AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸಿಕ್ಕಿತು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ

SEBI grants additional time for LIC to achieve 10% shareholding: ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯಾದ ಎಲ್​ಐಸಿ ತನ್ನ ಸಾರ್ವಜನಿಕ ಷೇರುಪಾಲನ್ನು ಶೇ. 10ಕ್ಕೆ ಹೆಚ್ಚಿಸಿಕೊಳ್ಳಲು ಇನ್ನೂ ಮೂರು ವರ್ಷ ಹೆಚ್ಚುವರಿ ಕಾಲಾವಕಾಶ ಪಡೆದಿದೆ. 2022ರ ಮೇ ತಿಂಗಳಲ್ಲಿ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಿದ ಎಲ್​ಐಸಿ ಇದೇ ಮೇ 16ರೊಳಗೆ ತನ್ನ ಸಾರ್ವಜನಿಕ ಷೇರುಪಾಲನ್ನು ಶೇ. 3.5ರಿಂದ ಶೇ. 10ಕ್ಕೆ ಹೆಚ್ಚಿಸಬೇಕಿತ್ತು. ಇನ್ನೂ ಆಗಿಲ್ಲ. ಸೆಬಿ ಈಗ ಗಡುವು ಹೆಚ್ಚಿಸಿದೆ. 2027ರ ಮೇ 16ರೊಳಗೆ ಎಲ್​ಐಸಿ ಇನ್ನೂ 41 ಕೋಟಿಗೂ ಹೆಚ್ಚು ಷೇರುಗಳನ್ನು ಮಾರಾಟ ಮಾಡಬೇಕಾಗುತ್ತದೆ.

ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸಿಕ್ಕಿತು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2024 | 12:03 PM

Share

ನವದೆಹಲಿ, ಮೇ 15: ಎಲ್​ಐಸಿ ಷೇರುಬೆಲೆ ಇವತ್ತು ಬುಧವಾರ ಭರ್ಜರಿಯಾಗಿ ಏರುತ್ತಿದೆ. ಸಾರ್ವಜನಿಕರ ಷೇರುಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸೆಬಿ 3 ವರ್ಷ ಹೆಚ್ಚುವರಿ ಕಾಲಾವಕಾಶ ಕೊಟ್ಟಿದೆ. ಇದರ ಬೆನ್ನಲ್ಲೇ ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯ ಷೇರು ಬೇಡಿಕೆ ಪಡೆದಿದೆ. ಸದ್ಯ ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೆ. 96.5ರಷ್ಟಿದ್ದರೆ, ಸಾರ್ವಜನಿಕರ ಷೇರುಪಾಲು (public shareholding) ಶೇ. 3.5ರಷ್ಟಿದೆ. 1957ರ ಸೆಕ್ಯೂರಿಟೀಸ್ ಕಾಂಟ್ರಾಕ್ಟ್ಸ್ ನಿಯಮಗಳ 19(2)(ಬಿ)(4) ರೂಲ್ ಪ್ರಕಾರ (Securities contracts rules) ಪಬ್ಲಿಕ್ ಶೇರ್​ಹೋಲ್ಡಿಂಗ್ ಅನ್ನು ಶೇ. 10ಕ್ಕೆ ಹೆಚ್ಚಿಸಬೇಕಿದೆ. ಲಿಸ್ಟ್ ಆದ ಎರಡು ವರ್ಷದೊಳಗೆ ಈ ಕೆಲಸ ಆಗಬೇಕು. ಎಲ್​ಐಸಿ 2022ರ ಮೇ 17ರಂದು ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಲಿಸ್ಟ್ ಆಗಿತ್ತು. ಅದರಂತೆ 2024ರ ಮೇ 16ರೊಳಗೆ ಪಬ್ಲಿಕ್ ಶೇರ್​ಹೋಲ್ಡಿಂಗ್ ಶೇ. 10 ಆಗಬೇಕಿತ್ತು. ಅದಿನ್ನೂ ಆಗಿಲ್ಲ. ಇದೀಗ 2027ರ ಮೇ 16ರವರೆಗೂ ಎಲ್​ಐಸಿಗೆ ಕಾಲಾವಕಾಶ ಕೊಡಲಾಗಿದೆ.

ಎಲ್​ಐಸಿ ಭಾರೀ ನಿರೀಕ್ಷೆಯಲ್ಲಿ 2024ರ ಮೇ ತಿಂಗಳಲ್ಲಿ ಐಪಿಒಗೆ ಆಗಮಿಸಿತು. 949 ರೂಗೆ ಷೇರು ಬಿಕರಿಯಾಗಿತ್ತು. ಒಟ್ಟು ಶೇ. 3.5ರಷ್ಟು ಷೇರು, ಅಂದರೆ 22.14 ಕೋಟಿ ಷೇರುಗಳು ಮಾರಾಟವಾದವು. ಆದರೆ, ಐಪಿಒ ಬಳಿಕ ಅದರ ಜಿಎಂಪಿ ಕುಸಿತ ಕಂಡಿತ್ತು. ಅಂತಿಮವಾಗಿ 867.20 ರೂಗೆ ಅದರ ಷೇರುಗಳು ಲಿಸ್ಟ್ ಆದವು. 2023ರ ನವೆಂಬರ್ ತಿಂಗಳಿಂದ ಅದರ ಷೇರಿಗೆ ಬೇಡಿಕೆ ಬಂದಿದೆ. 614 ರೂ ಇದ್ದ ಅದರ ಬೆಲೆ ಇದೀಗ 977 ರೂ ದಾಟಿದೆ. ಒಟ್ಟಾರೆ ಎರಡು ವರ್ಷದಲ್ಲಿ ಎಲ್​ಐಸಿ ಷೇರುಬೆಲೆ ಶೇ 18ರಷ್ಟು ಹೆಚ್ಚಾಗಿದೆ. ಹೂಡಿಕೆದಾರರಿಗೆ ಅಷ್ಟೇನೂ ದೊಡ್ಡ ಲಾಭ ತಂದುಕೊಡದೇ ಹೋದರೂ ಮುಂದಿನ ದಿನಗಳಲ್ಲಿ ಅದರ ಷೇರುಬೆಲೆ ಗಣನೀಯವಾಗಿ ಹೆಚ್ಚಬಹುದು ಎಂದು ಹೇಳಲಾಗುತ್ತಿದೆ.

ಎಲ್​ಐಸಿ ಒಟ್ಟು 632,49,97,701 (632.50) ಕೋಟಿ ಷೇರುಗಳನ್ನು ಹೊಂದಿದೆ. ಇದರಲ್ಲಿ ಸುಮಾರು 22 ಕೋಟಿಯಷ್ಟು ಷೇರುಗಳು ಸಾರ್ವಜನಿಕರಿಗೆ ಮಾರಾಟವಾಗಿವೆ. ಶೇ. 10ರಷ್ಟು ಷೇರು ಸಾರ್ವಜನಿಕರ ಪಾಲಾಗಬೇಕು ಎಂದರೆ ಇನ್ನೂ 41.11 ಕೋಟಿಗೂ ಹೆಚ್ಚು ಷೇರುಗಳನ್ನು ಎಲ್​ಐಸಿ ಬಿಕರಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಹೊಸ ಇಪಿಎಫ್​ಒ ಆಟೊ ಸೆಟಲ್ಮೆಂಟ್ ನಿಯಮ; ಸುಲಭವಾಗಿ ಹಣ ಹಿಂಪಡೆಯಿರಿ

ಸೆಬಿ ನಿಯಮ ಪ್ರಕಾರ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಒಂದು ಕಂಪನಿಯ ಸಾರ್ವಜನಿಕ ಷೇರುಪಾಲು ಶೇ. 25ರಷ್ಟು ಇರಬೇಕು ಎಂದಿದೆ. ಅಂದರೆ, ಮಾಲೀಕರು ಅಥವಾ ಪ್ರೊಮೋಟರ್ಸ್ ಅಲ್ಲದವರು ಶೇ. 25ರಷ್ಟು ಷೇರು ಮಾಲಕತ್ವ ಹೊಂದಿರಬೇಕು. ಇದರಲ್ಲಿ ಜನಸಾಮಾನ್ಯರಿರುವ ರೀಟೇಲ್ ಹೂಡಿಕೆದಾರರು, ಸಾಂಸ್ಥಿಕ ಹೂಡಿಕೆದಾರರು ಮೊದಲಾದವರು ಸೇರುತ್ತಾರೆ. ಐಪಿಒಗೆ ಬಂದು ಎರಡು ವರ್ಷದಲ್ಲಿ ಸಾರ್ವಜನಿಕ ಷೇರುಪಾಲು ಶೇ. 10ರಷ್ಟಾದರೂ ಇರಬೇಕು. ಬಳಿಕ ಅದನ್ನು ಹೆಚ್ಚಿಸಲು ಅವಕಾಶ ಇರುತ್ತದೆ. ಈಗ ಎಲ್​ಐಸಿಗೆ ಸೆಬಿ ಹೆಚ್ಚಿನ ಕಾಲಾವಕಾಶ ಕೊಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ