟ್ರಾನಿಕ್‌ ಫಾರ್ಮ್ಯಾಟ್‌ನಲ್ಲೂ ಸುರಕ್ಷಿತವಾಗಿರಿಸುವಂತೆ ಐಆರ್‌ಡಿಎ ಎಲ್ಲಾ ವಿಮಾ ಕಂಪನಿಗಳಿಗೆ ನಿರ್ದೇಶಿಸಿದೆ. ಹೀಗಾಗಿ ವಿಮಾದಾರರು ಸಿಎಎಂಎಸ್‌, ಎನ್‌ಎಸ್‌ಡಿಎಲ್‌, ಸಿಡಿಎಸ್‌ಎಲ್‌ ಹಾಗೂ ಕಾರ್ವೆ ಅಂತಹ ರೆಪಾಸಿಟರಿ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟು ಇ-ಅಕೌಂಟ್‌ ತೆರೆದು ಪಾಲಿಸಿಯ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬಹುದು.

ಡಿಜಿಟಲ್‌ ಇಂಡಿಯಾ ಅಭಿಯಾನದಡಿ ಕೇಂದ್ರ ಸರ್ಕಾರವು ಶ್ರೀಸಾಮಾನ್ಯರಿಗೆ ಡಿಜಿಲಾಕರ್‌ ತೆರೆಯಲು ಅವಕಾಶ ಕಲ್ಪಿಸಿದೆ. ಇದು ಸಂಪೂರ್ಣ ಉಚಿತವಾಗಿದೆ. ಈ ಡಿಜಿಲಾಕರ್‌ನಲ್ಲಿನೀವು ಪ್ಯಾನ್‌ ಕಾರ್ಡ್‌, ಡಿಎಲ್‌, ಆಧಾರ್‌ ಕಾರ್ಡ್‌, ವೋಟರ್‌ ಐಡಿ ಹೀಗೆ ಎಲ್ಲವನ್ನೂ ಸ್ಕ್ಯಾನ್‌ ಮಾಡಿ ಸುರಕ್ಷಿತವಾಗಿರಿಸಬಹುದು. ಬೇಕಾದಾಗ ಒಂದೇ ಕ್ಲಿಕ್‌ನಲ್ಲಿ ಡಿಜಿಲಾಕರ್‌ ಪ್ರವೇಶಿಸಿ ನಿಮ್ಮ ದಾಖಲೆಗಳನ್ನು ತೋರಿಸಬಹುದು. ಸರ್ಕಾರ ಒದಗಿಸುವ ಈ ಸೇವೆಯನ್ನು ಆಪ್‌ ಮೂಲಕವೂ ಪಡೆದುಕೊಳ್ಳಬಹುದು. ‘

ಇದನ್ನೂ ಓದಿ: ಬ್ರಿಟನ್​ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ

ಇನ್ಶ್ಯೂರೆನ್ಸ್‌ ಅನ್ನು ಎಲೆಕ್ಟ್ರಾನಿಕ್ಸ್‌ ರೂಪದಲ್ಲಿ ಇರಿಸಿ

ನಿಮ್ಮ ವಿಮಾ ಪಾಲಿಸಿಯ ದಾಖಲೆಗಳ ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ಡಿಜಿ ಲಾಕರ್‌ನಲ್ಲಿ ಇಡಬಹುದು. ನಿಮ್ಮ ಮೊಬೈಲ್‌ನಿಂದ ಡಿಜಿಲಾಕರ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇವುಗಳ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳಿ.

ಫೈಲ್‌ ಮಾಡಿ ಇಡಿ

ನೀವೇನಾದರೂ ಇಂಟರ್ನೆಟ್‌ ಬಳಸದಿದ್ದರೆ, ವಿಮೆ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಚ್ಚುಕಟ್ಟಾಗಿ ಫೈಲ್‌ ಮಾಡಿ ಇಡಿ. ಇದರ ಜತೆಗೆ ಡೈರಿಯಲ್ಲಿ ಪಾಲಿಸಿಯ ಎಲ್ಲ ವಿವರಗಳನ್ನು ಬರೆದಿಡಿ. ನೀವು ಈ ದಾಖಲೆಗಳನ್ನು ಎಲ್ಲಿ ಇಟ್ಟಿರುತ್ತೀರಿ ಎಂಬುದನ್ನು ಕುಟುಂಬದ ಎಲ್ಲ ಸದಸ್ಯರಿಗೂ ತಿಳಿಸಿರಿ.

(ಮಾಹಿತಿ ನೆರವು: ಮನಿ9)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ